ಬೆಂಗಳೂರು, (ಜ.29): ಒಂದೆಡೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಆಯ್ದೆ ವಿರುದ್ಧ ದೆಹಲಿಯಲ್ಲಿ ರೈತರ ಪ್ರತಿಭಟನೆ ತೀವ್ರ ಸ್ವರೂಪಪಡೆದುಕೊಂಡಿದೆ.

ಜನವರಿ 26 ಗಣರಾಜ್ಯೋತ್ಸವದಂದು ರೈತರು ಟ್ರ್ಯಾಕ್ಟರ್ ರ್ಯಾಲಿ ಮಾಡಿದರು. ಇತ್ತ ಇದಕ್ಕೆ ರಾಜ್ಯದಲ್ಲೂ ಸಹ ಟ್ರ್ಯಾಕ್ಟರ್ ಮೆರವಣಿಗೆ ನಡೆಸಲಾಯ್ತು.

ಖತರ್ನಾಕ್ ಖಲಿಸ್ತಾನ್ ರಕ್ತಚರಿತ್ರೆ: ರೈತ ಹೋರಾಟದಲ್ಲಿ ಬೇಳೆ ಬೇಯಿಸಿಕೊಂಡವರ ಕರಾಳ ಕಥೆ

ಇದೀಗ ನಾಳೆ (ಜನವರಿ 30) ಮಹಾತ್ಮ ಗಾಂಧಿಜೀ ಹುತಾತ್ಮರಾದ ದಿನ. ಈ ಹಿನ್ನೆಲೆ ರೈತರ ಮೇಲೆ ನಡೆದಿರುವ ಹಲ್ಲೆ, ದೌರ್ಜನ್ಯವನ್ನು ಖಂಡಿಸಿ ರೈತರ ಕರಾಳ ದಿನವಾಗಿ ಆಚರಣೆ ಮಾಡಲು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಕರೆ ಕೊಟ್ಟಿದ್ದಾರೆ.

ರಾಷ್ಟ್ರಪಿತ ಮಹಾತ್ಮ ಗಾಂಧಿಗೆ ನಮನ ಸಲ್ಲಿಸಿ ನಾಳೆ (ಶನಿವಾರ) ಬೆಳಗ್ಗೆ 11-30ಕ್ಕೆ ಫ್ರೀಡಂ ಪಾರ್ಕ್​ನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತರ ಕರಾಳ ದಿನವಾಗಿ ಆಚರಣೆ ಮಾಡಲಾಗುತ್ತದೆ. ರಾಜ್ಯದ ಎಲ್ಲಾ ಭಾಗಗಳಲ್ಲೂ ರೈತರು ಎಡಗೈಗೆ ಕಪ್ಪು ಬಟ್ಟೆಯ ಪಟ್ಟಿ ಧರಿಸಿ ಕರಾಳ ದಿನವಾಗಿ ಆಚರಣೆ ಮಾಡಿ ಎಂದು ತಿಳಿಸಿದರು.