ಬೆಂಗಳೂರು ಬಂದ್: ಮಧ್ಯರಾತ್ರಿಯಿಂದಲೇ ನಗರದಲ್ಲಿ ಸೆಕ್ಷನ್ 144 ಜಾರಿ!

ಕಾವೇರಿ ನೀರು ತಮಿಳನಾಡಿಗೆ ಬಿಡುವುದನ್ನ ವಿರೋಧಿಸಿ ಸೆ.26ರಂದು ಬೆಂಗಳೂರು ಬಂದ್ ಕರೆ ನೀಡಿದ್ದು, ಆದರೆ ಬಂದ್‌, ರಾಲಿಗಳಿಗೆ ಅನುಮತಿ ನೀಡಿಲ್ಲ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ತಿಳಿಸಿದ್ದಾರೆ.

Bengaluru bandh on Sept 26 Section 144 imposed benglauru police commissioner rav

ಬೆಂಗಳೂರು (ಸೆ.26): ಕಾವೇರಿ ನೀರು ತಮಿಳನಾಡಿಗೆ ಬಿಡುವುದನ್ನ ವಿರೋಧಿಸಿ ಸೆ.26ರಂದು ಬೆಂಗಳೂರು ಬಂದ್ ಕರೆ ನೀಡಿದ್ದು, ಆದರೆ ಬಂದ್‌, ರಾಲಿಗಳಿಗೆ ಅನುಮತಿ ನೀಡಿಲ್ಲ. ಇಂದು ಮಧ್ಯರಾತ್ರಿಯಿಂದ ನಗರದಲ್ಲಿ 144  ಸೆಕ್ಷನ್ ಜಾರಿ ಮಾಡಲಾಗಿದೆ. ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ತಿಳಿಸಿದ್ದಾರೆ.

ಸೆ.25ರ ಸೋಮವಾರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಆಯುಕ್ತರು, ಬೆಂಗಳೂರು ಬಂದ್ ವೇಳೆ ಅಹಿತಕರ ಘಟನೆಗಳು ನಡೆದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ ಮಂಗಳವಾರ ಮಧ್ಯರಾತ್ರಿ 12 ಗಂಟೆಯಿಂದ ಬೆಂಗಳೂರಿನಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 144 ಮಾಡಲಾಗಿದೆ. ಮಂಗಳವಾರ ನಡೆಯಲಿರುವ ಬಂದ್ ವೇಳೆ ಅಗತ್ಯ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಗಸ್ತು ಪಡೆಗಳು ಮತ್ತು ಹೆಚ್ಚುವರಿ ಪಡೆಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗುವುದು. ನಾವು ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ ಮತ್ತು ಹೆಚ್ಚುವರಿ ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್) ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದ ಕಮಿಷನರ್ 

ಬೆಂಗಳೂರು ಬಂದ್: ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಡಿಸಿ ಆದೇಶ

ಯಾವುದೇ ಆಸ್ತಿಪಾಸ್ತಿ ನಾಶವಾದರೆ ಬಂದ್‌ನ ಆಯೋಜಕರು ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದರು. ಯಾವುದೇ ಆಸ್ತಿಪಾಸ್ತಿ ನಷ್ಟವಾದರೆ, ಅಂಗಡಿಮುಂಗಟ್ಟು ಬಲವಂತವಾಗಿ ಮುಚ್ಚಿದರೆ ಪೊಲೀಸ್ ಕ್ರಮವನ್ನೂ ಎದುರಿಸಬೇಕಾಗುತ್ತದೆ ಎಂದರು. ನಗರದಲ್ಲಿ ಬಂದ್ ವೇಳೆ ರಸ್ತೆಗೆ ಅಡ್ಡಲಾಗಿ ವಾಹನಗಳನ್ನು ನಿಲ್ಲಿಸುವುದು, ವ್ಯಾಪಾರಿಗಳಿಗೆ ಬಲವಂತವಾಗಿ ಬಂದ್ ಮಾಡುವಂತೆ ಬೆದರಿಸುವುದು ಇಂಥ ಘಟನೆಗಳು ನಡೆದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಚ್ಚರಿಕೆ ನೀಡಿರುವ ಕಮಿಷನರ್

ಎಲ್ಲಡೆ ಬಿಗಿ ಭದ್ರತೆ:

ನಾಳೆ ಬಂದ್ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿಭದ್ರತಾ ಕ್ರಮಗಳನ್ನು ಕೈಗೊಂಡಿದ್ದು, ಮಂಗಳವಾರ ಸುಮಾರು 20,000 ಭದ್ರತಾ ಸಿಬ್ಬಂದಿ ನಗರದಲ್ಲಿ ನಿಯೋಜಿಸಲಾಗಿದೆ. ಇದರಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ನ 60 ತುಕಡಿಗಳು ಮತ್ತು ನಗರ ಸಶಸ್ತ್ರ ಮೀಸಲು ಪೊಲೀಸ್‌ನ 40 ತುಕಡಿಗಳು ಸೇರಿವೆ. ಅಲ್ಲದೆ ಕರ್ನಾಟಕ-ತಮಿಳನಾಡು ಗಡಿ ಪ್ರದೇಶಗಳಿಗೂ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. ತಮಿಳುನಾಡು ಬಸ್ ಸೇರಿದಂತೆ ಯಾವುದೇ ವಾಹನಗಳಿಗೆ ರಕ್ಷಣೆ ನೀಡಲಾಗುವುದು ಎಂದ ಆಯುಕ್ತರು, ಇದುವರೆಗೂ ವಾಹನಗಳಿಗೆ ಭದ್ರತೆ ನೀಡುವಂತೆ ಯಾರೂ ಮುಂದಾಗಿಲ್ಲ ಎಂದರು. 

ಕಾವೇರಿ ವಿವಾದ: ಸೆ.26ರಂದು ಬೆಂಗಳೂರು ಬಂದ್‌, ಸೆ.29ರಂದು ಅಖಂಡ ಕರ್ನಾಟಕ ಬಂದ್? ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ದೀರ್ಘಕಾಲದ ಸಮಸ್ಯೆ ಮುಂದುವರಿದಿದೆ. ಇದೀಗ ಮತ್ತೆ ತಮಿಳುನಾಡಿಗೆ ಹೆಚ್ಚುವರಿ 15 ದಿನಗಳ ಕಾಲ 5,000 ಕ್ಯೂಸೆಕ್ ನೀರು ಬಿಡುವುದನ್ನು ಮುಂದುವರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಕಾವೇರಿ ಜಲ ವಿವಾದ ನ್ಯಾಯಮಂಡಳಿ (ಸಿಡಬ್ಲ್ಯೂಡಿಟಿ) ಸೂಚನೆ ನೀಡಿರುವುದು ಮತ್ತೆ ಕಾವೇರಿ ಜಲವಿವಾದ ಭುಗಿಲೆದ್ದಿದೆ.
 

Latest Videos
Follow Us:
Download App:
  • android
  • ios