Asianet Suvarna News Asianet Suvarna News

ಮೈಸೂರು ಬಳಿಕ ಕಾಫಿನಾಡಲ್ಲಿ ಮಹಿಷಾ ದಸರಾ: ಇಲ್ಲಿಗೂ ಬರ್ತಾನಾ ಮುಖ್ಯ ಅತಿಥಿಯಾಗಿ ಭಗವಾನ್?

ರಾಜ್ಯದ ಉದ್ದಗಲಕ್ಕೂ ಮಹಿಷಾ ದಸರಾದ ವಾದ-ವಿವಾದ ಜೋರಾಗ್ತಿದೆ. ಮಹಿಷಾ ದಸರಾದ ಪರ-ವಿರೋಧ ಎರಡು ಗುಂಪುಗಳು ಮಾತಿನ ಯುದ್ಧಕ್ಕೆ ಇಳಿದಿವೆ. ಆದ್ರೆ, ಕಾಫಿನಾಡಲ್ಲಿ ದಲಿತ ಹಾಗೂ ಪ್ರಗತಿ ಪರ ಸಂಘಟನೆಗಳು ಜಿಲ್ಲಾಡಳಿತದ ವಿರೋಧ ಮಧ್ಯೆಯೂ ಮಹಿಷಾ ದಸರಾ ಮಾಡಿಯೇ ತೀರುತ್ತೇವೆ ಎಂದು ಶಪಥಗೈದಿದ್ದಾರೆ. 

Chikmagalur Mahisha dasara  Pro Hindu organizations outraged rav
Author
First Published Oct 19, 2023, 7:20 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಅ.19) : ರಾಜ್ಯದ ಉದ್ದಗಲಕ್ಕೂ ಮಹಿಷಾ ದಸರಾದ ವಾದ-ವಿವಾದ ಜೋರಾಗ್ತಿದೆ. ಮಹಿಷಾ ದಸರಾದ ಪರ-ವಿರೋಧ ಎರಡು ಗುಂಪುಗಳು ಮಾತಿನ ಯುದ್ಧಕ್ಕೆ ಇಳಿದಿವೆ. ಆದ್ರೆ, ಕಾಫಿನಾಡಲ್ಲಿ ದಲಿತ ಹಾಗೂ ಪ್ರಗತಿ ಪರ ಸಂಘಟನೆಗಳು ಜಿಲ್ಲಾಡಳಿತದ ವಿರೋಧ ಮಧ್ಯೆಯೂ ಮಹಿಷಾ ದಸರಾ ಮಾಡಿಯೇ ತೀರುತ್ತೇವೆ ಎಂದು ಶಪಥಗೈದಿದ್ದಾರೆ. 

ಜಿಲ್ಲಾಡಳಿತ ಜಿಲ್ಲಾದ್ಯಂತ ಮಹಿಷಾ ಸಂಬಂಧ ಆರು ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಿದೆ. ಆದ್ರೆ, ದಲಿತ ಸಂಘಟನೆಗಳು ಔಟ್‌ಡೂರ್‌ನಲ್ಲಿದ್ದ ನಿಷೇಧಿಸಿದ್ದ ಕಾರ್ಯಕ್ರಮವನ್ನ ಇನ್‌ಡೂರ್‌ನಲ್ಲಿ ನಡೆಸೋಕೆ ಮುಂದಾಗಿದ್ದು, ನಾಳೆ ಕಾಫಿನಾಡಲ್ಲಿ ಮಹಿಷಾ ದಸರಾ ನಡೆಯೋದು ಪಕ್ಕಾ ಆಗಿದೆ. 

ಉಡುಪಿಯಲ್ಲಿ ಮಹಿಷಾ ದಸರಾ ಬದಲಿಗೆ ಮಹಿಶೋತ್ಸವ ಆಚರಣೆ: ಜಯನ್ ಮಲ್ಪೆ

ಮೈಸೂರಿನಲ್ಲಿ ಆರಂಭಗೊಂಡ ಮಹಿಷಾ ದಸರಾ ವಿವಾದ ಕಡಲತಡಿ ಉಡುಪಿಗೆ ಹೋಗಿ ಈಗ ಕಾಫಿನಾಡು ಚಿಕ್ಕಮಗಳೂರಿಗೂ ಕಾಲಿಟ್ಟಿದೆ. ಆದ್ರೆ, ಈಗೀಗ ಈ ವಿವಾದದ ದಸರಾ ನಾಡಿನ ಉದ್ದಗಲಕ್ಕೂ ಕಾಲಿಟ್ಟಿದೆ. ಆದ್ರೆ, ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಹಿಷಾ ದಸರಾದ ವಾದ-ವಿವಾದ ಕಂಡು ಮುಂಜಾಗೃತವಾಗಿ ಕ್ರಮವಾಗಿ ಜಿಲ್ಲಾಡಳಿತ ಆರು ದಿನಗಳ ಕಾಲ ನಿಷೇಧಾಜ್ಞೆ ಹೇರಿದೆ. ಆದ್ರೆ, ಸರ್ಕಾರದ ನಿಷೇಧದ ಮಧ್ಯೆಯೂ ದಲಿತ ಹಾಗು ಪ್ರಗತಿಪರ ಸಂಘಟನೆಗಳು ಮಹಿಷ ದಸರಾಕ್ಕೆ ಮುಂದಾಗಿವೆ. ಹನುಮಂತಪ್ಪ ವೃತ್ತದಿಂದ ಮೆರವಣಿಗೆ ಹೋಗಿ ಆಜಾದ್ ಪಾರ್ಕ್ನಲ್ಲಿ ಸಮಾವೇಶದ ಮೂಲಕ ಮುಗಿಸಲು ಮುಂದಾಗಿದ್ದರು. ಆದ್ರೆ, ಜಿಲ್ಲಾಡಳಿದ ನಿಷೇಧಾಜ್ಞೆ ಮಧ್ಯೆಯೂ ಹಿರೇಮಗಳೂರಿನ ಸಮುದಾಯ ಭವನದಲ್ಲಿ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸಿದ್ದಾರೆ. ಆದ್ರೆ, ಮಹಿಷ ದಸರಾಕೆ ವಿರೋಧ ಮಾಡಿದ್ದ ಬಿಜೆಪಿ ನಾಳೆ ಯಾವ ರೀತಿ ಹೋರಾಟ ಮಾಡುತ್ತೆ ಕಾದು ನೋಡ್ಬೇಕು. 

ಮುಖ್ಯ ಅತಿಥಿಗಳು ಬರುವುದು ಅನುಮಾನ 

ಇನ್ನು ಮಹಿಷಾ ದಸರಾ ಸಮಿತಿ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಕಾರ್ಯಕ್ರಮದ ಉದ್ಘಾಟಕರಾಗಿ ಪ್ರೋ ಭಗವಾನ್ ಆಗಮಿಸಲಿದ್ದಾರೆ.ಆದ್ರೆ, ಭಗವಾನ್ ಆಗಮನಕ್ಕೆ ಶ್ರೀರಾಮಸೇನೆ ಹಾಗೂ ಒಕ್ಕಲಿಗರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.ಇದರ ನಡುವೆ ಮುಖ್ಯ ಆತಿಥಿಗಳು ಬರುವುದು ಅನುಮಾನವಾಗಿದ್ದು ಮತ್ತೊಂದೆಡೆ ಮಹಿಷ ದಸರಾ ಸಂಬಂಧ ಜಿಲ್ಲಾಡಳಿತವೇ ನಿಷೇಧಾಜ್ಞೆ ಜಾರಿ ಮಾಡಿದ್ರೂ ದಲಿತ ಸಂಘಟನೆಗಳು ಮಹಿಷ ದಸರಾಕೆ ಮುಂದಾಗಿವೆ. ಆತ ಆದಿಪುರುಷ. ಮಹಾರಾಜ. ಅವರ ಒಳ್ಳೆಯ ಕೆಲಸವನ್ನ ಜನರಿಗೆ ಹೇಳುವ ಕೆಲಸ ಮಾಡಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟ ಕೂಡ ಮನವಿ ಮಾಡಿದ್ದು, ಮಹಿಷಾಸುರನನ್ನ ಸುಡೋದಕ್ಕೂ ವಿರೋಧ ವ್ಯಕ್ತಪಡಿಸಿವೆ. 

 

ಮಹಿಷ ದಸರಾ ಆಚರಣೆ: ಚಿಕ್ಕಮಗಳೂರಲ್ಲಿ ನಿಷೇದಾಜ್ಞೆ ಜಾರಿ

ಜಿಲ್ಲೆಯಲ್ಲಿ ಮಹಿಷಾ ದಸರಾಕ್ಕೆ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದಾರೆ. ದಲಿತ ಸಂಘಟನೆಗಳು ಮಹಿಷ ದಸರಾಕ್ಕೆ ಯಾರಾದ್ರು ವಿರೋಧ ವ್ಯಕ್ತಪಡಿಸಿದರೆ ಪರಿಸ್ಥಿತಿಯನ್ನ ಎದುರಿಸಲು ನಾವು ಸಿದ್ಧ ಎಂದು ಎಚ್ಚರಿಕೆ ನೀಡಿವೆ. ಒಟ್ಟಾರೆ, ಕಾಫಿನಾಡಿಗೆ ಕೆ.ಎಸ್. ಭಗವಾನ್ ಆಗಮಿಸೋದ್ರ ಬಗ್ಗೆ ಪರ-ವಿರೋಧ ಶುರುವಾಗಿದೆ. ಹಿಂದೂ ಸಂಘಟನೆ ಹಾಗೂ ಒಕ್ಕಲಿಗರು ಭಗವಾನ್ ಜಿಲ್ಲೆಗೆ ಬರೋದೇ ಬೇಡ ಅಂತಿದ್ದಾರೆ. ದಲಿತ ಸಂಘಟನೆಗಳು ಬಂದೇ ಬರ್ತಾರೆ. ಕಾರ್ಯಕ್ರಮ ಮಾಡೇ ಮಾಡ್ತೀವಿ ಅಂತಿದ್ದಾರೆ. 

ಎರಡು ಸಂಘಟನೆಗಳು ಜಿಲ್ಲಾಡಳಿತಕ್ಕೆ ಮನವಿ ಮಾಡಿವೆ. ದಲಿತ ಸಂಘಟನೆ, ಹಿಂದೂಪರ ಸಂಘಟನೆಗಳು ಪ್ರತಿಷ್ಠೆಗೆ ಬಿದ್ದಿದ್ದು ಮುಂಜಾಗೃತ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ನಾಳೆ ಏನಾಗಲಿದೆಯೋ ಕಾದು ನೋಡಬೇಕು.

Follow Us:
Download App:
  • android
  • ios