ಅಪ್ರಾಪ್ತರಿಗೆ ಮದ್ಯ ಹಾಗೂ ಸಿಗರೆಟ್‌ ಮಾರಾಟ ಸೇರಿದಂತೆ ಇತರೆ ನಿಯಮಗಳನ್ನು ಉಲ್ಲಂಘಿಸುತ್ತಿರುವ ದೂರಿನ ಮೇರೆಗೆ ಸಿಸಿಬಿ ಪೊಲೀಸರು ನಗರದ ಸುಮಾರು 700ಕ್ಕೂ ಹೆಚ್ಚು ಪಬ್‌, ಡಿಸ್ಕೋಥೆಕ್‌ ಮತ್ತು ಬಾರ್‌ ಮತ್ತು ರೆಸ್ಟೋರೆಂಟ್‌ಗಳ ಮೇಲೆ ಶುಕ್ರವಾರ ರಾತ್ರಿ ದಿಢೀರ್‌ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ.

ಬೆಂಗಳೂರು (ಸೆ.10) :  ಅಪ್ರಾಪ್ತರಿಗೆ ಮದ್ಯ ಹಾಗೂ ಸಿಗರೆಟ್‌ ಮಾರಾಟ ಸೇರಿದಂತೆ ಇತರೆ ನಿಯಮಗಳನ್ನು ಉಲ್ಲಂಘಿಸುತ್ತಿರುವ ದೂರಿನ ಮೇರೆಗೆ ಸಿಸಿಬಿ ಪೊಲೀಸರು ನಗರದ ಸುಮಾರು 700ಕ್ಕೂ ಹೆಚ್ಚು ಪಬ್‌, ಡಿಸ್ಕೋಥೆಕ್‌ ಮತ್ತು ಬಾರ್‌ ಮತ್ತು ರೆಸ್ಟೋರೆಂಟ್‌ಗಳ ಮೇಲೆ ಶುಕ್ರವಾರ ರಾತ್ರಿ ದಿಢೀರ್‌ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ.

ಡ್ರಾಪ್‌ ಕೊಡುವ ನೆಪದಲ್ಲಿ ಕಾರಿಗೆ ಹತ್ತಿಸಿಕೊಂಡು ನಿರ್ಜನ ಪ್ರದೇಶದಲ್ಲಿ ಸುಲಿಗೆ: ಆರೋಪಿಗಳು ಅರೆಸ್ಟ್

ನಿಯಮ ಉಲ್ಲಂಘಿಸಿ ಅವಧಿ ಮೀರಿ ತೆರೆದಿರುವುದು ಹಾಗೂ 18 ವರ್ಷದ ಕೆಳಗಿನವರಿಗೆ ತಂಬಾಕು/ಸಿಗರೆಟ್‌ ಮತ್ತು ಮದ್ಯ ಮಾರಾಟ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ಹಲವು ದೂರುಗಳ ಬಂದಿದ್ದವು. ಈ ಹಿನ್ನೆಲೆಯಲ್ಲಿ ಪಬ್‌, ಹೋಟೆಲ್‌ಗಳು, ಡಿಸ್ಕೋಥೆಕ್‌ಗಳು ಹಾಗೂ ಹುಕ್ಕಾ ಬಾರ್‌ಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಒಟ್ಟು 701 ಸ್ಥಳಗಳಲ್ಲಿ ಪರಿಶೀಲಿಸಲಾಗಿದ್ದು, ಇದರಲ್ಲಿ 390 ಕಡೆ ನಿಯಮ ಉಲ್ಲಂಘನೆ ಮಾಡಿರುವುದು ಪತ್ತೆಯಾಗಿದೆ. ಈ ಸಂಬಂಧ 480 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಪದೇ ಪದೇ ನಿಯಮ ಉಲ್ಲಂಘಿಸುವವರ ವಿರುದ್ಧ ಮಾರಾಟ ಪರವಾನಗಿಯನ್ನು ರದ್ದುಪಡಿಸಲಾಗುತ್ತದೆ ಎಂದು ಹೆಚ್ಚುವರಿ ಆಯುಕ್ತ (ಪಶ್ಚಿಮ) ಎನ್‌.ಸತೀಶ್‌ ಕುಮಾರ್‌ ಎಚ್ಚರಿಕೆ ನೀಡಿದ್ದಾರೆ. 

ಬೆಂಗಳೂರು: ಸ್ಕ್ಯಾನಿಂಗ್‌ಗೆ ಬಂದಿದ್ದ ಯುವತಿ ಜತೆ ಅಸಭ್ಯ ವರ್ತನೆ: ಟೆಕ್ನಿಶಿಯನ್‌ ಜೈಲಿಗೆ

ಪಬ್‌, ಬಾರ್‌, ಹೋಟೆಲ್‌ ಮಾಲಿಕರಿಗೆ ಸೂಚನೆಗಳು

  • ಕಾನೂನು ಅಡಿಯಲ್ಲಿ ನೀಡಿರುವ ಪರವಾನಗಿಯಲ್ಲಿರುವ ನಿಯಮ, ಷರತ್ತು, ಸೂಚನೆ ತಪ್ಪದೆ ಪಾಲಿಸಬೇಕು
  • ಕೋಟ್ಪಾ ಕಾಯ್ದೆಯ ಸೆಕ್ಷನ್‌ 6ರ ಆದೇಶದಂತೆ 18 ವರ್ಷದ ಕೆಳಗಿನವರಿಗೆ ತಂಬಾಕು, ಸಿಗರೆಟ್‌ ಮಾರಾಟ ಮಾಡಬಾರದು
  • ಅಬಕಾರಿ ನಿಯಮದನ್ವಯ 21 ವರ್ಷದ ಕೆಳಗಿನ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡಬಾರದು
  • 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ತಂಬಾಕು, ಸಿಗರೆಟ್‌ ಹಾಗೂ ಮದ್ಯ ಮಾರಾಟ ಮಾಡಿದರೆ ಕಠಿಣ ಕಾನೂನು ಕ್ರಮ