Chamarajanagar: ಆನೆಮಡುವಿನ ಕೆರೆಗೆ ನೀರು ತುಂಬಿಸಲು ಸಚಿವ ಸೋಮಣ್ಣ ಭರವಸೆ
ಹಲವು ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆ
ಮಾರ್ಚ್ 5ರವರೆಗೆ ಕಾದು ನೋಡುವ ತಂತ್ರ
ಸಚಿವ ಸೋಮಣ್ಣ ಭರವಸೆ ನೀಡಿದ ಹಿನ್ನೆಲೆ ಕೆಲಕಾಲ ರಸ್ತೆ ತಡೆ ನಡೆಸಿ, ಪ್ರತಿಭಟನೆ ಸ್ಧಗಿತ
ಚಾಮರಾಜನಗರ (ಮಾ. 3): ನಂಜೇದೇವನಪುರ (Nanjdevanapura)-ಉಡಿಗಾಲ (Udigala) ಗ್ರಾಮ ಮಧ್ಯದಲ್ಲಿರುವ ಆನೆಮಡುವಿನ ಕೆರೆಗೆ (Aanemaduvina Kere ) ನೀರು ಹರಿಸುವ ವಿಳಂಬ ನೀತಿ ಖಂಡಿಸಿ ಕಳೆದ ಆರು ದಿನಗಳಿಂದ ನಿರಂತರ ಪ್ರತಿಭಟನೆ ಧರಣಿ ನಡೆದಿತ್ತು. ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ(in charge minister V somanna ) ಕೆರೆಗೆ ನೀರು ತುಂಬಿಸಲು ಭರವಸೆ ನೀಡಿದ ಹಿನ್ನೆಲೆ ಬುಧವಾರ ಧರಣಿ (Protest) ವಾಪಸ್ ಪಡೆಯಲಾಗಿದೆ. ಆನೆಮಡುವಿನ ಕೆರೆಗೆ ನೀರು ತುಂಬಿಸುವಂತೆ ಉಡಿಗಾಲ ಬಳಿ ರೈತ ಸಂಘಟನೆಗಳ ಜೊತೆಗೂಡಿ ಪ್ರತಿಭಟನೆ ನಡೆಸುತ್ತಿದ್ದ ಹಿನ್ನೆಲೆ ಜಿಲ್ಲಾಡಳಿತ ಕೊಳ್ಳೇಗಾಲದಲ್ಲಿ ಸಚಿವ ಸೋಮಣ್ಣ ಅವರನ್ನು ಭೇಟಿ ಮಾಡಿ, ಆನೆಮಡುವಿನ ಕೆರೆಗೆ ನೀರು ತುಂಬಿಸಲು ಇರುವ ಸಾಧಕ-ಭಾದಕ ತೊಡಕುಗಳ ಬಗ್ಗೆ ರೈತ ಮುಖಂಡರು (Farmer Leaders) ನೀರಾವರಿ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಚರ್ಚೆ ನಡೆಸಲಾಗಿತ್ತು.
ಈ ಹಿನ್ನೆಲೆ ಸಚಿವರ ಸೂಚನೆ ಮೇರೆಗೆ ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಶಂಕರೇಗೌಡ ನಿಯೋಗವು ಆನೆಮಡುವಿನ ಕೆರೆಗೆ ನೀರು ಹರಿವಲ್ಲಿ ಇರುವ ಗುರುತ್ವಾಕರ್ಷಣೆ ಹಾದಿಯನ್ನು ಹಾಗೂ ಮುಖಾಂತರ ತಾಯಿ ಕಾಲುವೆಯನ್ನು ಸರ್ವೇ ಮಾಡಿ, ಅಂದಾಜು ಪಟ್ಟಿತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಪ್ರತಿಭಟನಾ ನಿರತರಿಗೆ ಮನವರಿಕೆ ಮಾಡಿಕೊಟ್ಟಹಿನ್ನೆಲೆ ಪ್ರತಿಭಟನೆ ಸ್ಧಗಿತಗೊಳಿಸಲಾಯಿತು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷರಾಗಿ ಭಾಗ್ಯರಾಜ್ ಮಾತನಾಡಿ, ಸರ್ಕಾರ ಜಿಲ್ಲಾಡಳಿತ ಜಿಲ್ಲಾ ಉಸ್ತುವಾರಿ ಸಚಿವರು ನೀರಾವರಿ ಇಲಾಖೆ ಅಧಿಕಾರಿಗಳು ನೀಡಿರುವ ಭರವಸೆ ಮೇಲೆ ಚಳುವಳಿ ಸ್ಧಗಿತಗೊಳಿಸಲಾಗಿದ್ದು, 5ರ ತನಕ ಕಾದು ನೋಡುತ್ತೇವೆ ಅಲ್ಲಿಯವರೆಗೆ ಕಾಮಗಾರಿಯಲ್ಲಿ ವಿಳಂಬ ನಿರ್ಲಕ್ಷತೆ ಬೇಜವಾಬ್ದಾರಿತನ ಕಂಡು ಬಂದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಜನ-ಜಾನುವಾರು ಸಮೇತ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಪಟೇಲ್ ಶಿವಮೂರ್ತಿ, ಹಾಲಿನ ನಾಗರಾಜು, ಕುರುಬೂರು, ಮಂಜು ಹೆಗ್ಗೋಠಾರ ಶಿವಸ್ವಾಮಿ, ಉಡಿಗಾಲ ಗ್ರಾಮದ ಕಬ್ಬು ಬೆಳೆಗಾರ ಸಂಘದ ಗ್ರಾಮ ಘಟಕದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ವೀರಪುರ ಗ್ರಾಮಸ್ಥರು ಹಾಜರಿದ್ದರು.
Mekedatu Padayatra: ಕಾಂಗ್ರೆಸ್ಸಿಗರ ವಿರುದ್ಧ ಶ್ರೀನಿವಾಸ ಪ್ರಸಾದ್ ವಾಗ್ದಾಳಿ
ಸಚಿವ ವಿ. ಸೋಮಣ್ಣ ಭರವಸೆ: ನಂಜೇದೇವನಪುರ ಮತ್ತು ಉಡಿಗಾಲ ಮಧ್ಯಭಾಗದ ಆನೆಮಡುವಿನಕೆರೆಗೆ ನೀರು ತುಂಬಿಸುವ ಕ್ರಮವಹಿಸುವುದಾಗಿ ಸಚಿವ ವಿ. ಸೋಮಣ್ಣ ಭರವಸೆ ನೀಡಿದರು.ಆನೆಮಡುವಿನಕೆರೆಗೆ ನೀರು ತುಂಬಿಸುವ ಕುರಿತು ಕೊಳ್ಳೇಗಾಲದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ರೈತ ಮುಖಂಡ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಹಾಗೂ ಇತರೆ ರೈತ ಪ್ರತಿನಿಧಿಗಳೊಂದಿಗೆ ಕೆರೆಗೆ ನೀರುವ ತುಂಬಿಸುವ ಸಂಬಂಧ ಸಮಸ್ಯೆ ಆಲಿಸಿದರು. ಆನೆಮಡುವಿನಕೆರೆಗೆ ನೀರು ತುಂಬಿಸುವ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಹಾಗೂ ವಿವರ ಪಡೆದ ಸಚಿವರು, ಕಾವೇರಿ ನೀರಾವರಿ ನಿಗಮದ ಮುಖ್ಯಎಂಜಿನಿಯರ್ ಹಾಗೂ ಜಿಲ್ಲಾಧಿಕಾರಿಯವರು ಸ್ಥಳ ಪರಿಶೀಲಿಸಿ ಪೂರ್ಣ ಮಾಹಿತಿ ನೀಡಬೇಕು. ಈ ಸಂಬಂಧ ಮುಂದಿನ ಕ್ರಮವಹಿಸಲಾಗುವುದೆಂದು ತಿಳಿಸಿದರು.
Chamarajanagar: ಮೇಕೆದಾಟು ಪಾದಯಾತ್ರೆ ಪಕ್ಷಾತೀತ ಹೋರಾಟ: ಸತೀಶ್ ಜಾರಕಿಹೊಳಿ
ಸ್ಥಳೀಯವಾಗಿ ಪಂಪ್‌ಸೆಟ್‌ಗಳಿಗೆ ಒಂದೇ ಪಾಳಿಯಲ್ಲಿ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕೆಂದು ಸ್ಥಳೀಯ ಭಾಗದ ರೈತರು ಮಾಡಿದ ಮನವಿಗೆ ಕ್ರಮವಹಿಸುವ ಭರವಸೆಯನ್ನು ಸಚಿವರು ನೀಡಿದರು.ಶಾಸಕರಾದ ಆರ್. ನರೇಂದ್ರ, ಎನ್. ಮಹೇಶ್, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಪಂ ಸಿಇಒ ಅಧಿಕಾರಿ ಕೆ.ಎಂ. ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಶಂಕರೇಗೌಡ, ವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬಡೋಲೆ ಸೇರಿದಂತೆ ಇತರೆ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.