ಡ್ರಗ್ಸ್‌ ಕೇಸ್‌: ಫ್ಯಾಷನ್‌ ಗುರುಗೆ ಸಿಸಿಬಿ ಬುಲಾವ್‌

ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿ| ಇಂದು ಸಿಸಿಬಿ ಮುಂದೆ ಹೇಳಿಕೆ| ಡ್ರಗ್‌ ಕಿಂಗ್‌ಪಿನ್‌, ನಟಿಯರೊಂದಿಗೆ ಸ್ನೇಹ ಹಿನ್ನೆಲೆ| ಸ್ವಂತ ಸಂಸ್ಥೆ ಹೊಂದಿರುವ ಫ್ಯಾಷನ್‌ ಗುರು ರಮೇಶ್‌ ದೆಂಬಲ್‌| ವೀರೇನ್‌ ಖನ್ನಾ, ಆದಿತ್ಯ ಆಳ್ವಾ, ರಾಗಿಣಿ, ಸಂಜನಾ ಜತೆ ಸ್ನೇಹ| ಹಲವು ಡ್ರಗ್ಸ್‌ ಪಾರ್ಟಿಗಳಲ್ಲಿ ಭಾಗವಹಿಸಿದ್ದ ಆರೋಪ| 

CCB Notice to Ramesh Dengel on Drug Mafia Casegrg

ಬೆಂಗಳೂರು(ಸೆ.26): ಮಾದಕ ವಸ್ತು ಮಾರಾಟದ ಜಾಲವನ್ನು ಸಿಸಿಬಿ ಬಿಡಿಸಿದಂತೆ ‘ವಿಐಪಿ ಕುಳ’ಗಳ ಮಾದಕ ಚರಿತ್ರೆ ಹೊರಬರುತ್ತಿದ್ದು, ಈಗ ಫ್ಯಾಷನ್‌ ಲೋಕದ ದಿಗ್ಗಜ ರಮೇಶ್‌ ದೆಂಬಲ್‌ಗೆ ಶನಿವಾರ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್‌ ನೀಡಿದೆ.

ಈ ನೋಟಿಸ್‌ ಹಿನ್ನೆಲೆಯಲ್ಲಿ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಬೆಳಗ್ಗೆ 10.30ಕ್ಕೆ ತನಿಖಾಧಿಕಾರಿಗಳ ಮುಂದೆ ರಮೇಶ್‌ ಹಾಜರಾಗಲಿದ್ದಾನೆ. ಮಾದಕ ವಸ್ತು ಮಾರಾಟ ಪ್ರಕರಣ ಸಂಬಂಧ ಆರೋಪಿಗಳ ಜತೆ ಆತ್ಮೀಯ ಒಡನಾಟ ಹಾಗೂ ರಂಗು ರಂಗಿನ ಪಾರ್ಟಿಗಳಲ್ಲಿ ಮೋಜು ಮಸ್ತಿ ನಡೆಸಿದ್ದ ಆರೋಪದ ಮೇರೆಗೆ ಫ್ಯಾಷನ್‌ ಗುರುವಿಗೆ ಸಿಸಿಬಿ ತನಿಖೆ ಬಿಸಿ ಮುಟ್ಟಿದೆ ಎಂದು ಮೂಲಗಳು ಹೇಳಿವೆ.

ತರುಣ್ ರಾಜ್ ಚಾಟ್‌ ಹಿಸ್ಟರಿಯಲ್ಲಿ ಅನುಶ್ರೀ ಹೆಸರು; ಸಿಸಿಬಿ ವಿಚಾರಣೆಯಲ್ಲಿ ನಿರೂಪಕಿ

ನಟಿಯರ ಸಂಗ ತಂದ ಸಂಕಟ:

ಬೆಂಗಳೂರಿನ ಫ್ಯಾಷನ್‌ ಲೋಕದ ಸ್ಟಾರ್‌ ಆಗಿರುವ ರಮೇಶ್‌, ಸ್ವಂತ ಸಂಸ್ಥೆಯನ್ನು ಸಹ ಹೊಂದಿದ್ದಾನೆ. ಹಲವು ರೂಪದರ್ಶಿಗಳನ್ನು ಫ್ಯಾಷನ್‌ ಜಗತ್ತಿಗೆ ಪರಿಚಯಿಸಿದ ಹೆಗ್ಗಳಿಕೆ ಸಹ ರಮೇಶ್‌ಗೆ ಇದೆ. ಈ ಹಿನ್ನೆಲೆಯಲ್ಲಿ ಆತನಿಗೆ ಚಲನಚಿತ್ರ ನಟ-ನಟಿಯರು, ಉದ್ಯಮಿಗಳು, ಕ್ರಿಕೆಟ್‌ ಆಟಗಾರರು ಹಾಗೂ ಸ್ಟಾರ್‌ ರೂಪದರ್ಶಿಗಳ ಸ್ನೇಹವಿದೆ. ಈಗ ಮಾದಕ ವಸ್ತು ಮಾರಾಟ ಜಾಲದಲ್ಲಿ ಆರೋಪಿಗಳಾಗಿರುವ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ಪೇಜ್‌ ತ್ರಿ ಪಾರ್ಟಿಗಳ ಆಯೋಜನೆ ದಂಧೆಯ ಕಿಂಗ್‌ಪಿನ್‌ ಎನ್ನಲಾದ ವೀರೇನ್‌ ಖನ್ನಾ, ನಂದಿನಿ ಆಳ್ವ ಪುತ್ರ ಆದಿತ್ಯ ಆಳ್ವ ಹಾಗೂ ಕೇರಳ ಮೂಲದ ನಿಯಾಜ್‌ ಸೇರಿದಂತೆ ಇತರರೊಂದಿಗೆ ರಮೇಶ್‌ಗೆ ಆತ್ಮೀಯತೆ ಇದೆ. ಈ ಗೆಳೆತನದಲ್ಲೇ ಪಬ್‌, ಕ್ಲಬ್‌, ರೆಸಾರ್ಟ್‌, ಪಂಚಾತಾರಾ ಹೋಟೆಲ್‌ ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ನಡೆದಿದ್ದ ರಂಗು ರಂಗಿನ ಪಾರ್ಟಿಗಳಲ್ಲಿ ಫ್ಯಾಷನ್‌ ಗುರು ಕಾಣಿಸಿಕೊಂಡಿದ್ದ ಎಂದು ಸಿಸಿಬಿ ಹೇಳಿದೆ.

ಹೀಗಾಗಿ ಆರೋಪಿಗಳ ಜತೆ ಸ್ನೇಹ ಎಂತಹದ್ದು? ಪಾರ್ಟಿಗಳಲ್ಲಿ ನಡೆದಿದ್ದ ಸಂಗತಿಯೇನು? ಯಾರೆಲ್ಲ ಬರುತ್ತಿದ್ದರು ಸೇರಿದಂತೆ ಹಲವು ಪ್ರಶ್ನೆಗಳಿಗೆ ರಮೇಶ್‌ನಿಂದ ಸ್ಪಷ್ಟನೆ ಬೇಕಿದೆ. ವಿಚಾರಣೆಯಲ್ಲಿ ಆತ ನೀಡುವ ಹೇಳಿಕೆ ಆಧರಿಸಿ ಮುಂದಿನ ತನಿಖೆ ನಡೆಸಲಾಗುತ್ತದೆ. ಈಗಾಗಲೇ ವ್ಯಾಟ್ಸಾಪ್‌ ಮೂಲಕ ರಮೇಶ್‌ಗೆ ನೋಟಿಸ್‌ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
 

Latest Videos
Follow Us:
Download App:
  • android
  • ios