ಡಿಕೆಶಿ ಅವರನ್ನ 'ಬಂಡೆ' ಅಂತಾರೆ ಸಾ.. ಎಂದ ಮಹಿಳೆ; ಬಂಡೆ ತಗೊಂಡು ಹೋಗಿ ಕೆಆರ್‌ಎಸ್ ಗೇಟ್ಗೆ ಇಟ್ಟುಬಿಡು ಎಂದ ಹೆಚ್‌ಡಿಕೆ
'ಬಂಡೆಯನ್ನು ತೆಗೆದುಕೊಂಡು ಹೋಗಿ ಕೆಆರ್‌ಎಸ್ ಡ್ಯಾಂಗೆ ಅಡ್ಡಲಾಗಿ ಇಟ್ಟುಬಿಡಿ'ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಟಾಂಗ್ ನೀಡಿದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ
ಮಂಡ್ಯ (ಸೆ.23): 'ಬಂಡೆಯನ್ನು ತೆಗೆದುಕೊಂಡು ಹೋಗಿ ಕೆಆರ್‌ಎಸ್ ಡ್ಯಾಂಗೆ ಅಡ್ಡಲಾಗಿ ಇಟ್ಟುಬಿಡಿ'ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಟಾಂಗ್ ನೀಡಿದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ.
ರೈತರ ವಿರೋಧದ ನಡುವೆಯೂ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರ ನಿಲುವು ಖಂಡಿಸಿ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಹಿತರಕ್ಷಣಾ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮಗೆ ತಿಳಿವಳಿಕೆ ಇಲ್ಲದ ದಿನದಿಂದಲೂ ಕಾವೇರಿ ನೀರಿನ ವಿಚಾರದಲ್ಲಿ ಹೋರಾಟ ನಡೆಯುತ್ತ ಬಂದಿದೆ. ಪ್ರತಿಸಲವೂ ರಾಜ್ಯಕ್ಕೆ ಅನ್ಯಾಯವಾಗುತ್ತ ಬಂದಿದೆ.
ಮಂಗಳೂರು: ಎತ್ತಿನಹೊಳೆ ಬಗ್ಗೆ ಪ್ರಶ್ನಿಸಬೇಡಿ: ಉತ್ತರಿಸಲಾಗದೇ ವೀರಪ್ಪ ಮೊಯಿಲಿ ಸಿಡಿಮಿಡಿ!
ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ಬರ ಪರಿಸ್ಥಿತಿ ಬಂದಿರಲಿಲ್ಲ. ನಾಲ್ಕೈದು ವರ್ಷಗಳಿಂದ ಉತ್ತಮ ಮಳೆಯಾಗಿ ರೈತರು ಸುಖವಾಗಿದ್ದರು. ಆದರೆ ಅದೇನು ಕೇಡುಗಾಲವೋ ಈ ವರ್ಷ ಮಳೆಯೇ ಆಗಲಿಲ್ಲ. ಹೀಗಾಗಿ ಮಳೆ ಕೊರತೆಯಿಂದ ನದಿ ಡ್ಯಾಂಗಳು ಬರಿದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. 125 ವರ್ಷದಿಂದ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಡಿಸಿಎಂ ಡಿಕೆ ಶಿವಕುಮಾರ ಮೊದಲು ಬೆಂಗಳೂರು ಚಿಂತೆ ಬಿಟ್ಟು ನೀರಿನ ಸಮಸ್ಯೆ ಬಗೆಹರಿಸಿ. ಅವರನ್ನು ಜನರು ಬಂಡೆ ಅಂತಾರೆ ಎಂದ ಮಹಿಳೆಗೆ ಅವರನ್ನು ತಗೊಂಡು ಹೋಗಿ ಕೆಆರ್‌ಎಸ್ ಡ್ಯಾಂಗೆ ಇಟ್ಟುಬಿಡು ಎಂದು ವ್ಯಂಗ್ಯ ಮಾಡಿದರು.
ಸೋನಿಯಾ ಗಾಂಧಿ ತೃಪ್ತಿಪಡಿಸಲು ತಮಿಳನಾಡಿಗೆ ಕಾವೇರಿ ನೀರು: ರಾಜ್ಯ ಸರ್ಕಾರದ ವಿರುದ್ಧ ಆರ್ ಅಶೋಕ್ ಆಕ್ರೋಶ
ಮೈಸೂರಿನ ಮಹಾರಾಜರು ಚಿನ್ನ ಅಡವಿಟ್ಟು ಡ್ಯಾಂ ಕಟ್ಟಿಸಿದರು. ಕೆಆರ್‌ಎಸ್ ಡ್ಯಾಂ ಕಟ್ಟುವಾಗಲೂ ಅಂದಿನ ಮದ್ರಾಸ್ ಪ್ರಾಂತ್ಯದವರು ಅಡ್ಡಿಪಡಿಸಿದ್ದರು. ಅಂದಿನ ನಿರ್ಣಯವೇ ಇಂದು ಪಾಲನೆಯಾಗ್ತಿದೆ. ಅವರು ಕೇಳಿದಾಗೆಲ್ಲ ನೀರು ಬಿಟ್ಟುಕೊಂಡು ಬರಲಾಗಿದೆ. ಹಿಂದಿನಿಂದಲೂ ತಮಿಳನಾಡಿನ ರಾಜಕೀಯ ಒತ್ತಡದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತ ಬಂದಿದೆ. ಕಾವೇರಿ ವಿಚಾರವಾಗಿ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಸಾಕಷ್ಟು ಹೋರಾಟ ಮಾಡಿದ್ದಾರೆ. ಆದರೆ ಅಂದಿನ ಸರ್ಕಾರಗಳು ದೇವೇಗೌಡರ ಸಲಹೆ ಸ್ವೀಕರಿಸಲಿಲ್ಲ. ಇದೇ ಕಾರಣಕ್ಕೆ ರಾಜ್ಯಕ್ಕೆ ಹಿನ್ನೆಡೆಯಾಯಿತು ಎಂದರು.