Border dispute: ಮುಂಬೈ ಕೇಂದ್ರಾಡಳಿತ ಮಾಡಿ: ಪರಿಷತ್‌ನಲ್ಲಿ ಆಗ್ರಹ
ಮಹಾರಾಷ್ಟ್ರ ಸರ್ಕಾರವೇನಾದರೂ ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿಯನ್ನು ಕೇಂದ್ರಾಡಳಿತ ಪ್ರದೇಶವಾಗಿಸುವಂತೆ ನಿರ್ಣಯ ಕೈಗೊಳ್ಳುವ ದುಃಸ್ಸಾಹಸಕ್ಕೆ ಕೈಹಾಕಿದರೆ ಮುಂಬೈ ನಗರವನ್ನು ಕೇಂದ್ರಾಡಳಿತ ಪ್ರದೇಶವಾಗಿ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಕರ್ನಾಟಕ ಸರ್ಕಾರ ಕೂಡ ಒತ್ತಡ ತರಬೇಕೆಂದು ಮಂಗಳವಾರ ವಿಧಾನ ಪರಿಷತ್‌ನಲ್ಲಿ ಪಕ್ಷಾತೀತ ಆಗ್ರಹ ವ್ಯಕ್ತವಾಯಿತು.
ವಿಧಾನ ಪರಿಷತ್ (ಡಿ.28) : ಮಹಾರಾಷ್ಟ್ರ ಸರ್ಕಾರವೇನಾದರೂ ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿಯನ್ನು ಕೇಂದ್ರಾಡಳಿತ ಪ್ರದೇಶವಾಗಿಸುವಂತೆ ನಿರ್ಣಯ ಕೈಗೊಳ್ಳುವ ದುಃಸ್ಸಾಹಸಕ್ಕೆ ಕೈಹಾಕಿದರೆ ಮುಂಬೈ ನಗರವನ್ನು ಕೇಂದ್ರಾಡಳಿತ ಪ್ರದೇಶವಾಗಿ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಕರ್ನಾಟಕ ಸರ್ಕಾರ ಕೂಡ ಒತ್ತಡ ತರಬೇಕೆಂದು ಮಂಗಳವಾರ ವಿಧಾನ ಪರಿಷತ್‌ನಲ್ಲಿ ಪಕ್ಷಾತೀತ ಆಗ್ರಹ ವ್ಯಕ್ತವಾಯಿತು.
ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್(B.K.Hariprasad) ಸೇರಿದಂತೆ ಕಾಂಗ್ರೆಸ್(Congress) ಮತ್ತು ಜೆಡಿಎಸ್(JDS)ನ ಹಲವು ಸದಸ್ಯರು ಮಂಗಳವಾರ ‘ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ(Karnataka-maharashtra border dispute)ವನ್ನು ಶಾಶ್ವತವಾಗಿ ಪರಿಹರಿಸುವಲ್ಲಿ ಸರ್ಕಾರದ ವಿಫಲವಾಗಿರುವ ಕುರಿತು’ ನಿಯಮ 68ರ ಮೇರೆಗೆ ಮಂಡಿಸಿದ್ದ ಸಾರ್ವಜನಿಕ ಮಹತ್ವದ ವಿಷಯದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.
ನನ್ನ, ಸಿ.ಟಿ.ರವಿ ಆಸ್ತಿ ತನಿಖೆ ಮಾಡಿ: ಬಿ.ಕೆ.ಹರಿಪ್ರಸಾದ್ ಸವಾಲು
ಕಾಂಗ್ರೆಸ್ ಕಡೆಯಿಂದ ಆರಂಭವಾದ ಚರ್ಚೆಯಲ್ಲಿ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಮಹಾರಾಷ್ಟ್ರವೇನಾದರೂ ಕರ್ನಾಟಕದ ಯಾವುದೇ ಭಾಗವನ್ನು ಕೇಂದ್ರಾಡಳಿತ ಪ್ರದೇಶ(Union Territory)ವಾಗಿಸಬೇಕೆಂದು ನಿರ್ಣಯ ಕೈಗೊಂಡರೆ ನಾವು ಕೈಕಟ್ಟಿಕೂರುವುದಿಲ್ಲ ಎಂಬ ಸ್ಪಷ್ಟಉತ್ತರವನ್ನು ನೀಡಬೇಕು. ಮುಂಬೈ ನಗರ(Mumbai city)ವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವಂತೆ ಕೇಂದ್ರದ ಮೇಲೆ ನಾವೂ ಒತ್ತಡ ತರಬೇಕು. ಈ ನಿಟ್ಟಿನಲ್ಲಿ ರಾಜ್ಯ ವಿಧಾನ ಮಂಡಲದ ಉಭಯ ಸದನಗಳಲ್ಲಿ ನಿರ್ಣಯ ಕೈಗೊಂಡು ಕಳುಹಿಸಬೇಕು ಎಂದು ಆಗ್ರಹಿಸಿದರು.
‘ಗಡಿ ವಿಚಾರದ ಬಗ್ಗೆ ವಿಧಾನಸಭೆಯಲ್ಲಿ ಅಂಗೀಕಾರ ರೂಪದಲ್ಲಿರುವ ನಿರ್ಣಯವನ್ನು ಮೇಲ್ಮನೆಯಲ್ಲೂ ಮಂಡಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ, ಒಕ್ಕೂಟ ವ್ಯವಸ್ಥೆಯಲ್ಲಿರುವ ಒಂದು ರಾಜ್ಯ ಮಾಡಿದ್ದನ್ನೆಲ್ಲಾ ಸಹಿಸಿಕೊಂಡು ನಾವು ಆಡಳಿತ ಮಾಡಬೇಕಿಲ್ಲ. ಮಹಾರಾಷ್ಟ್ರದವರಿಗೆ ದೇಶದ ಬಗ್ಗೆ ಕಾಳಜಿ ಇದ್ದರೆ ಮುಂಬೈ ಅನ್ನು ಕೇಂದ್ರಾಡಳಿತ ಪ್ರದೇಶವಾಗಿಸುವಂತೆ ನಿರ್ಣಯ ಕೈಗೊಳ್ಳಲಿ. ಇದಕ್ಕೆ ನಾವೂ ಒಪ್ಪುತ್ತೇವೆ. ಅದನ್ನು ಬಿಟ್ಟು ಬೆಳಗಾವಿ ಸೇರಿ ಕರ್ನಾಟಕದ ಪ್ರದೇಶಗಳ ಬಗ್ಗೆ ಮಾತನಾಡಲು ಇವ್ಯಾರು?’ ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ನ ಮುಖ್ಯಸಚೇತಕ ಪ್ರಕಾಶ್ ರಾಥೋಡ್, ಜೆಡಿಎಸ್‌ನ ತಿಪ್ಪೇಸ್ವಾಮಿ , ಕಾಂಗ್ರೆಸ್‌ನ ಯು.ಬಿ.ವೆಂಕಟೇಶ್, ಪ್ರಕಾಶ್ ಹುಕ್ಕೇರಿ, ನಾಗರಾಜು, ಪಿ.ಆರ್.ರಮೇಶ್, ಬಿಜೆಪಿಯ ತೇಜಸ್ವಿನಿಗೌಡ, ಪ್ರತಾಪ್‌ಸಿಂಹ ನಾಯಕ್, ರವಿ, ಜೆಡಿಎಸ್‌ನ ಶರವಣ ಮಾತನಾಡಿದರು.
ಇದಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್‌ನ ಮುಖ್ಯಸಚೇತಕ ಪ್ರಕಾಶ್ ರಾಥೋಡ್, ‘ಗಡಿ ಭಾಗದಲ್ಲಿ ಕನ್ನಡಿಗರು, ಮರಾಠಿಗರು ಅನ್ಯೋನ್ಯವಾಗಿದ್ದಾರೆ. ಕೇವಲ ರಾಜಕಾರಣಕ್ಕಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಎದುರಾದಾಗ ಈ ವಿವಾದಕ್ಕೆ ಮರುಜೀವ ನೀಡಲಾಗುತ್ತಿದೆ. ಗಡಿ ವಿವಾದ ಉದ್ಭವಿಸುತ್ತಿರುವುದೇ ಎಂಇಎಸ್‌ನಿಂದ. ಮೊದಲು ಆ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧ ಮಾಡಬೇಕು ಎಂದು ಆಗ್ರಹಿಸಿದರು.
ಜೆಡಿಎಸ್‌ನ ತಿಪ್ಪೇಸ್ವಾಮಿ ಅವರು, ‘ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಗಡಿ ಭಾಗದ ಜನರ ಅಭಿಪ್ರಾಯ ಸಂಗ್ರಹಿಸಿ ಸುಪ್ರೀಂ ಕೋರ್ಚ್‌ಗೆ ಸಲ್ಲಿಸುವ ಪ್ರಯತ್ನ ನಡೆಸಿದೆ. ಇದಕ್ಕೆ ಪ್ರತಿಯಾಗಿ ನಮ್ಮ ಸರ್ಕಾರವೂ ಕೂಡ ಮುನ್ನೆಚ್ಚರಿಕೆಯಾಗಿ ಆಗಬೇಕಿರುವ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.
Uttara Kannada: ಬಿಜೆಪಿಯಿಂದ ದೇಶಪ್ರೇಮದ ಸರ್ಟಿಫಿಕೇಟ್ ಬೇಡ: ಬಿ.ಕೆ.ಹರಿಪ್ರಸಾದ್
ಕಾಂಗ್ರೆಸ್‌ನ ಯು.ಬಿ.ವೆಂಕಟೇಶ್, ಪ್ರಕಾಶ್ ಹುಕ್ಕೇರಿ, ನಾಗರಾಜು, ಪಿ.ಆರ್.ರಮೇಶ್, ಬಿಜೆಪಿಯ ತೇಜಸ್ವಿನಿಗೌಡ, ಪ್ರತಾಪ್‌ಸಿಂಹ ನಾಯಕ್, ರವಿ, ಜೆಡಿಎಸ್‌ನ ಶರವಣ ಮತ್ತಿತರ ಸದಸ್ಯರು ಮಾತನಾಡಿ, ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸಂವಿಧಾನ ವಿರೋಧಿ ನಿರ್ಣಯಕ್ಕೆ ಮುಂದಾಗಿದೆ. ಇದನ್ನು ನಮ್ಮ ತೀವ್ರ ಖಂಡನೆ, ಧಿಕ್ಕಾರವಿದೆ. ಇನ್ನು ನೂರು ವರ್ಷ ಪ್ರಯತ್ನಿಸಿದರೂ ಅವರ ಕನಸು ಈಡೇರುವುದಿಲ್ಲ. ಈಗಾಗಲೇ ನಮ್ಮ ಮುಖ್ಯಮಂತ್ರಿಗಳು ತಕ್ಕ ಉತ್ತರ ನೀಡಿದ್ದಾರೆ. ಎಂತಹದ್ದೇ ಪರಿಸ್ಥಿತಿ ಬಂದರೂ ರಾಜ್ಯದ ಒಂದಿಂಚೂ ಭೂಮಿ ಬಿಡಲಾಗಲ್ಲ. ಅಂತಹ ಪರಿಸ್ಥಿತಿ ಬಂದರೆ ಮೊದಲು ಶಾಂತಿ, ನಂತರ ಶಕ್ತಿ ಮತ್ತು ಯುಕ್ತಿಯಿಂದ ಹೋರಾಟಕ್ಕೂ ಸಿದ್ಧ ಎಂಬ ಸಂದೇಶ ನೀಡಬೇಕೆಂದು ಆಗ್ರಹಿಸಿದರು.