ಕರ್ನಾಟಕದ ರೇಷ್ಮೆ ಗೂಡಿನ ಬೆಲೆ ದಿಢೀರ್ ಕುಸಿತ: ಇಲ್ಲಿದೆ ಕಾರಣ..

ರೇಷ್ಮೆ ಬೆಲೆ ದಿಢೀರ್ ಕುಸಿತದಿಂದ ರೇಷ್ಮೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ರೇಷ್ಮೆ ಗೂಡಿಗೆ ಅರ್ಧದಷ್ಟು ಬೆಲೆ ಕಡಿತವಾಗಿದೆ. ರೈತರು ಇದೀಗ ಬೆಂಬಲ ಬೆಲೆಗಾಗಿ ಸರ್ಕಾರದ ಮೊರೆ ಹೋಗಿದ್ದಾರೆ.

China silk imports to India Sudden fall in price of silk cocoons in Karnataka sat

ವರದಿ- ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್ 

ರಾಮನಗರ (ಜು.08): ರೇಷ್ಮೆ ಬೆಲೆ ದಿಢೀರ್ ಕುಸಿತದಿಂದ ರೇಷ್ಮೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ರೇಷ್ಮೆ ಗೂಡಿಗೆ ಅರ್ಧದಷ್ಟು ಬೆಲೆ ಕಡಿತವಾಗಿದೆ. ಸಾಲಸೋಲ ಮಾಡಿ ಬೆಳೆ ಬೆಳೆದಿದ್ದ ರೈತರು ಇದೀಗ ಬೆಂಬಲ ಬೆಲೆ ನೀಡುವಂತೆ ಸರ್ಕಾರದ ಮೊರೆ ಹೋಗಿದ್ದಾರೆ.

ಬೆಂಬಲ ಬೆಲೆ ನೀಡುವಂತೆ ಸರ್ಕಾರಕ್ಕೆ ರೈತರು ಒತ್ತಾಯ: ಮುಂಗಾರು ಮಳೆ ಕೊರತೆ ಹಾಗೂ ದಲ್ಲಾಳಿಗಳ ಕಿರುಕುಳದಿಂದ ಬೇಸತ್ತಿದ್ದ ರೇಷ್ಮೆ ಬೆಳೆಗಾರರಿಗೆ ಇದೀಗ ಬೆಲೆ ಕುಸಿತದ ಶಾಕ್ ತಟ್ಟಿದೆ. ರೇಷ್ಮೆ ಗೂಡಿನ ದಿಢೀರ್ ಬೆಲೆ ಕುಸಿತಕ್ಕೆ ರೇಷ್ಮೆ ಬೆಳೆಗಾರರು ಕಂಗಾಲಾಗಿದ್ದಾರೆ. ಉತ್ಪಾದನೆ ಹೆಚ್ಚಳ ಹಾಗೂ ಚೀನಾದಿಂದ ರೇಷ್ಮೆ ಆಮದು ಮಾಡಿಕೊಳ್ಳುತ್ತಿರುವ ಹಿನ್ನೆಲೆ ರಾಜ್ಯದ ರೇಷ್ಮೆಗೆ ಅರ್ಧದಷ್ಟು ಬೆಲೆ ಕುಸಿತವಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ರೇಷ್ಮೆ ನೂಲು ಆಮದಾಗಿರುವುದು ರೇಷ್ಮೆ ಬೆಳೆಗಾರರಿಗೆ ನುಂಗಲಾರದ ತುತ್ತಾಗಿದೆ. ಮೊದಲೇ ಮಧ್ಯವರ್ತಿಗಳ ಹಾವಳಿಯಿಂದ ಸೂಕ್ತ ಬೆಲೆ ಸಿಗದೇ ಒದ್ದಾಡುತ್ತಿದ್ದ ರೈತರಿಗೆ ಈಗ ಕಣ್ಣೀರು ಹಾಕುವ ಪರಿಸ್ಥಿತಿ ಎದುರಾಗಿದೆ.

ಗೃಹಜ್ಯೋತಿ ಅರ್ಜಿ ಸ್ಥಿತಿ ತಿಳಿಯಲು ಪ್ರತ್ಯೇಕ ಲಿಂಕ್‌ ಬಿಡುಗಡೆ: ಮೊಬೈಲ್‌ನಲ್ಲೇ ಪರಿಶೀಲನೆ ಮಾಡಿ

ಏಷ್ಯಾದಲ್ಲೇ ಅತೊದೊಡ್ಡ ಮಾರುಕಟ್ಟೆ:  ಏಷ್ಯಾದಲ್ಲೇ ಅತಿಹೆಚ್ಚು ರೇಷ್ಮೆ ಗೂಡಿನ ವಹಿವಾಟು ನಡೆಯುವ ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ಕಳೆದ ವರ್ಷ ಉತ್ತಮವಾದ ದರ ಸಿಕ್ಕಿತ್ತು. ಆದರೆ ಈ ವರ್ಷ ದ್ವಿತಳಿ ಹಾಗೂ ಬೈ ವೋಲ್ಟಿನ್ ಗೂಡುಗಳನ ದರ ಅರ್ಧದಷ್ಟು ಕಡಿತವಾಗಿದರ. ಈ ಹಿಂದೆ ಬೈ ವೋಲ್ಟಿನ್ ರೇಷ್ಮೆ ಪ್ರತಿ ಕೆಜಿಗೆ 550 ರಿಂದ 600 ರೂ ಧಾರಣೆ ಇತ್ತು. ಆದರೆ ಈಗ 250ರಿಂದ 350 ರೂ ಗೆ ಕುಸಿತ ಕಂಡಿದೆ.

ಹಾಗೆಯೇ ದ್ವಿತಳಿ‌ ಗೂಡಿನ ದರ ಹಿಂದೆ 950ರಿಂದ 1000 ರೂ ಇತ್ತು. ಇದೀಗ ಕೇವಲ 550 ರಿಂದ 650 ರೂ ಗೆ ಕುಸಿತ ಕಂಡಿದೆ. ಇದರ ಮಧ್ಯೆ ರೇಷ್ಮೆ ಗೂಡಿನಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಇದ್ರೂ ದಲ್ಲಾಳಿಗಳು ಗೂಡು ಮುಟ್ಟೋದಿಲ್ಲ. ಒಂದು ಕೆ.ಜೆ.ರೇಷ್ಮೆ ಬೆಳೆಯಲು ರೈತರಿಗೆ ಸುಮಾರು 500ರೂ ವೆಚ್ಚ ತಲುಲಲಿದ್ದು ಪ್ರಸಕ್ತ ದರಕ್ಕೆ ಮಾರಾಟ ಮಾಡಿದ್ರೆ ಹೆಚ್ಚನ ನಷ್ಟ ಉಂಟಾಗಲಿದೆ. ಹಾಗಾಗಿ ದಿಕ್ಕುಕಾಣದ ರೈತರು ಸರ್ಕಾರ ಸೂಕ್ತ ಬೆಂಬಲ ಬೆಲೆ ನೀಡುವಂತೆ ಮನವಿ ಮಾಡಿದ್ದಾರೆ.

ಕೇಂದ್ರದ ವಿದ್ಯುತ್‌ ತಿದ್ದುಪಡಿ ಮಸೂದೆಗೆ ಪವರ್‌ ಇಂಜಿನಿಯರ್ಸ್‌ಗಳ ವಿರೋಧ

ಚೀನಾದ ರೇಷ್ಮೆ ಆಮದಿನಿಂದಾಗಿ ಬೆಲೆ ಕುಸಿತ: ಇನ್ನೂ ರೇಷ್ಮೆ ಗೂಡಿನ ದರ ದಿಢೀರ್ ಕುಸಿತ ಕಾಣಲು ಚೀನಾ ರೇಷ್ಮೆ ಕಾರಣ ಎನ್ನಲಾಗುತ್ತಿದೆ. ಕಳೆದ ವರ್ಷ ಚೀನಾದಿಂದ ಒಟ್ಟು 1800 ಮೆಟ್ರಿಕ್‌ ಟನ್‌ ರೇಷ್ಮೆ ಆಮದು ಮಾಡಿಕೊಳ್ಳಲಾಗಿತ್ತು. ಆದರೆ, ಈ ವರ್ಷ ಕಳೆದ ಬಾರಿಗಿಂತ ಎರಡು ಪಟ್ಟು ಹೆಚ್ಚು ಆಮದು ಮಾಡಲಾಗಿದ್ದು ಅಂದಾಜು 3300 ಮೆಟ್ರಿಕ್‌ ಟನ್‌ ಗೂಡು ಪಕ್ಕದ ದೇಶದಿಂದ ಭಾರತಕ್ಕೆ ಆಗಮಿಸಿದೆ. ದೊಡ್ಡ ಪ್ರಮಾಣದಲ್ಲಿ ಸಿದ್ಧ ರೇಷ್ಮೆ ನೂಲು ಮಾರುಕಟ್ಟೆ ಪ್ರವೇಶಿಸಿರುವ ಕಾರಣ ದೇಶೀಯ ರೇಷ್ಮೆ ಗೂಡಿಗೆ ಸೂಕ್ತ ಬೆಲೆ ಇಲ್ಲದಂತಾಗಿದೆ. ಅಲ್ಲದೇ ಈ ಬಾರಿ ನಮ್ಮಲ್ಲಿಯೂ ರೇಷ್ಮೆ ಉತ್ಪಾದನೆ ದುಪ್ಪಟ್ಟಾಗಿರೋದು ದರ ಇಳಿಕೆಗೆ ಕಾರಣವಾಗಿದೆ.

ಒಟ್ಟಾರೆ ಮೊದಲೇ ಸಂಕಷ್ಟದಲ್ಲಿದ್ದ ರೇಷ್ಮೆ ಬೆಳೆಗಾರರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಕೂಡಲೇ ಸರ್ಕಾರ ರೇಷ್ಮೆಗೆ ಬೆಂಬಲ ಬೆಲೆ ನೀಡುವ ಮೂಲಕ ರೇಷ್ಮೆ ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಒತ್ತಾಯವಾಗಿದೆ.

Latest Videos
Follow Us:
Download App:
  • android
  • ios