ಬೆಂಗಳೂರು (ಮೇ.30): ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿದ್ದ ಬ್ಲ್ಯಾಕ್‌ಮೇಲ್‌ ಪ್ರಕರಣ ಸಂಬಂಧ ಶಂಕಿತ ಆರೋಪಿಗಳಾದ ನರೇಶ್‌ಗೌಡ ಮತ್ತು ಶ್ರವಣ್‌ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ಸಿದ್ಧತೆ ಮಾಡಿಕೊಂಡಿದೆ.

ಪ್ರಕರಣ ಸಂಬಂಧ ಆರೋಪಿಗಳು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸುತ್ತಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಶನಿವಾರ ಆಕ್ಷೇಪಣೆ ಸಲ್ಲಿಸುವುದಾಗಿ ಎಸ್‌ಐಟಿ ತಿಳಿಸಿತ್ತು. ಆದರೆ, ತಾಂತ್ರಿಕ ಕಾರಣದಿಂದಾಗಿ ಸೋಮವಾರ ಸಲ್ಲಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. 

'ಹಣಕ್ಕಾಗಿ ‘ಸೀಡಿ ಲೇಡಿ’ ಬ್ಲಾಕ್‌ಮೇಲ್‌! ಜಾರಕಿಹೊಳಿ ಬಿಚ್ಚಿಟ್ಟ ಮಾಹಿತಿ ...

ಸೀಡಿ ಪ್ರಕರಣದಲ್ಲಿ ನರೇಶ್‌ ಹಾಗೂ ಶ್ರವಣ್‌ ಪ್ರಮುಖ ಪಾತ್ರ ವಹಿಸಿರುವ ಸಂಬಂಧ ದಾಖಲೆಗಳನ್ನು ಎಸ್‌ಐಟಿ ಕಲೆ ಹಾಕಿದೆ. ಸಿಸಿಟಿವಿ ದೃಶ್ಯಗಳು, ಕ್ಯಾಮರಾ ಖರೀದಿಸಿರುವುದು ಸೇರಿ ಇನ್ನಿತರ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಿ ಜಾಮೀನು ನೀಡದಂತೆ ಆಕ್ಷೇಪಣೆ ಸಲ್ಲಿಸಲಾಗುವುದು ಎಂದು ಎಸ್‌ಐಟಿ ಮೂಲಗಳು ಮಾಹಿತಿ ನೀಡಿವೆ.