300 ಕೋಟಿ ದುರ್ಬಳಕೆ: ಕೆಎಸ್‌ಒಯು ಅಧಿಕಾರಿಗಳ ವಿರುದ್ಧ ಸಿಬಿಐ ಕೇಸ್
ಮೈಸೂರು ಮೂಲದ ಮುಕ್ತ ವಿಶ್ವವಿದ್ಯಾಲಯವು ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವ ಯೋಜನೆಯನ್ನು ಇಡೀ ದೇಶ ಹಾಗೂ ವಿದೇಶಗಳಲ್ಲಿಯೂ ಆರಂಭಿಸಿದೆ. 2013-14 ಮತ್ತು 2014-15ನೇ ಸಾಲಿನ ಹಣಕಾಸಿನ ವರ್ಷದಲ್ಲಿ ವಿಶ್ವವಿದ್ಯಾಲಯದ ಆಯವ್ಯಯ ವರದಿ ಪರಿಶೀಲನೆ ವೇಳೆ ಇದು ಬೆಳಕಿಗೆ ಬಂದಿದೆ. ಸಹಭಾಗಿತ್ವ ಸಂಸ್ಥೆಗಳಿಂದ ಜಮೆಯಾಗಬೇಕಿದ್ದ 50 ಕೋಟಿ ರು. ಆಯವ್ಯಯ ವರದಿಯಲ್ಲಿ ಕಾಣೆಯಾಗಿರುವುದು ಪತ್ತೆಯಾಗಿದೆ.
ನವದೆಹಲಿ(ಅ.06): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವ ಯೋಜನೆಯಡಿ ಸುಮಾರು 300 ಕೋಟಿ ರು.ಗೂ ಹೆಚ್ಚು ನಿಧಿಯನ್ನು ದುರ್ಬಳಕೆ ಮಾಡಿರುವ ಆರೋಪ ಸಂಬಂಧ ಅಪರಿಚಿತ ಅಧಿಕಾರಿಗಳ ವಿರುದ್ಧ ಕೇಂದ್ರ ತನಿಖಾ ದಳ (ಸಿಬಿಐ) ಪ್ರಕರಣವೊಂದನ್ನು ದಾಖಲಿಸಿದೆ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.
ಮೈಸೂರು ಮೂಲದ ಮುಕ್ತ ವಿಶ್ವವಿದ್ಯಾಲಯವು ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವ ಯೋಜನೆಯನ್ನು ಇಡೀ ದೇಶ ಹಾಗೂ ವಿದೇಶಗಳಲ್ಲಿಯೂ ಆರಂಭಿಸಿದೆ. 2013-14 ಮತ್ತು 2014-15ನೇ ಸಾಲಿನ ಹಣಕಾಸಿನ ವರ್ಷದಲ್ಲಿ ವಿಶ್ವವಿದ್ಯಾಲಯದ ಆಯವ್ಯಯ ವರದಿ ಪರಿಶೀಲನೆ ವೇಳೆ ಇದು ಬೆಳಕಿಗೆ ಬಂದಿದೆ. ಸಹಭಾಗಿತ್ವ ಸಂಸ್ಥೆಗಳಿಂದ ಜಮೆಯಾಗಬೇಕಿದ್ದ 50 ಕೋಟಿ ರು. ಆಯವ್ಯಯ ವರದಿಯಲ್ಲಿ ಕಾಣೆಯಾಗಿರುವುದು ಪತ್ತೆಯಾಗಿದೆ.
KSOU ಕುಲಪತಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ; ಆಡಿಯೋ ಬಿಡುಗಡೆ ಮಾಡಿದ ನಿವೃತ್ತ ಪ್ರಾಧ್ಯಾಪರ ಮೇಲೆ ಹಲ್ಲೆಗೆ ಯತ್ನ
‘ಸಹಭಾಗಿತ್ವ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಂದ ದಾಖಲಾತಿ, ಪರೀಕ್ಷೆ ಹಾಗೂ ಇತರ ಶುಲ್ಕವಾಗಿ ಹಣವನ್ನು ಸಂಗ್ರಹಿಸಿವೆ. ಈ ಮೊತ್ತವನ್ನು ಸಂಸ್ಥೆಗಳು ಮುಕ್ತ ವಿಶ್ವವಿದ್ಯಾಲಯಕ್ಕೆ ಜಮೆ ಮಾಡಬೇಕು. ಆದರೆ ಕೆಲವು ಸಂಸ್ಥೆಗಳು ಜಮೆ ಮಾಡುವ ಹಣದಲ್ಲಿ ವ್ಯತ್ಯಾಸ ಮಾಡಿವೆ. 2009-10ರಿಂದ 2012-13ನೇ ಶೈಕ್ಷಣಿಕ ವರ್ಷದಲ್ಲಿಯೂ ಸುಮಾರು 250 ಕೋಟಿ ರು. ಜಮೆಯಾಗಿಲ್ಲ ಎಂದು ಲೆಕ್ಕಪರಿಶೋಧನೆ ವೇಳೆ ತಿಳಿದು ಬಂದಿದೆ’ ಎಂದು ವರದಿ ಹೇಳಿದೆ.
ಭಾರಿ ಮೊತ್ತ ತಾಳೆಯಾಗದಿರುವ ಬಗ್ಗೆ ಮುಕ್ತ ವಿಶ್ವವಿದ್ಯಾಲಯದ ನಿರ್ದೇಶಕ ಮಂಡಳಿ, ತಕ್ಷಣ ರಾಜ್ಯ ಸರ್ಕಾರದ ಗಮನಕ್ಕೆ ತಂದಿತ್ತು. ಬಳಿಕ ರಾಜ್ಯ ಈ ಬಗ್ಗೆ ತನಿಖೆ ನಡೆಸಲು ಸಿಬಿಐ ಅನ್ನು ಕೋರಿತ್ತು.