ಬೆಂಗಳೂರು (ಮೇ.26):  ತಮಗೆ ವಾಟ್ಸ್‌ ಆ್ಯಪ್‌ನಲ್ಲಿ ಲೈಂಗಿಕ ಕ್ರಿಯೆಯ ಎರಡು ವಿಡಿಯೋಗಳನ್ನು ಕಳುಹಿಸಿ ಹಣಕ್ಕೆ ಯುವತಿ ಬೇಡಿಕೆ ಇಟ್ಟಿದ್ದಳು ಎಂಬ ಸಂಗತಿಯನ್ನು ಎಸ್‌ಐಟಿ ಮುಂದೆ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ.

‘ಅಶ್ಲೀಲ ವಿಡಿಯೋಗಳು ಬಹಿರಂಗವಾಗುವ ಮೊದಲೇ ಅವು ನನಗೆ ಲಭ್ಯವಾಗಿದ್ದವು. ನನ್ನೊಂದಿಗೆ ಸಲುಗೆಯಿಂದ ಇದ್ದ ಯುವತಿ ಏಕಾಏಕಿ ಬದಲಾಗಿದ್ದಳು. ನನಗೆ ಗೊತ್ತಿಲ್ಲದಂತೆ ಗೌಪ್ಯವಾಗಿ ಆಕೆಯೊಂದಿಗೆ ನಾನು ಕಳೆದಿದ್ದ ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಿಕೊಂಡಿದ್ದಳು’ ಎಂದು ಅತ್ಯಾಚಾರ ಪ್ರಕರಣದ ತನಿಖಾಧಿಕಾರಿ ಮುಂದೆ ಮಾಜಿ ಸಚಿವರು ಹೇಳಿರುವುದಾಗಿ ತಿಳಿದು ಬಂದಿದೆ.

ಸೀಡಿಯಲ್ಲಿದ್ದದ್ದು ನಾನೇ: ರೇಪ್‌ ಮಾಡಿಲ್ಲ, ಸಮ್ಮತಿಯ ಸೆಕ್ಸ್‌: ಜಾರಕಿಹೊಳಿ ಕೇಸಿಗೆ ಟ್ವಿಸ್ಟ್‌! ..

‘ಕೆಲ ದಿನಗಳ ಹಿಂದೆಯೇ ನನಗೆ ವಾಟ್ಸ್‌ ಆ್ಯಪ್‌ನಲ್ಲಿ ಆಶ್ಲೀಲ ವಿಡಿಯೋ ಕಳುಹಿಸಿ ದೊಡ್ಡ ಮೊತ್ತಕ್ಕೆ ಆಕೆ ಬೇಡಿಕೆ ಇಟ್ಟಿದ್ದಳು. ಆ ವಿಡಿಯೋಗಳನ್ನು ನೋಡಿ ನನಗೆ ಕೋಪ ಬಂದಿತು. ಆಕೆ ಇಂಥ ನೀಚತನ ತೋರಿಸುತ್ತಾಳೆ ಎಂದು ಭಾವಿಸಿರಲಿಲ್ಲ. ಆಕೆಯ ನಡವಳಿಕೆಯಿಂದ ಆಘಾತವಾಯಿತು. ಆಗ ಆಕೆಗೆ ಬೈದು ಬುದ್ಧಿಮಾತು ಹೇಳಿದೆ. ಕೊನೆಗೆ ಮರ್ಯಾದೆಗೆ ಅಂಜಿ ಆಕೆಗೆ ಅಲ್ಪ ಪ್ರಮಾಣದ ಹಣವನ್ನು ಸಹ ಕೊಟ್ಟಿದ್ದೆ. ಆದರೆ ಮತ್ತೆ ಮತ್ತೆ ಹಣಕ್ಕೆ ಒತ್ತಾಯಿಸಿದ್ದಾಗ ನಾನು ನಿರಾಕರಿಸಿದೆ.

ಇದಾದ ಕೆಲ ಸಮಯದ ಬಳಿಕ ಆಕೆಯ ಪರವಾಗಿ ಖಾಸಗಿ ಸುದ್ದಿವಾಹಿನಿಯ ಪತ್ರಕರ್ತ ಅಂತ ಹೇಳಿಕೊಂಡು ವ್ಯಕ್ತಿಯೊಬ್ಬ ಕರೆ ಮಾಡಿದ್ದ. ಆಗಲೂ ಹಣ ನೀಡಲು ಒಪ್ಪದೆ ಹೋದಾಗ ಅಶ್ಲೀಲ ವಿಡಿಯೋಗಳು ಬಹಿರಂಗ ಮಾಡಿದ್ದಾರೆ. ನನ್ನ ರಾಜಕೀಯ ಜೀವನವನ್ನು ಹಾಳುವ ದುರುದ್ದೇಶದಿಂದಲೇ ರಾಜಕೀಯ ವೈರಿಗಳು ಕೈ ಜೋಡಿಸಿದ್ದಾರೆ. ಇದೊಂದು ದೊಡ್ಡ ಪಿತೂರಿಯಾಗಿದೆ’ ಎಂದು ಮಾಜಿ ಸಚಿವರು ಆರೋಪಿಸಿದ್ದಾರೆ ಎನ್ನಲಾಗಿದೆ.