ಅಡಕೆ ಬೆಳೆ ಸಮಸ್ಯೆಗಳಿಗೆ ಕೇಂದ್ರದಿಂದ ಪರಿಹಾರ, ಆತಂಕ ಪಡುವ ಅಗತ್ಯ ಇಲ್ಲ: ಸಚಿವ ಪ್ರಹ್ಲಾದ್ ಜೋಶಿ

ಅಡಕೆ ಹವ್ಯಕ ಸಮುದಾಯದ ಮೂಲ ಕೃಷಿ. ಮದುವೆಯಿಂದ ಶ್ರಾದ್ಧದವರೆಗೆ ಅಡಕೆ ಅತ್ಯಗತ್ಯ. ಆದರೆ, ಅಡಕೆ ಕುರಿತು ಅನೇಕ ರೀತಿಯ ವರದಿಗಳು ಬಂದಿವೆ. ಎಷ್ಟೇ ವರದಿ ಗಳು ಬಂದರೂ ಅಡಕೆ ಬೆಳೆಗಾರರು ಯಾವುದೇ ರೀತಿಯಲ್ಲೂ ಭಯಪಡುವ ಅವಶ್ಯಕತೆಯಿಲ್ಲ. ಏನೇ ಸಮಸ್ಯೆಗಳು ಎದುರಾದರೂ ಕೇಂದ್ರ ಸರ್ಕಾರ ಅಡಕೆ ಬೆಳೆಗಾರರ ಪರವಾಗಿರಲಿದೆ ಎಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Central Government Solution to Nut Crop Problems Says Union Minister Pralhad Joshi grg

ಬೆಂಗಳೂರು(ಡಿ.28):  ಹವ್ಯಕ ಸಮಾಜದವರ ಮೂಲ ಕೃಷಿಯಾದ ಅಡಕೆ ಉತ್ಪನ್ನದ ಕುರಿತು ಯಾವುದೇ ರೀತಿಯ ವಿರೋಧಾ ಭಿಪ್ರಾಯಗಳು ವ್ಯಕ್ತವಾದರೂ ಕೇಂದ್ರ ಸರ್ಕಾರ ಅದರ ಬಗ್ಗೆ ಚಿಂತಿಸದೆ, ಅಡಕೆ ಬೆಳೆ ಪರವಾಗಿ ರಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭರವಸೆ ನೀಡಿದ್ದಾರೆ. 

ಶ್ರೀ ಅಖಿಲ ಹವ್ಯಕ ಮಹಾಸಭಾದಿಂದ ಅರಮನೆ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ 3 ದಿನಗಳ 'ತೃತೀಯ ವಿಶ್ವ ಹವ್ಯಕ ಸಮ್ಮೇಳನ'ಕ್ಕೆ ಚಾಲನೆ ನೀಡಿ ಮಾತನಾಡಿ, ಅಡಕೆ ಹವ್ಯಕ ಸಮುದಾಯದ ಮೂಲ ಕೃಷಿ. ಮದುವೆಯಿಂದ ಶ್ರಾದ್ಧದವರೆಗೆ ಅಡಕೆ ಅತ್ಯಗತ್ಯ. ಆದರೆ, ಅಡಕೆ ಕುರಿತು ಅನೇಕ ರೀತಿಯ ವರದಿಗಳು ಬಂದಿವೆ. ಎಷ್ಟೇ ವರದಿ ಗಳು ಬಂದರೂ ಅಡಕೆ ಬೆಳೆಗಾರರು ಯಾವುದೇ ರೀತಿಯಲ್ಲೂ ಭಯಪಡುವ ಅವಶ್ಯಕತೆಯಿಲ್ಲ. ಏನೇ ಸಮಸ್ಯೆಗಳು ಎದುರಾದರೂ ಕೇಂದ್ರ ಸರ್ಕಾರ ಅಡಕೆ ಬೆಳೆಗಾರರ ಪರವಾಗಿರಲಿದೆ ಎಂದು ತಿಳಿಸಿದರು. 

ಸರ್ಕಾರಿ ಹಣದಲ್ಲಿ ಕಾಂಗ್ರೆಸ್ ಅಧಿವೇಶನ: ಯಾರದೋ ದುಡ್ಡು, ಯಲ್ಲಮ್ಮನ ಜಾತ್ರೆ ಎಂದ ಪ್ರಹ್ಲಾದ ಜೋಶಿ

ಹಿಂದೂ ಧರ್ಮದಲ್ಲಿ ಜಾತಿ ಆಧಾರಿತ ಗುಣಗಳಿವೆ. ಆದರೆ, ಅದೆಲ್ಲವನ್ನೂ ಮೀರಿ ಹವ್ಯಕ ಸೇರಿ ಬ್ರಾಹ್ಮಣ ಸಮುದಾಯ ಸಮಾಜವನ್ನು ಒಗ್ಗೂಡಿಸಿ ಸಾಗುವ ಕೆಲಸ ಮಾಡುತ್ತಿದೆ. ರಾಮಾಯಣದಲ್ಲಿ ರಾಮ ನಾಯಕನಾಗಿದ್ದರೆ, ವಾಲ್ಮೀಕಿ ಅದನ್ನು ರಚಿಸಿದ. ಅವರಿಬ್ಬರೂ ಬ್ರಾಹ್ಮಣ ಸಮುದಾ ಯಕ್ಕೆ ಸೇರಿದವರಲ್ಲ. ಆದರೆ, ಬ್ರಾಹ್ಮಣನಾದ ರಾವಣ ಖಳನಾಯಕನಾಗಿದ್ದಾನೆ. ಹೀಗಾಗಿ ರಾಮನನ್ನು ನಾವು ಪೂಜಿಸುತ್ತೇವೆ. ಸಮಾಜ ದಲ್ಲಿ ಸಾಮರಸ್ಯ ಕಾಪಾಡುವಲ್ಲಿ ಬ್ರಾಹ್ಮಣ ಸಮುದಾಯ ಮಹತ್ವದ ಪಾತ್ರವಹಿಸುತ್ತಿದೆ ಎಂದು ಹೇಳಿದರು.

ಹವ್ಯಕ ಸಮ್ಮೇಳನ: ಮೊದಲ ದಿನ ಜನಸಾಗರ

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಭಾನುವಾರದವರೆಗೆ ನಡೆಯಲಿರುವ ಐತಿಹಾಸಿಕ ತೃತೀಯ ವಿಶ್ವ ಹವ್ಯಕ ಸಮ್ಮೇಳನಕ್ಕೆ ಶುಕ್ರವಾರ ವಿದ್ಯುಕ್ತ ಚಾಲನೆ ದೊರೆಯಿತು. ಹವ್ಯಕರ ಹಬ್ಬಕ್ಕೆ ಮೊದಲ ದಿನವೇ ಕಿಕ್ಕಿರಿದ ಸಂಖ್ಯೆಯಲ್ಲಿ ಸೇರಿದ್ದ ಸಮುದಾಯದ ಜನ ತಮ್ಮ ವಿಶಿಷ್ಟ ಸಂಸ್ಕೃತಿಯ ಅನಾವರಣಕ್ಕೆ ಸಾಕ್ಷಿಯಾದರು. ಅಖಿಲ ಹವ್ಯಕ ಮಹಾಸಭಾದಿಂದ ಆಯೋಜಿಸಲಾಗಿರುವ ಈ ಹಬ್ಬಕ್ಕೆ ಎಲ್ಲ ಸಮುದಾಯದವರಿಗೂ ಆಹ್ವಾನ ನೀಡಿದ್ದು ಹವ್ಯಕರ ಆರೋಗ್ಯಪೂರ್ಣ ಭೋಜನ, ತಿಂಡಿ, ತಿನಿಸು ಸವಿಯಲು ಹಾಗೂ ಪ್ರತಿಭೆ, ಕಲೆ, ಸಂಸ್ಕೃತಿ ವೀಕ್ಷಿ ಸಲು ವಿವಿಧ ಸಮುದಾಯಗಳ ಗಣ್ಯರು, ಜನರೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಸೇರಿ ವಿವಿಧ ಸಂತಶ್ರೇಷ್ಠರ ಸಾನ್ನಿಧ್ಯ ಹಾಗೂ ಕೇಂದ್ರ ಆಹಾರ ಪೂರೈಕೆ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಪ್ರಲ್ಲಾದ್ ಜೋಶಿ ಸೇರಿ ದೇಶ-ವಿದೇಶ ಗಳಗಣ್ಯಮಾನ್ಯರು ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಅಹಿಚ್ಚತ್ರದಿಂದ ತರಲಾದ ಜ್ಯೋತಿಯಿಂದ ದೀಪ ಬೆಳಗುವ ಮೂಲಕ ಸಮ್ಮೇಳನ ಉದ್ಘಾಟನೆಗೊಂಡಿತು. ತಮ್ಮ ಸಮುದಾಯದ ಹಬ್ಬಕ್ಕೆ ಬೆಂಗಳೂರು ಮಾತ್ರವಲ್ಲದೆ ಶಿರಸಿ, ಸಿದ್ದಾಪುರ, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ ಮೊದಲಾದ ಭಾಗಗಳಿಂದ ಹವ್ಯಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದಿನವಿಡೀ ಪಾಲ್ಗೊಂಡರು. ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ, ಅದಕ್ಕೆ ಸ್ವಾಮೀಜಿಗಳು ಹಾಗೂ ಗಣ್ಯರಿಂದ ಪರಿಹಾರಾತ್ಮಕ ಹರಿದುಬಂದವು.

ಸರ್ಕಾರ ಒಂದೇ ಇರಲ್ಲ, ಬದಲಾಗುತ್ತೆ..; ಬೆಳಗಾವಿ ಪೊಲೀಸ್ ಕಮಿಷನರ್‌ಗೆ ಕೇಂದ್ರ ಸಚಿವ ಜೋಶಿ ವಾರ್ನ್!

ಸಹಸ್ರ ಚಂದ್ರದರ್ಶನ 

ಹವ್ಯಕ ಮಹಾಸಭೆ ಪ್ರಾರಂಭಗೊಂಡು 81 ವರ್ಷ 4 ತಿಂಗಳು ಪೂರೈಸಿದ್ದು, ಇದಕ್ಕೆ ಸಹಸ್ರ ಚಂದ್ರ ದರ್ಶನ ಎಂದು ಕರೆಯಲಾಗುತ್ತದೆ. ಅದರ ಅಡಿಯಲ್ಲೇ ಸಮ್ಮೇಳನ ಆಯೋಜಿಸ ಲಾಗಿದೆ. ಅಲ್ಲದೆ, ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಅಹಿಚ್ಛತ್ರದ ಶ್ರೀ ರಾಮ ಕ್ಷೇತ್ರದಿಂದ ತರಲಾಗಿದ್ದ ಜ್ಯೋತಿಯಿಂದ ಸಮ್ಮೇಳನದ ಉದ್ಘಾಟನಾ ಜ್ಯೋತಿ ಬೆಳಗಿಸಿದ್ದು ವಿಶೇಷ.

ಪ್ರತಿ ವಿಭಾಗದಲ್ಲೂ 81 ಪ್ರಶಸ್ತಿ ಪ್ರದಾನ 

ಉದ್ಘಾಟನಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರ ದಲ್ಲಿ ಸಾಧನೆ ಮಾಡಿದ ಹವ್ಯಕ ಸಮುದಾಯಕ್ಕೆ ಸೇರಿದ 81 ಮಂದಿಗೆ ಹವ್ಯಕ ಸಾಧಕರತ್ನ ಪ್ರಶಸ್ತಿ ಹಾಗೂ ಸಮಾಜದ 81 ಉತ್ತಮ ರೈತರಿಗೆ ಹವ್ಯಕ ಕೃಷಿರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

Latest Videos
Follow Us:
Download App:
  • android
  • ios