ಮುಂದಿನ ಶುಕ್ರವಾರದವರೆಗೆ ರಾಜ್ಯದ ಯಾವೊಂದು ಜಿಲ್ಲೆಗೂ ಭಾರಿ ಮಳೆಯ ‘ಯೆಲ್ಲೋ ಅಲರ್ಟ್‌’ ಸೇರಿದಂತೆ ಯಾವುದೇ ಎಚ್ಚರಿಕೆಗಳನ್ನು ನೀಡಲಾಗಿಲ್ಲ. 

ಬೆಂಗಳೂರು(ಅ.23): ಬೆಳಕಿನ ಹಬ್ಬ ದೀಪಾವಳಿಯ ಸಂದರ್ಭದಲ್ಲಿ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಯಿದ್ದರೂ ಭರ್ಜರಿ ಮಳೆಯ ಸಂಭವ ಕಡಿಮೆ ಎಂದು ಭಾರತೀಯ ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ. ಮುಂದಿನ

ಶುಕ್ರವಾರದವರೆಗೆ ರಾಜ್ಯದ ಯಾವೊಂದು ಜಿಲ್ಲೆಗೂ ಭಾರಿ ಮಳೆಯ ‘ಯೆಲ್ಲೋ ಅಲರ್ಟ್‌’ ಸೇರಿದಂತೆ ಯಾವುದೇ ಎಚ್ಚರಿಕೆಗಳನ್ನು ನೀಡಲಾಗಿಲ್ಲ. ಆದರೆ ಕರಾವಳಿ, ದಕ್ಷಿಣ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. 

ಧಾರಾಕಾರ ಮಳೆ: ಚಿಕ್ಕೋಡಿ ರಸ್ತೆ ಮುಳುಗಡೆ, 50 ಮನೆಗಳಿಗೆ ನುಗ್ಗಿದ ನೀರು

ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಚಂಡಮಾರುತ ಆಂಧ್ರ ಕರಾವಳಿಗೆ ಅಪ್ಪಳಿಸದೆ ಒಡಿಶಾ ಮತ್ತು ಪಶ್ಚಿಮ ಬಂಗಾಳ ಕರಾವಳಿಯತ್ತ ಸಾಗುತ್ತಿರುವುದರಿಂದ ರಾಜ್ಯದ ಒಳನಾಡಿಗಿದ್ದ ಭಾರಿ ಮಳೆಯ ಆತಂಕ ಕಡಿಮೆ ಆಗಿದೆ.
ಭಾನುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಕಳೆದ 24 ಗಂಟೆ ಅವಧಿಯಲ್ಲಿ ಉಡುಪಿಯಲ್ಲಿ 2 ಸೆಂ.ಮೀ., ಉತ್ತರಕನ್ನಡದ ಅಂಕೋಲಾ, ಬೆಳಗಾವಿಯ ಗುಂಜಿ, ಕೊಡಗಿನ ಭಾಗಮಂಡಲದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.