Kannada

ಯಾರೀ ಚೈತ್ರಾ ಕುಂದಾಪುರ?

ಮೂಲತಃ ಉಡುಪಿಯ ಕುಂದಾಪುರದವರಾದ ಚೈತ್ರಾ ಪ್ರಖರ ಭಾಷಣಗಾರ್ತಿಯೂ ಹೌದು ಸುದ್ದಿ ನಿರೂಪಕಿಯೂ ಹೌದು! ಕೆಲ ಕಾಲ ಪತ್ರಿಕೆಯೊಂದರ ಉಪಸಂಪಾದಕಿಯಾಗಿ, ಸುದ್ದಿವಾಹಿನಿಯ ನಿರೂಪಕರಾಗಿ ಕೆಲಸ ಮಾಡಿದ್ದರು.

Kannada

ಯಾರೀ ಚೈತ್ರಾ ಕುಂದಾಪುರ?

ಬಹುಮುಖ ಪ್ರತಿಭೆಯಾಗಿರುವ ಚೈತ್ರಾ ಕುಂದಾಪುರ ನಿರೂಪಕಿ, ಪತ್ರಕರ್ತೆ, ಉಪನ್ಯಾಸಕಿ ಹೋರಾಟಗಾರ್ತಿ ರಾಜ್ಯಾದ್ಯಂತ ಗುರುತಿಸಿಕೊಂಡಿದ್ದಾರೆ. ನಿಮಗಿದು ಗೊತ್ತೆ ಈಕೆ ಉತ್ತಮ ಬರೆವಣಿಗೆಯಿರುವ ಲೇಖಕಿಯೂ ಹೌದು!

Image credits: our own
Kannada

ಯಾರೀ ಚೈತ್ರಾ ಕುಂದಾಪುರ?

ಕಾಲೇಜು ದಿನಗಳಿಂದಲೇ ಎಬಿವಿಪಿ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ ಚೈತ್ರಾಗೆ ಬಿಜೆಪಿ, ಆರೆಸ್ಸೆಸ್ ಹಲವು ಮುಖಂಡರು ಸಾಮೀಪ್ಯವೂ ಈಕೆಗಿದೆ.

Image credits: our own
Kannada

ಯಾರೀ ಚೈತ್ರಾ ಕುಂದಾಪುರ?

ಕರಾವಳಿಯ ಫೈರ್ ಬ್ರಾಂಡ್ ಎಂದೇ ಖ್ಯಾತಿ ಪಡೆದಿರುವ ಚೈತ್ರಾ ಕುಂದಾಪುರ. ಪ್ರಖರ ಭಾಷಣಗಾರ್ತಿಯಾಗಿರುವ ಇವರು ಉತ್ತರ ಕರ್ನಾಟಕದಲ್ಲಿ ದೊಡ್ಡ ಅಭಿಮಾನ ಬಳಗವೇ ಇದೆ 

Image credits: our own
Kannada

ಯಾರೀ ಚೈತ್ರಾ ಕುಂದಾಪುರ?

ಚೈತ್ರಾ ಕುಂದಾಪುರಗೆ ವಿವಾದ ಹೊಸದೇನಲ್ಲ. ಈ ಹಿಂದೆ ಬಹಳಷ್ಟು ವಿವಾದಗಳಲ್ಲಿ ಸಿಲುಕಿಕೊಂಡಿದ್ದಾಳೆ ಆದರೆ ಹಿಂದು ಧರ್ಮ ವಿಚಾರ ಅಂತಾ ಬಂದಾಗ ಸದಾ ಮುಂದು.

Image credits: our own
Kannada

ಯಾರೀ ಚೈತ್ರಾ ಕುಂದಾಪುರ?

ಬಹುಮುಖಿ ಪ್ರತಿಭೆಯಾಗಿರುವ ಚೈತ್ರಾ ಕುಂದಾಪುರ ನಾಯಕತ್ವ ಗುಣವೂ ಇದೆ. ಸಂಘಟನೆಯಲ್ಲಿ ನಾಯಕಿಯಾಗಿ ಗುರುತಿಸಿಕೊಳ್ಳಬೇಕಿದ್ದ ಹೋರಾಟಗಾರ್ತಿ, ಹಣದಾಸೆಗೋ, ಕುತಂತ್ರಕ್ಕೋ ಸಿಲುಕಿ ಒಟ್ಟಿನಲ್ಲಿ ಪೊಲೀಸರ ಅತಿಥಿಯಾಗಿದ್ದಾಳೆ!

Image credits: our own
Kannada

ಯಾರೀ ಚೈತ್ರಾ ಕುಂದಾಪುರ?

ಕಳೆದ ವಿಧಾನಸಭಾ ಚುನಾವಣೆ ವೇಳೆ ಟಿಕೆಟ್ ಕೊಡಿಸುವುದಾಗಿ ಸುಮಾರು 7ಕೋಟಿ ರೂ ಪಡೆದು ಉದ್ಯಮಿಯೊಬ್ಬರಿಗೆ ವಂಚಿಸಿದ ಆರೋಪ ಹಿನ್ನೆಲೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. 

 

 

Image credits: our own