ಕಾವೇರಿಗಾಗಿ ಬುಧವಾರ(ಅ.18) ರಾಷ್ಟ್ರರಾಜಧಾನಿಯಲ್ಲಿ ಕನ್ನಡಿಗರ ಕೂಗು ಪ್ರತಿಧ್ವನಿಸಲಿದೆ. ನದಿ ನೀರು ಹಂಚಿಕೆ ಸಂಬಂಧ ಶಾಶ್ವತ ಪರಿಹಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರ ನೇತೃತ್ವದಲ್ಲಿ ದೆಹಲಿಯ ಜಂತರ್‌ಮಂತರ್‌ನಲ್ಲಿ ಬೃಹತ್‌ ಪ್ರತಿಭಟನೆ ನಡೆಯಲಿದ್ದು, ಬಳಿಕ ಪ್ರಧಾನಿ ಭೇಟಿಯಾಗಿ ಮನವಿ ಸಲ್ಲಿಸಲಿದ್ದಾರೆ.

ಬೆಂಗಳೂರು (ಅ.17): ಕಾವೇರಿಗಾಗಿ ಬುಧವಾರ(ಅ.18) ರಾಷ್ಟ್ರರಾಜಧಾನಿಯಲ್ಲಿ ಕನ್ನಡಿಗರ ಕೂಗು ಪ್ರತಿಧ್ವನಿಸಲಿದೆ. ನದಿ ನೀರು ಹಂಚಿಕೆ ಸಂಬಂಧ ಶಾಶ್ವತ ಪರಿಹಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರ ನೇತೃತ್ವದಲ್ಲಿ ದೆಹಲಿಯ ಜಂತರ್‌ಮಂತರ್‌ನಲ್ಲಿ ಬೃಹತ್‌ ಪ್ರತಿಭಟನೆ ನಡೆಯಲಿದ್ದು, ಬಳಿಕ ಪ್ರಧಾನಿ ಭೇಟಿಯಾಗಿ ಮನವಿ ಸಲ್ಲಿಸಲಿದ್ದಾರೆ.

ಈಗಾಗಲೇ ಬೆಳಗಾವಿಯಿಂದ ರೈಲಿನಲ್ಲಿ ನೂರಾರು ಜನ ತೆರಳಿದ್ದು, ಹೈದರಾಬಾದ್ ನಿಂದ 300 ಜನ ದೆಹಲಿಯತ್ತ ಹೋಗಿದ್ದಾರೆ. ಕಲಬುರ್ಗಿ, ರಾಯಚೂರಿಂದಲೂ ಕಾರ್ಯಕರ್ತರು ಪ್ರಯಾಣ ಬೆಳೆಸಿದ್ದಾರೆ. ಮಂಗಳ ವಾರ ನಗರದಿಂದಲೂ ಸುಮಾರು 700 ಜನ ಹೊರಡಲಿದ್ದು, ರಾಜ್ಯದಿಂದ ಒಟ್ಟಾರೆ 2 ಸಾವಿರ ಜನ ತೆರಳಿ ಧರಣಿ ನಡೆಸುವುದಾಗಿ ಕರವೇ ತಿಳಿಸಿದೆ.

ಹಾಲಿ ಇರುವ ಐವರ ಬದಲಾವಣೆ ಕಾಂಗ್ರೆಸ್ಸಿಗೆ ಹೊಸ ಕಾರ್ಯಾಧ್ಯಕ್ಷರು?

ಈ ಬಗ್ಗೆ 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿದ ನಾರಾ ಯಣಗೌಡ, 'ನಾವು 2000 ಜನ ಸೇರಿ ಬೆಳಗ್ಗೆ 11 ಗಂಟೆ ಯಿಂದ 1 ಗಂಟೆವರೆಗೆ ಪ್ರತಿಭಟನೆ ನಡೆಸಲಿದ್ದೇವೆ. ಹೋರಾಟದ ಸಂಬಂಧ ಮೆರವಣಿಗೆಗೆ ಅವಕಾಶ ಕೇಳಿದ್ದೆವು. ಆದರೆ, ಅವಕಾಶ ನೀಡಲಾಗಿಲ್ಲ. ಹೀಗಾಗಿ ಧರಣಿ ಕೈಗೊಳ್ಳಲಿದ್ದೇವೆ. ಬಳಿಕ ನಾನು, ದೆಹಲಿ ಕನ್ನಡ ಸಂಘದ ಅಧ್ಯಕ್ಷರು ಸೇರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದೇವೆ. ಈಗಾಗಲೇ ಅವರ ಭೇಟಿಗೆ ಕಾಲಾವಧಿ ನಿಗದಿಯಾಗಿದೆ' ಎಂದರು.

ರಾಜ್ಯ ಪ್ರತಿನಿಧಿಸುವ ಎಲ್ಲ ರಾಜ್ಯ ಸಭೆ ಸದಸ್ಯರು, ಸಂಸದರು, ಕೇಂದ್ರದ ಮಂತ್ರಿಗಳು ಧರಣಿಯಲ್ಲಿ ಪಾಲ್ಗೊಳ್ಳುವಂತೆ ಪತ್ರ ಬರೆದು ಮನವಿ ಮಾಡಲಾಗಿದೆ. ಇಲ್ಲದಿದ್ದರೆ ರಾಜ್ಯಕ್ಕೆ ಕಾಲಿಡಲು ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಅವರ ವಿರುದ್ಧ ಪ್ರತಿಭಟನೆ, ಮಸಿ ಬಳಿಯುವುದು, ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಎಚ್ಚರಿಕೆ ನೀಡುತ್ತಿದ್ದೇವೆ' ಎಂದರು.

ಕಾಂಗ್ರೆಸ್ ದುರಾಡಳಿತದ ಬಗ್ಗೆ ಪಕ್ಷದೊಳಗಿಂದಲೇ ನಮಗೆ ಮಾಹಿತಿ ಸಿಗುತ್ತಿದೆ: ಸಿಟಿ ರವಿ ಹೊಸ ಬಾಂಬ್

ಇಂದಿರಾ, ಅಟಲ್ ಮಧ್ಯಸ್ತಿಕೆ ಮಾದರಿ

'ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಇರುವಾಗ ಪ್ರಧಾನಿ ಮಧ್ಯಸ್ಥಿಕೆ ವಹಿಸಲು ಬರುವುದಿಲ್ಲ ಎಂಬುದನ್ನು ಒಪ್ಪಲಾಗದು. ಹಿಂದೆ ಇಂದಿರಾ ಗಾಂಧಿ ಅವರು ಕಾವೇರಿ ವಿಚಾರವಾಗಿ ಮಧ್ಯಸ್ಥಿಕೆ ವಹಿಸಿದ್ದರು. ಎಸ್.ಎಂ.ಕೃಷ್ಣ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿಯೂ ಕಾವೇರಿ ಸಮಸ್ಯೆ ತಲೆದೂರಿದಾಗ ವಾಜಪೇಯಿ ಪ್ರಧಾನಿಯಾಗಿ ಸಭೆ ನಡೆಸಿದ್ದರು. ಈಗಲೂ ಅದೇ ರೀತಿ ಪ್ರಧಾನಿಗಳು ಮಧ್ಯಸ್ಥಿಕೆ ವಹಿಸಬೇಕು ಎಂದು ಮನವಿ ಮಾಡಿಕೊಳ್ಳಲು ದೆಹಲಿಗೆ ಹೋಗುತ್ತಿದ್ದೇವೆ. ಅವರ ವಿರುದ್ಧ ಹೋರಾಟ ಮಾಡಲಿಕ್ಕಲ್ಲ' ಎಂದರು