ಬೆಂಗಳೂರು: ಸ್ಕ್ಯಾನಿಂಗ್‌ಗೆ ಬಂದಿದ್ದ ಯುವತಿ ಜತೆ ಅಸಭ್ಯ ವರ್ತನೆ: ಟೆಕ್ನಿಶಿಯನ್ ಜೈಲಿಗೆ
ಅನಾರೋಗ್ಯ ಹಿನ್ನೆಲೆಯಲ್ಲಿ ಸ್ಕ್ಯಾನಿಂಗ್ ಗೆಬಂದಿದ್ದ ಯುವತಿ ಜತೆ ಅನುಚಿತ ವರ್ತನೆ ತೋರಿದ ಆರೋಪದ ಮೇರೆಗೆ ವಿಕ್ಟೋರಿಯಾ ಆಸ್ಪತ್ರೆಯ ಲ್ಯಾಬ್ ಟೆಕ್ನಿಶಿಯನ್‌ವೊಬ್ಬನನ್ನು ವಿ.ವಿ.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಸೆ.10) : ಅನಾರೋಗ್ಯ ಹಿನ್ನೆಲೆಯಲ್ಲಿ ಸ್ಕ್ಯಾನಿಂಗ್ ಗೆ ಬಂದಿದ್ದ ಯುವತಿ ಜತೆ ಅನುಚಿತ ವರ್ತನೆ ತೋರಿದ ಆರೋಪದ ಮೇರೆಗೆ ವಿಕ್ಟೋರಿಯಾ ಆಸ್ಪತ್ರೆಯ ಲ್ಯಾಬ್ ಟೆಕ್ನಿಶಿಯನ್‌ವೊಬ್ಬನನ್ನು ವಿ.ವಿ.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯ ನೌಕರ ಚುಂಗಾರ್ ಬಂಧಿತನಾಗಿದ್ದು, ಲ್ಯಾಬ್‌ಗೆ ಸ್ಯಾ$್ಕನಿಂಗ್‌ಗೆ ಬಂದಿದ್ದ ಬೀದರ್ ಜಿಲ್ಲೆಯ 19 ವರ್ಷದ ಯುವತಿ ಜತೆ ಆರೋಪಿ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಲೈಂಗಿಕ ಕಿರುಕುಳ (ಐಪಿಸಿ 354) ಅಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
85ರ ಅಜ್ಜಿಯ ಮೃತದೇಹವನ್ನೂ ಬಿಡದ ಕಾಮಪಿಶಾಚಿ: ಹಾಸನದಲ್ಲಿ ಪೈಶಾಚಿಕ ಘಟನೆ
ಮಂಡ್ಯ ಜಿಲ್ಲೆಯ ಚುಂಗಾರ್, ವಿಕ್ಟೋರಿಯಾ ಆಸ್ಪತ್ರೆಯ ಲ್ಯಾಬ್‌ನಲ್ಲಿ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದ. ಆಸ್ಪತ್ರೆಯ ನೌಕರರ ಕ್ವಾರ್ಟರ್ಸ್‌ನಲ್ಲೇ ಆತ ನೆಲೆಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗೆ ಸ್ಯಾ$್ಕನಿಂಗ್ ಬಂದಿದ್ದಾಗ ವೃದ್ಧೆ ಜತೆ ಅಸಭ್ಯ ವರ್ತನೆ ತೋರಿದ್ದ ಖಾಸಗಿ ಆಸ್ಪತ್ರೆಯ ಲ್ಯಾಬ್ ಟೆಕ್ನಿಶಿಯನ್‌ನನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದು, ಒಂದು ವಾರದ ಅವಧಿಯಲ್ಲಿ ಮತ್ತೊಬ್ಬ ಲ್ಯಾಬ್ ಟೆಕ್ನಿಶಿಯನ್ ಜೈಲು ಪಾಲಾಗಿದ್ದಾನೆ.
ವರದಕ್ಷಿಣೆ ಕಿರುಕುಳ ವ್ಯಕ್ತಿಗೆ ಮೂರುವರೆ ವರ್ಷ ಜೈಲು ಶಿಕ್ಷೆ
ಮೈಸೂರು : ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ವ್ಯಕ್ತಿಗೆ ಮೈಸೂರಿನ 5ನೇ ಎಎಸ್ಸಿಜೆ ನ್ಯಾಯಾಲಯವು ಮೂರೂವರೆ ವರ್ಷ ಜೈಲು ಶಿಕ್ಷೆ ಹಾಗೂ 16 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
2008ರಲ್ಲಿ ಆರೋಪಿಯು ತನ್ನ ಪತ್ನಿಗೆ ವರದಕ್ಷಿಣೆಯಾಗಿ ಹೆಚ್ಚುವರಿ ಹಣವನ್ನು ತರುವಂತೆ ಹಿಂಸೆ ನೀಡಿ ಸೀಮೆಎಣ್ಣೆ ಹಾಕಿ ಸಾಯಿಸಿ ಬೇರೆ ಮದುವೆಯಾಗುವುದಾಗಿ ಬೆದರಿಕೆ ಹಾಕುತ್ತಿದ್ದ. ಈ ಸಂಬಂಧ ಪತ್ನಿ ನೀಡಿದ ದೂರಿನ ಮೇರೆಗೆ ಮೈಸೂರು ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತು ವರದಕ್ಷಿಣೆ ನಿಷೇದ ಕಾಯ್ದೆ ಪ್ರಕರಣದ ದಾಖಲಾಗಿದ್ದು. ಈ ಪ್ರಕರಣದಲ್ಲಿ ತನಿಖೆ ನಡೆಸಿದ ಆಗಿನ ಇನ್ಸ್ ಪೆಕ್ಟರ್ ಎಸ್. ಸತ್ಯವತಿ ಮತ್ತು ಎಸ್ಐ ಚಂದ್ರಕಲಾ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ಮಂಗಳೂರು: ಪೊಲೀಸರ ಮೇಲೆ ಠಾಣೆಯಲ್ಲೇ ಯುವತಿ ಹಲ್ಲೆ; 'ಡ್ರಗ್ ಅಡಿಕ್ಟ್' ವಿಡಿಯೋ ವೈರಲ್ ಅಸಲಿಯತ್ತೇನು?
ಈ ಪ್ರಕರಣದ ವಿಚಾರಣೆ ನಡೆಸಿದ 5ನೇ ಎಎಸ್ಸಿಜೆ ನ್ಯಾಯಾಲಯದ ನ್ಯಾಯಾಧೀಶರು ಆರೋಪ ಸಾಬೀತಾಗಿದೆ ಎಂದು ಮೂರುವರೆ ವರ್ಷ ಕಾರಾಗೃಹ ಶಿಕ್ಷೆ ಹಾಗೂ 16 ಸಾವಿರ ದಂಡವನ್ನು ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಸಹಾಯಕ ಅಭಿಯೋಜಕಿ ವನಿತಾ ವಾದಿಸಿದ್ದರು.