Asianet Suvarna News Asianet Suvarna News

5 ಕೋಟಿ ಡೀಲ್‌ ಕೇಸ್‌: ಚೈತ್ರಾಗೆ ಮೂರ್ಚೆ ರೋಗದ ಹಿಸ್ಟರಿಯೇ ಇಲ್ವಂತೆ, ಎಲ್ಲ ಡ್ರಾಮಾನಾ?

ಚೈತ್ರಾ ಕುಂದಾಪುರಗೆ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಮೂರ್ಚೆ ರೋಗದ ಯಾವುದೇ ಲಕ್ಷಣ ಕಂಡು ಬಂದಿಲ್ಲ ಎಂದು ವಿಕ್ಟೋರಿಯಾ ವೈದ್ಯರು ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಚೈತ್ರಾ ಕುಂದಾಪುರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ರೀತಿಯ ಚೆಕಪ್ ಮಾಡುವಂತೆ ವಿಕ್ಟೋರಿಯಾ ಅಸ್ಪತ್ರೆಯ ವೈದ್ಯರಿಗೆ ಮನವಿ ಮಾಡಿದ ಸಿಸಿಬಿ ಪೊಲೀಸರು 

Chaitra Kundapura Has No History of Epilepsy Says Victoria Hospital Doctors grg
Author
First Published Sep 15, 2023, 12:52 PM IST

ಬೆಂಗಳೂರು(ಸೆ.15):  5 ಕೋಟಿ ಡೀಲ್‌ನಲ್ಲಿ ಸಿಸಿಬಿ ಪೊಲೀಸರ ಬಂಧನದಲ್ಲಿರುವ ಚೈತ್ರಾ ಕುಂದಾಪುರ ಅವರಿಗೆ ಅನಾರೋಗ್ಯದ ಹಿನ್ನಲೆಯಲ್ಲಿ ಇಂದು(ಶುಕ್ರವಾರ) ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾಗಿದೆ. ಚೈತ್ರಾಗೆ ಪಿಡ್ಸ್‌ ಬಂದಿದೆ ಅಂತ ಆಸ್ಪತ್ರೆಗೆ ದಾಖಲಾಗಿದೆ. 

ಆದ್ರೆ, ಇದೀಗ ವರದಿಯೊಂದು ಬಂದಿದ್ದು ಚೈತ್ರಾ ಕುಂದಾಪುರಗೆ ಮೂರ್ಚೆ ರೋಗದ ಹಿಸ್ಟರಿಯೇ ಇಲ್ಲ ಅಂತ ವಿಕ್ಟೋರಿಯಾ ಆಸ್ಪತ್ರೆಯ ನೋಡಲ್ ಅಧಿಕಾರಿ ತಿಳಿಸಿದ್ದಾರೆ. ಆದರೆ, ಚೈತ್ರಾ ಕುಂದಾಪುರ ಅನಾರೋಗ್ಯದ ನೆಪವೊಡ್ಡಿ ನಾಟಕ ಮಾಡಿದ್ದಾರಾ? ಎಂಬ ಪ್ರಶ್ನೆಗಳು ಇದೀಗ ಉದ್ಭವವಾಗಿವೆ. 

ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಡೀಲ್‌ ಹಣದಲ್ಲಿ ಹಾಲಶ್ರೀ 10 ಎಕರೆ ಭೂಮಿ ಖರೀದಿ, ಬಂಗಲೆ ನಿರ್ಮಾಣ..!

ಚೈತ್ರಾ ಕುಂದಾಪುರಗೆ ಮೂರ್ಚೆ ರೋಗದ ಹಿಸ್ಟರಿ ಇಲ್ಲ...!

ಚೈತ್ರಾ ಕುಂದಾಪುರಗೆ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಮೂರ್ಚೆ ರೋಗದ ಯಾವುದೇ ಲಕ್ಷಣ ಕಂಡು ಬಂದಿಲ್ಲ ಎಂದು ವಿಕ್ಟೋರಿಯಾ ವೈದ್ಯರು ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಚೈತ್ರಾ ಕುಂದಾಪುರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ರೀತಿಯ ಚೆಕಪ್ ಮಾಡುವಂತೆ ಸಿಸಿಬಿ ಪೊಲೀಸರು ವಿಕ್ಟೋರಿಯಾ ಅಸ್ಪತ್ರೆಯ ವೈದ್ಯರಿಗೆ ಮನವಿ ಮಾಡಿದ್ದಾರೆ. 

ಬಿಜೆಪಿ ಟಿಕೆಟ್ ಡೀಲ್‌': ದೊಡ್ಡವರ ಹೆಸರು ಬರಲಿದೆ, ಚೈತ್ರಾ ಬಾಂಬ್‌

ಚೈತ್ರಾ ಕುಂದಾಪುರ ಅವರ ಬಿಪಿ, ಫಲ್ಸ್ ರೇಟ್ ನಾರ್ಮಲ್ ಇದೆ. ಎಲ್ಲ ರೀತಿಯ ಪರೀಕ್ಷೆ ನಡೆಸಿ ವರದಿ ನೀಡಲು ಸಿಸಿಬಿ ಅಧಿಕಾರಿಗಳ ಮನವಿ ಮಾಡಿಕೊಂಡಿದ್ದಾರೆ. ಕೆಲಕಾಲ ಅಸ್ಪತ್ರೆಯಲ್ಲೇ ಚಿಕಿತ್ಸೆ ಕೊಡಿಸಲು ಸಿಸಿಬಿ ಪೊಲೀಸರು ನಿರ್ಧರಿಸಿದ್ದಾರೆ. ಡಿಸ್ಚಾರ್ಜ್ ಯಾವಾಗ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಎಲ್ಲಾ ತಪಾಸಣೆ ನಂತರ ವೈದ್ಯರು ಡಿಸ್ಚಾರ್ಜ್ ಬಗ್ಗೆ ನಿರ್ಧರಿಸಲಿದ್ದಾರೆ. 

ಬಟ್ಟೆ ಸೋಪು ಕೇಳಿದ್ದೇಕೆ ಚೈತ್ರಾ ಕುಂದಾಪುರ..?

ನಿನ್ನೆ ಬಟ್ಟೆ ತೊಳೆಯಲು ಚೈತ್ರಾ ಕುಂದಾಪುರ ಪೊಲೀಸರ ಬಳಿ ಸೋಪು ಕೇಳಿದ್ದರು. ಎಸಿಪಿ ರೀನಾ ಸುವರ್ಣ ಬಟ್ಟೆ ಸೋಪು ತರಿಸಿಕೊಟ್ಟಿದ್ದರು. ಇಂದು ಸಿಸಿಬಿ ಕಚೇರಿಯಲ್ಲಿ ಚೈತ್ರಾ ಪ್ರಜ್ಞೆ ತಪ್ಪಿ ಬಿದ್ದಾಗ ಬಾಯಲ್ಲಿ ನೊರೆ ಕಾಣಿಸಿಕೊಂಡಿತ್ತು. ಪಿಡ್ಸ್ ಅಂತ ಬಂದ್ರು, ಆದ್ರೆ ಈ ವರೆಗಿನ ಪರೀಕ್ಷೆಯಲ್ಲಿ ಯಾವುದೇ ಪಿಡ್ಸ್ ಅಂಶ ಕಂಡುಬಂದಿಲ್ಲ  ಅಂತ ವಿಕ್ಟೋರಿಯಾ ಆಸ್ಪತ್ರೆಯ ನೋಡಲ್ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. 

Follow Us:
Download App:
  • android
  • ios