ಚೈತ್ರಾ ಕುಂದಾಪುರ ಬಂಧನ : ದೇವಸ್ಥಾನದಲ್ಲಿ ಈಡುಗಾಯಿ ಒಡೆದ ಶಾನುವಳ್ಳಿ ಗ್ರಾಮಸ್ಥರು!
ಕಳೆದ ಒಂದು ವರ್ಷದ ಹಿಂದೆ (2022ರ ಅ.4ರಂದು) ಪ್ರಶಾಂತವಾಗಿದ್ದ ಮಲೆನಾಡಿನ ಮಾವಿನಕಟ್ಟೆ ಗ್ರಾಮದಲ್ಲಿ ರಾಜಕೀಯ ದುರುದ್ದೇಶದಿಂದ ನಡೆದ ಸಭೆಯಲ್ಲಿ ಚೈತ್ರ ಕುಂದಾಪುರ ಪ್ರಚೋದನಕಾರಿ ಭಾಷಣ ಮಾಡಿ ಶಾಂತಿ ಕದಡಲು ಪ್ರಯತ್ನಿಸಿದ್ದರು.
ಕೊಪ್ಪ (ಸೆ.18): ಕಳೆದ ಒಂದು ವರ್ಷದ ಹಿಂದೆ (2022ರ ಅ.4ರಂದು) ಪ್ರಶಾಂತವಾಗಿದ್ದ ಮಲೆನಾಡಿನ ಮಾವಿನಕಟ್ಟೆ ಗ್ರಾಮದಲ್ಲಿ ರಾಜಕೀಯ ದುರುದ್ದೇಶದಿಂದ ನಡೆದ ಸಭೆಯಲ್ಲಿ ಚೈತ್ರ ಕುಂದಾಪುರ ಪ್ರಚೋದನಕಾರಿ ಭಾಷಣ ಮಾಡಿ ಶಾಂತಿ ಕದಡಲು ಪ್ರಯತ್ನಿಸಿದ್ದರು.
ಮಾವಿನಕಟ್ಟೆ ಗ್ರಾಮದಲ್ಲಿ ಯಾವುದೇ ಮುಸ್ಲಿಂ ಅಥವಾ ಕ್ರಿಸ್ಚಿಯನ್ ಕುಟುಂಬಗಳು ವಾಸವಾಗಿಲ್ಲ. ಇತರೆಡೆಗಳಲ್ಲಿನ ಕ್ರಿಸ್ಚಿಯನ್, ಮುಸ್ಲಿಮರ ನಡುವೆ ಇಲ್ಲಿನ ಜನ ಸೌಹಾರ್ದದಿಂದಲೆ ಬೆರೆಯುತ್ತಾರೆ. ಹೀಗಿರುವಾಗಈ ನೆಲದಲ್ಲಿ ಇಂಥಹ ಪ್ರಚೋದನಕಾರಿ ಕಾರ್ಯಕ್ರಮ, ಕೇಳಲು ಮುಜುಗರದ ಭಾಷಣದ ವಿಚಾರವಾಗಿ ಬೇಸರಗೊಂಡಿದ್ದ ಗ್ರಾಮದ ಪ್ರಮುಖರು ಹಾಗೂ ಗ್ರಾಮಸ್ಥರು ಪ್ರಶಾಂತವಾಗಿದ್ದ ನಮ್ಮ ಗ್ರಾಮದ ಸ್ಥಿತಿಗೆ ಮನನೊಂದು ಮಾವಿನಕಟ್ಟೆಯ ಶಕ್ತಿ ಸನ್ನಿಧಿ ಕೇಂದ್ರ ಶ್ರೀ ಆನೆ ವಿಘ್ನೇಶ್ವರ ಸ್ವಾಮಿ ಶ್ರೀ ಬ್ರಹ್ಮ ಜಟಿಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಾಂತಿ ಕದಡಲು ಪ್ರಯತ್ನಿಸಿದವರಿಗೆ ವರ್ಷದೊಳಗೆ ನೀನೇ ಪ್ರತಿಫಲ ತೋರಿಸು ಎಂದು ದೇವರ ಸನ್ನಿಧಿಯಲ್ಲಿ ಪ್ರಾರ್ಥಿಸಿದ್ದರು.
ವರ್ಷ ಕಳೆಯುವುದರೊಳಗೆ ಚೈತ್ರಾ ಕುಂದಾಪುರ ಬಂಧನವಾಗಿ ಗ್ರಾಮಸ್ಥರ ಪ್ರಾರ್ಥನೆ ಈಡೇರಿದ ಕಾರಣಕ್ಕಾಗಿ ಭಾನುವಾರ ಮಾವಿನಕಟ್ಟೆಯ ಗ್ರಾಮಸ್ಥರು ದೇವರ ಸನ್ನಿಧಿಗೆ ತೆರಳಿ ಪೂಜಾ ಸೇವೆ ಸಲ್ಲಿಸಿ, ಈಡುಗಾಯಿ ಒಡೆದು ಪ್ರಾರ್ಥನೆ ಸಲ್ಲಿಸಿದರು.
ಊರ ಪ್ರಮುಖರಾದ ಕೆ.ಜಿ.ಶೋಭಿಂತ್, ನವೀನ್ ಮಾವಿನಕಟ್ಟೆ, ಕೆ.ಟಿ.ಮಿತ್ರ ಕೊಡ್ತಾಳ್, ಶಿವಕರ ಶೆಟ್ಟಿ, ಪ್ರವೀಣ್ ಶಾನುವಳ್ಳಿ, ಪ್ರವೀಣ್ ಬೆಳ್ಳಾಲೆ, ಅದಿತಿ, ಅಶೋಕ್, ಅಶೋಕ್ ಕಾರ್ಗದ್ದೆ ಸೇರಿದಂತೆ ಗ್ರಾಮಸ್ಥರು ಇದ್ದರು.
ಕುಂದಾಪುರದ ಫೈರ್‌ಬ್ರಾಂಡ್ ಚೈತ್ರಾ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಾರ ಇಲ್ಲಿದೆ