ಚಿಕ್ಕಮಗಳೂರಿನಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ 56 ಕಾಡ್ಗಿಚ್ಚು ಪ್ರಕರಣಗಳು ವರದಿಯಾಗಿದ್ದು, ನೂರಾರು ಎಕರೆ ಅರಣ್ಯ ನಾಶವಾಗಿದೆ. ಕಿಡಿಗೇಡಿಗಳ ಕೃತ್ಯದಿಂದ ಅರಣ್ಯಕ್ಕೆ ಬೆಂಕಿ ಬಿದ್ದಿರುವುದು ಅತೀ ಹೆಚ್ಚು ಎಂದು ಅರಣ್ಯ ಇಲಾಖೆ ವರದಿಯಿಂದ ತಿಳಿದುಬಂದಿದೆ.

ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್ 
ಚಿಕ್ಕಮಗಳೂರು (ಮಾ.12):
ತಂಪಾದ ವಾತಾವರಣಕ್ಕೆ ಪ್ರಸಿದ್ಧಿಯಾಗಿದ್ದ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇದೀಗ ಹಾಟ್ ಕ್ಲೈಮೇಟ್ ಶುರುವಾಗಿದ್ದು, ಬೇಸಿಗೆ ಆರಂಭಕ್ಕೂ ಮುನ್ನವೇ 56 ಕಾಡ್ಗಿಚ್ಚು ಪ್ರಕರಣಗಳು ವರದಿಯಾಗಿದ್ದು, ನೂರಾರು ಎಕರೆ ಅರಣ್ಯ ನಾಶವಾಗಿದೆ. 

ಈವರೆಗೆ ಮೂನ್ನೂರಕ್ಕೂ ಹೆಚ್ಚು ಸೋಲಾರಣ್ಯ ಬೆಂಕಿಗೆ ನಾಶವಾಗಿದ್ದು ಜನವರಿಯಿಂದ ಈವರೆಗೆ ಎರಡೇ ತಿಂಗಳಲ್ಲಿ 56 ಕಾಡ್ಗಿಚ್ಚು ಪ್ರಕರಣಗಳು ದಾಖಲಾಗಿದೆ. ಬೇಸಿಗೆಯ ಆರಂಭದ ದಿನಗಳಲ್ಲೇ ಅತೀ ಹೆಚ್ಚು ಕಾಡ್ಗಿಚ್ಚು ಪ್ರಕರಣಗಳಲ್ಲಿ ಮಳೆ ನೀರು ಶೇಖರಿಸೋ ಶೋಲಾರಣ್ಯಕ್ಕೆ ಕಂಟಕ ಎದುರಾಗುತ್ತಿದೆ. ಒಂದಡೆ ಬಿಸಿಲಿನ ತಾಪದಿಂದ ಬೆಂಕಿ ಕಾಣಿಸಿಕೊಳ್ಳುತ್ತಿದ್ದರೆ ಮತ್ತೊಂದಡೆ ಕಿಡಿಗೇಡಿಗಳ ಕೃತ್ಯ ಒಂದು ಭಾಗವಾಗಿದೆ. 56 ಕಾಡ್ಗಿಚ್ಚಿನ ಪ್ರಕರಣದಲ್ಲಿ ಕಿಡಿಗೇಡಿಗಳ ಕೃತ್ಯದಿಂದ ಅರಣ್ಯಕ್ಕೆ ಬೆಂಕಿ ಬಿದ್ದಿರುವುದೇ ಅತೀ ಹೆಚ್ಚು ಎಂದು ಅರಣ್ಯ ಇಲಾಖೆ ವರದಿಯಿಂದ ತಿಳಿದುಬಂದಿದೆ.

ಜಲ ಮೂಲಕ್ಕೆ ಕಂಟಕ : ಬೇಸಿಗೆಯ ಆರಂಭದ ದಿನಗಳದಲ್ಲಿ ಅರಣ್ಯ ಪ್ರದೇಶದಲ್ಲಿಯೇ ಅತೀ ಹೆಚ್ಚು ಬೆಂಕಿ ಪ್ರಕರಣಗಳು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಂಡುಬರುತ್ತಿವೆ. ರಾತ್ರಿ, ಹಗಲು ಎಲ್ಲಿ, ಯಾವಾಗ ಬೆಂಕಿ ಬಿಳುತ್ತೋ ಎಂದು ಅರಣ್ಯ ಇಲಾಖೆಯ ಸಿಬ್ಬಂದಿಗಳು ಆತಂಕದಲ್ಲಿ ದಿನಗಳನ್ನು ಕಳೆಯುತ್ತಿದ್ದಾರೆ. ಕಳೆದ ಎರಡು ತಿಂಗಳಿನಿಂದ ಕಾಫಿನಾಡಿನ ಶೋಲಾರಣ್ಯ ಬಿಸಿಲ ತಾಪ ಕೆಂಡಂದಂತಾಗಿದೆ. ಈ ಶೋಲಾರಣ್ಯ ಪ್ರದೇಶದ ನೂರಾರು ಎಕರೆ ಪ್ರದೇಶ ಈಗ ಬೆಂಕಿಗೆ ಅಹುತಿಯಾಗಿದೆ. ಡ್ರೋಣ್ ಕಣ್ಗಾವಲು ಇಟ್ಟರೂ ಕಾಡ್ಗಿಚ್ಚು ತಡೆಯೋಕೆ ಸಾಧ್ಯವಾಗುತ್ತಿಲ್ಲ. ಕಾಡ್ಗಿಚ್ಚಿಗೆ ಬಲಿಯಾಗಿರೊ ಅರಣ್ಯ ಒಂದೇಡೆಯಾದರೆ, ಆ ಕಾಡ್ಗಿಚ್ಚಿನ ಕಿಡಿ ಹತ್ತಿಸೋದೆ ಕಿಡಿಗೇಡಿಗಳು ಎನ್ನುವುದು ಮತ್ತೊಂದು ತಲೆ ನೋವಾಗಿದೆ.

ಇದನ್ನೂ ಓದಿ: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ, ಧರೆಗುರುಳಿದ ಮರ

ಪರಿಸರ ಪ್ರಿಯರಿಂದ ಆತಂಕ: ಈಗಾಗಲೇ ಚಾರ್ಮಾಡಿ ಘಾಟ್‌ನಿಂದ ಶುರುವಾದ ಕಾಡ್ಗಿಚ್ಚು ಅತಂಕ ಎರಡು ತಿಂಗಳಲ್ಲಿ ಶೋಲಾರಣ್ಯವನ್ನೇ ನಲುಗಿಸಿದೆ. ಒಟ್ಟಾರೆ 56 ಕಾಡ್ಗಿಚ್ಚು ಪ್ರಕರಣ ದಾಖಲಾಗಿದ್ದರೂ ಈವರೆಗೆ ಇಬ್ಬರನ್ನ ಮಾತ್ರ ವಶಕ್ಕೆ ಪಡೆದಿದ್ದಾರೆ. ಈತ ಸಿಕ್ಕಿರೋ ಮಾಹಿತಿಯಂತೆ ಶೋಲಾರಣ್ಯ ದಲ್ಲಿ ಬೆಂಕಿ ಹಾಕಿದರೆ ಮುಂದಿನ ಮಳೆಯಲ್ಲಿ ಹೊಸ ಹುಲ್ಲುಗಾವಲು ಹುಟ್ಟುತ್ತದೆ ಅನ್ನೋ ಲೆಕ್ಕಾಚಾರವಂತೆ. ಆದರೆ ಮತ್ತೊಂದು ಶಾಕಿಂಗ್ ವಿಚಾರವೇನೆಂದರೆ ಮಳೆಯಾದಾಗ ನೀರನ್ನ ಶೇಖರಣೆ ಮಾಡೋ ಹುಲ್ಲುಗಾವಲು ಬಲಿಯಾದರೆ ಜಲಮೂಲ ಉಳಿಯೋದು ಹೇಗೆ ಎನ್ನುವುದು ಪರಿಸರವಾದಿಗಳ ಆತಂಕಕ್ಕೆ ಕಾರಣವಾಗಿದೆ.

ಶೋಲಾರಣ್ಯದ ವಿಶೇಷವೇನೆಂದರೆ ಮಳೆಯಾಗುತ್ತಿದ್ದಂತೆ ಹರಿಯೋ ನೀರನ್ನ ಶೇಖರಣೆ ಮಾಡಿ ತನ್ನೊಡಲಿನಲ್ಲಿ ಇಟ್ಟುಕೊಂಡು ನಂತರ ಸಮಯಕ್ಕೆ ಅನುಗುಣವಾಗಿ ನೀರನ್ನ ಹೊರಬಿಡುತ್ತದೆ. ಶೋಲಾರಣ್ಯಕ್ಕೆ ಅತಿಯಾಗಿ ಧಕ್ಕೆ ಉಂಟಾದರೆ ನದಿಗಳ ಮೂಲಕ್ಕೂ ಆಪತ್ತು ಬರುವ ಸಾಧ್ಯತೆಯಿದೆ. ಒಟ್ಟಾರೆ ಈ ವರ್ಷದ ಎರಡೇ ತಿಂಗಳು ನೂರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಭಸ್ಮವಾಗಿದೆ. ಮುಳ್ಳಯ್ಯನಗಿರಿ ಸೇರಿ ಜಿಲ್ಲೆಯ ವಿವಿಧೆಡೆ ಸಂಭವಿಸಿರುವ ಕಾಡ್ಗಿಚ್ಚಿಗೆ ಒಂದೆಡೆ ಬಿಸಿಲ ಧಗೆ ಕಾರಣವಾದರೆ, ಮತ್ತೊಂದೆಡೆ ಕಿಡಿಗೇಡಿಗಳಿಂದಲೂ ಅರಣ್ಯ ನಾಶವಾಗಿದೆ. ಅರಣ್ಯ ಇಲಾಖೆ ಕಾಡನ್ನು ರಕ್ಷಿಸಲು ನಾನಾ ಕಸರತ್ತು ನಡೆಸಿದರೂ ಅರಣ್ಯಕ್ಕೆ ಬೆಂಕಿ ಬೀಳುವ ಪ್ರಕರಣಗಳು ನಡೆಯುತ್ತಲೇ ಇವೆ. ದಾಖಲೆ ಮಳೆಯಾಗೋ ಕಾಫಿನಾಡಲ್ಲೇ ಅತಿ ಹೆಚ್ಚು ಅರಣ್ಯ ಬೆಂಕಿಗಾಹುತಿ ಆಹುತಿ ಆಗಿರುವುದು ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಕೊಡಗಿನಲ್ಲಿ ಭೂಕಂಪದ ಅನುಭವ; ಮದೆನಾಡಿನ ಮನೆ, ಮಂಟಪಗಳೆಲ್ಲಾ ಗಡ-ಗಡ!