Asianet Suvarna News Asianet Suvarna News

ಬೆಂಗಳೂರು: ದುಬಾರಿ ಬಡ್ಡಿಗೆ ಸಾಲ ನೀಡುತ್ತಿದ್ದ ತಂದೆ-ಮಕ್ಕಳು, ಸಿಸಿಬಿ ದಾಳಿ

ಶಾಮಣ್ಣ ಗಾರ್ಡನ್ ನಿವಾಸಿ ಶ್ರೀರಾಮ, ಆತನ ಮಕ್ಕಳಾದ ದಿಲೀಪ್ ಹಾಗೂ ಕಲ್ಯಾಣ ಕುಮಾರ್ ಮೇಲೆ ಅಕ್ರಮ ಬಡ್ಡಿ ದಂಧೆ ಆರೋಪ ಬಂದಿದ್ದು, ಈ ದಾಳಿ ವೇಳೆ ವಿವಿಧ ಬ್ಯಾಂಕ್‌ಗಳ 100 ಚೆಕ್‌ಗಳು, ವಾಹನ ಆರ್‌ಸಿ ಕಾರ್ಡ್‌ಗಳು, ಆನ್ ಡಿಮ್ಯಾಂಡ್ ಪ್ರಾಮಿಸರಿ ನೋಟ್, ಆಸ್ತಿ ಪತ್ರಗಳು ಹಾಗೂ ಭೂ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.

CCB Raid on the House of father and Son who Given Loans at High Interest in Bengaluru grg
Author
First Published Apr 3, 2024, 7:45 AM IST

ಬೆಂಗಳೂರು(ಏ.03):  ದುಬಾರಿ ಬಡ್ಡಿಗೆ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ರಿಯಲ್ ಎಸ್ಟೇಟ್ ಏಜೆಂಟ್‌ವೊಬ್ಬನ ಮನೆ ಮೇಲೆ ದಾಳಿ ನಡೆಸಿ ಸಿಸಿಬಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಶಾಮಣ್ಣ ಗಾರ್ಡನ್ ನಿವಾಸಿ ಶ್ರೀರಾಮ, ಆತನ ಮಕ್ಕಳಾದ ದಿಲೀಪ್ ಹಾಗೂ ಕಲ್ಯಾಣ ಕುಮಾರ್ ಮೇಲೆ ಅಕ್ರಮ ಬಡ್ಡಿ ದಂಧೆ ಆರೋಪ ಬಂದಿದ್ದು, ಈ ದಾಳಿ ವೇಳೆ ವಿವಿಧ ಬ್ಯಾಂಕ್‌ಗಳ 100 ಚೆಕ್‌ಗಳು, ವಾಹನ ಆರ್‌ಸಿ ಕಾರ್ಡ್‌ಗಳು, ಆನ್ ಡಿಮ್ಯಾಂಡ್ ಪ್ರಾಮಿಸರಿ ನೋಟ್, ಆಸ್ತಿ ಪತ್ರಗಳು ಹಾಗೂ ಭೂ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.

ಈ ಅಕ್ರಮ ಬಡ್ಡಿ ವ್ಯವಹಾರದ ಬಗ್ಗೆ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಸಹಕಾರ ಇಲಾಖೆಯ ಅಧಿಕಾರಿಗಳು ದೂರು ನೀಡಿ ದ್ದರು. ಅದರನ್ವಯ ಶಾಮಣ್ಣ ಗಾರ್ಡನ್ ನಲ್ಲಿ ಇರುವ ಆರೋಪಿಗಳ ಮನೆ ಮೇಲೆ ಸಿಸಿಬಿ ದಾಳಿ ನಡೆಸಿತು. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ತಂದೆ-ಮಕ್ಕಳು, ಕೆಲ ವರ್ಷಗಳಿಂದ ಸುಲಭವಾಗಿ ಹಣ ಸಂಪಾದನೆಗೆ ಅಕ್ರಮ ಬಡ್ಡಿ ದಂಧೆಯಲ್ಲಿ ತೊಡಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ದಾರಿ ತಪ್ಪಿದ ಹೆಂಡತಿ ಮಾಡಿದ್ದೇನು..!ಮಗನ ಸಾವಿಗೆ ರಸ್ತೆಯಲ್ಲಿ ನಿಂತು ನ್ಯಾಯ ಕೇಳುತ್ತಿರುವ ತಾಯಿ..!

ತಲೆಮರೆಸಿಕೊಂಡ ಆರೋಪಿಗಳು

ಅಕ್ರಮ ಬಡ್ಡಿ ಬಗ್ಗೆ ಸಹಕಾರ ಇಲಾಖೆ ನೀಡಿದ ದೂರಿನ ಮೇರೆಗೆ ಮಾ.28 ರಂದು ಶಾಮಣ್ಣ ಗಾರ್ಡನ್‌ನಲ್ಲಿ ಇರುವ ಶ್ರೀರಾಮನ ಮನೆ ಮೇಲೆ ಸಿಸಿಬಿ ದಾಳಿ ನಡೆಸಿತ್ತು. ಈ ವೇಳೆ ಶ್ರೀರಾಮ ಹಾಗೂ ಆತನ ಇಬ್ಬರು ಮಕ್ಕಳಿಗೆ ವಿಚಾರಣೆಗೆ ಹಾಜರಾಗು ವಂತೆ ಸಿಸಿಬಿ ನೋಟಿಸ್‌ನೀಡಿತ್ತು, ಇದುವರೆಗೆ ವಿಚಾರಣೆ ಹಾಜರಾಗದೆ ಆರೋಪಿಗಳು ತಪ್ಪಿಸಿಕೊಂಡಿ ದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Follow Us:
Download App:
  • android
  • ios