Asianet Suvarna News Asianet Suvarna News

ಕರೆಂಟ್‌ ಕಳ್ಳ ಪೋಸ್ಟರ್‌: ಗ್ಯಾರಂಟಿ ಕೊಡಲಾಗದ ಕಾಂಗ್ರೆಸ್‌ ಶಿಖಂಡಿಂತೆ ಪೋಸ್ಟರ್‌ ಅಂಟಿಸುತ್ತಿದೆ ಜೆಡಿಎಸ್‌ ಟಾಂಗ್!

ದೀಪಾವಳಿ ವೇಳೆ ಮನೆಯ ಲೈಟಿಂಗ್ಸ್‌ಗೆ ಕಂಬದಿಂದ ವಿದ್ಯುತ್‌ ಲೈನ್‌ ಎಳೆದಿದ್ದರಿಂದ ಮಾಜಿ ಸಿಎಂ ಕುಮಾರಸ್ವಾಮಿ ಮೇಲೆ ಕರೆಂಟ್‌ ಕಳ್ಳ ಪೋಸ್ಟರ್‌ ವಾರ್‌ ಆರಂಭಿಸಿದ ಕಾಂಗ್ರೆಸ್‌ಗೆ ಜೆಡಿಎಸ್‌ ಟಾಂಗ್‌ ಕೊಟ್ಟಿದೆ.

HD Kumaraswamy electricity thief Poster War Congress is putting up posters like Shikhandi sat
Author
First Published Nov 15, 2023, 1:33 PM IST

ಬೆಂಗಳೂರು (ನ.15): ಕಾಂಗ್ರೆಸ್‌ ವಿಕಾರ, ವಿಕೃತಿಗೆ ತುತ್ತಾಗಿ ಕತ್ತಲಾದ ಮೇಲೆ ಗೋಡೆ ಮೇಲೆ ಕಳ್ಳಕಳ್ಳವಾಗಿ ಪೋಸ್ಟರ್‌ ಅಂಟಿಸುವ 'ಶಿಖಂಡಿ'ಸ್ಥಿತಿಗೆ ಬಂದಿದೆ. ಪಾಪ.. ಆ ಪಕ್ಷ ಭೂಗಳ್ಳ, ಕಲ್ಲುಕಳ್ಳ, ಕೊತ್ವಾಲನ ಶಿಷ್ಯನ ಕೈಗೆ ಸಿಕ್ಕಿ ಹುಚ್ಚುನಾಯಿಯಂತೆ ಒದ್ದಾಡುತ್ತಿದೆ. ಕುಮಾರಸ್ವಾಮಿ ಅವರು ಸ್ಪಷ್ಟನೆ ಕೊಟ್ಟ ಮೇಲೂ ಕಾಂಗ್ರೆಸ್‌ ವಿಕೃತಿ ಮಿತಿಮೀರಿದೆ ಎಂದು ಜೆಡಿಎಸ್‌ ಟ್ವೀಟ್‌ ವಾರ್‌ ಆರಂಭಿಸಿದೆ.

ಈ ಬಗ್ಗೆ ಜೆಡಿಎಸ್‌ ತನ್ನ ಅಧಿಕೃತ ಜಾಲತಾಣ ಎನ್ಸ್‌ನಲ್ಲಿ ಟ್ವೀಟ್‌ ಮಾಡಿಕೊಂಡಿದೆ. ಕೊಳಕು ಮಂಡಲ ಕರ್ನಾಟಕ ಕಾಂಗ್ರೆಸ್‌ಗೆ ಅರ್ಜೆಂಟಾಗಿ ಜನರ ಗಮನ ಬೇರೆಡೆಗೆ ಸೆಳೆಯುವ ತುರ್ತು ಇತ್ತು. ಕಳೆದೊಂದು ವಾರದಿಂದ ಹೆಚ್.ಡಿ. ಕುಮಾರಸ್ವಾಮಿ ಅವರು ನಡೆಸಿದ ಸರ್ಜಿಕಲ್ ಸ್ಟ್ರೈಕ್'ಗೆ ಕೈ ಪಡೆ ಪತರಗುಟ್ಟಿ ಹೋಗಿತ್ತು. ಅವರ ಭಾನುವಾರದ ಮಾಧ್ಯಮಗೋಷ್ಠಿ ಒಂದರಿಂದಲೇ ಅದರ ನವರಂಧ್ರಗಳು ಆಸ್ಫೋಟಗೊಂಡಿವೆ. ಈಗ ಮಾರಿ ಉಳಿಸಿಕೊಳ್ಳಲು ಕರೆಂಟ್ ವೈರ್ ಮೊರೆ ಹೋಗಿದೆ ಕಾಂಗ್ರೆಸ್. ಗ್ಯಾರಂಟಿಗಳ ವೈಫಲ್ಯಕ್ಕೆ ದಿನ ಬೆಳಗಾದರೆ ಜನರಿಂದ ಕ್ಯಾಕರಿಸಿ ಉಗಿಸಿಕೊಳ್ಳುತ್ತಿರುವ ಆ ಪಕ್ಷ, ದಿಕ್ಕಿಲ್ಲದೆ ಅಪಾಯಕಾರಿ ಕರೆಂಟ್ ವೈರ್ ಹಿಡಿದುಬಿಟ್ಟಿದೆ. ದರಬೇಸಿ ಕಾಂಗ್ರೆಸ್ಸಿಗೆ ದಾರಿ ಕಾಣುತ್ತಿಲ್ಲ.

ನೀವು ಕರೆಂಟ್‌ ಕಳ್ಳರೆಂದ ಕಾಂಗ್ರೆಸ್: ಪರೀಕ್ಷೆ ಮಾಡಲಷ್ಟೇ ಲೈನ್‌ ಹಾಕಿದ್ದೇವೆಂದ ಕುಮಾರಸ್ವಾಮಿ

ಉತ್ತರಪ್ರದೇಶದಲ್ಲಿ ಮೂರಂಕಿಗೆ ಕುಸಿದಿತ್ತು. ತೆಲಂಗಾಣ ಸೇರಿ 5 ರಾಜ್ಯಗಳಲ್ಲಿ ಏದುಸಿರು ಬಿಡುತ್ತಿದೆ. ವಿಕಾರ, ವಿಕೃತಿಗೆ ತುತ್ತಾಗಿ ಕತ್ತಲಾದ ಮೇಲೆ ಗೋಡೆ ಮೇಲೆ ಕಳ್ಳಕಳ್ಳವಾಗಿ ಪೋಸ್ಟರ್‌ ಅಂಟಿಸುವ 'ಶಿಖಂಡಿ'ಸ್ಥಿತಿಗೆ ಬಂದಿದೆ. ಪಾಪ.. ಆ ಪಕ್ಷ ಭೂಗಳ್ಳ, ಕಲ್ಲುಕಳ್ಳ, ಕೊತ್ವಾಲನ ಶಿಷ್ಯನ ಕೈಗೆ ಸಿಕ್ಕಿ ಹುಚ್ಚುನಾಯಿಯಂತೆ ಒದ್ದಾಡುತ್ತಿದೆ. ಕುಮಾರಸ್ವಾಮಿ ಅವರು ಸ್ಪಷ್ಟನೆ ಕೊಟ್ಟ ಮೇಲೂ ಕಾಂಗ್ರೆಸ್‌ ವಿಕೃತಿ ಮಿತಿಮೀರಿದೆ. ಬೆಸ್ಕಾಂ ವಿದ್ಯುತ್‌ ವೇಗದಲ್ಲಿ ಎಫ್‌ ಐಆರ್‌ ದಾಖಲಿಸಿದೆ. ಕುಮಾರಸ್ವಾಮಿ ಅವರು ತಿಹಾರ್ ಜೈಲಿಗೆ ಹೋಗುವ ತಪ್ಪೇನೂ ಮಾಡಿಲ್ಲ. ಈಡಿ, ಸಿಬಿಐ, ಐಟಿ ಅವರ ಬೆನ್ಹತ್ತಿಲ್ಲ. ಪುಡಿರೌಡಿ 'ಕಿಡಿಗೇಡಿಕುಮಾರ'ನ ಕೈಚಳಕಕ್ಕೆ ಹೆದರುವ ಪ್ರಶ್ನೆಯೂ ಇಲ್ಲ.

ರಾಜ್ಯವನ್ನೇ ಗುಡಿಸಿ ಗಂಡಾಂತರಿಸಿ ತಿಪ್ಪೆ ಸಾರಿಸಿದೆ ಲಜ್ಜೆಗೇಡಿ ಕಾಂಗ್ರೆಸ್. #YstTax,  #SstTax, ಕಾಸಿಗಾಗಿ ಪೋಸ್ಟಿಂಗ್, ಸಿಎಂ ಕಚೇರಿಲಿ ಸುಲಿಗೆ, ಗುತ್ತಿಗೆದಾರರಿಂದ ಪರ್ಸಂಟೇಜ್, ಸ್ಟಾನ್ಲಿ ಸೋಫಾ-ಮಂಚ, ಹ್ಯುಬ್ಲೆಟ್‌ ವಾಚು.. ಒಂದಾ ಎರಡಾ? ಐಷಾರಾಮಯ್ಯನ ಮುಖ ಉಳಿಸಲು ಕರೆಂಟ್‌ ವೈರ್‌ ಹಿಡಿದು ಕೆಟ್ಟಿದೆ ಗುಜರಿ ಶಾಪ್  ಕಾಂಗ್ರೆಸ್! ಇನೊಬ್ಬರು ಹೇಳಿದ್ದನ್ನು ತಿರುಚಿ ವಕ್ರೀಕರಿಸುವ 'ವಿಕೃತಿ ವಿಕಾರಪೀಡಿತʼ ಕಾಂಗ್ರೆಸ್ಸಿಗೆ, ಮಾಜಿ ಸಿಎಂ ಸ್ಪಷ್ಟನೆಗಿಂತ ನೀತಿಗೆಟ್ಟ ರಾಜಕಾರಣದಲ್ಲೇ ಹೆಚ್ಚು ನಂಬಿಕೆ. ಅದೇ ಅದರ ಧರ್ಮ. ಕಂಡ ಕಂಡವರ ಭೂಮಿಗೆ ಬೇಲಿ ಹಾಕುವ 'ಕಿಡಿಗೇಡಿಕುಮಾರ'ನ ಪರ ಬ್ಯಾಟಿಂಗ್ ಬೀಸಿದ್ದು ಬಿಟ್ಟರೆ ಕೊಳಕುಮಂಡಲ ಕಾಂಗ್ರೆಸ್ ಕನ್ನಡಿಗರಿಗಾಗಿ ಕಿಸಿದಿದ್ದೇನೂ ಇಲ್ಲ.

ಮಗನ ಜೊತೆ ಪಟಾಕಿ ಸಿಡಿಸಿ ಸಂಭ್ರಮಿಸಿದ ನಿಖಿಲ್ ಕುಮಾರಸ್ವಾಮಿ ದಂಪತಿ.. ಕಾಮೆಂಟ್‌ ಸೆಕ್ಷನ್‌ ಆಫ್‌ ಮಾಡಿದ್ದೇಕೆ?

ಹಳ್ಳ ಹಿಡಿದ ಗ್ಯಾರಂಟಿಗಳು ಕಾಂಗ್ರೆಸ್ಸಿನಲ್ಲಿ ಹಾಲಾಹಲವನ್ನೇ ಸೃಷ್ಟಿಸಿವೆ ಎನ್ನುವುದಕ್ಕೆ ಕುಮಾರಸ್ವಾಮಿ ಅವರ ಮನೆಯ ಕರೆಂಟ್‌ ವೈರ್‌ ಕೊಟ್ಟ ಶಾಕೇ ಸಾಕ್ಷಿ. ರಾಜಕೀಯವಾಗಿ ಅವರನ್ನು ಎದುರಿಸಲಾಗದ ನರಸತ್ತ ಪಕ್ಷ, ಕರೆಂಟ್ ವೈರ್ ಹಿಡಿದು 'ಶಕುನಿ ಯುದ್ಧ' ಆರಂಭಿಸಿದೆ. ಯುದ್ಧಕ್ಕೆ ನಾವೂ ಸಿದ್ಧರಿದ್ದೇವೆ. ಕಂಬದ ಕರೆಂಟಿನ ಬಗ್ಗೆ ಕಾಂಗ್ರೆಸ್ ಈ ಪರಿ  ಕೈಕೈ ಹಿಚುಕಿಕೊಳ್ಳುತ್ತಿರುವುದನ್ನು ನೋಡಿದರೆ ವೈರಿನಲ್ಲಿಯೂ ನರಿ ರಾಜಕೀಯ  ದಿಟವೆನಿಸುತ್ತದೆ. ಕುಮಾರಸ್ವಾಮಿ ಅವರ ಒಂದೇ ಒಂದು ಕ್ಷಿಪಣಿ ಸಾಕು, ಕಾಂಗ್ರೆಸ್ ‌'ರಕ್ಕಸ ರಿಪಬ್ಲಿಕ್' ಉಡೀಸ್ ಆಗಲಿಕ್ಕೆ. ಶಿಖಂಡಿ ಅಂತ್ಯಕಾಲ ಆರಂಭವಾಗಿದೆ.

Follow Us:
Download App:
  • android
  • ios