ಕೆಎಸ್‌ಆರ್‌ಟಿಸಿ ನೌಕರರಿಗಿನ್ನು ಕ್ಯಾಶ್‌ಲೆಸ್ ಚಿಕಿತ್ಸೆ: 1.50 ಲಕ್ಷ ಮಂದಿಗೆ ಅನುಕೂಲ
ಯೋಜನೆ ಅಡಿಯಲ್ಲಿ ಕೆಎಸ್ಸಾರ್ಟಿಸಿ ಅಡಿಯಲ್ಲಿ ಕೆಲಸ ಮಾಡುವ 34 ಸಾವಿರ ಸಿಬ್ಬಂದಿ ಮತ್ತು ಅವರ ಅವಲಂಬಿತರಾದ ಮಕ್ಕಳು, ತಂದೆ-ತಾಯಿ ಸೇರಿದಂತೆ 1.50 ಲಕ್ಷಕ್ಕೂ ಹೆಚ್ಚಿನ ಜನರು ರಾಜ್ಯದ ಆಯುರ್ವೇದ, ಪ್ರಕೃತಿ, ಯುನಾನಿ, ಹೋಮಿಯೋಪತಿ ಸೇರಿದಂತೆ ಮತ್ತಿತರ ಚಿಕಿತ್ಸಾ ವಿಧಾನ ಹೊಂದಿದ 275ಕ್ಕೂ ಹೆಚ್ಚಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.
ಬೆಂಗಳೂರು(ಜ.07): ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಎರಡು ದಶಕಗಳ ಬೇಡಿಕೆಯಾದ ನಗದುರಹಿತ ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆ 'ಕೆಎಸ್ಸಾರ್ಟಿಸಿ ಆರೋಗ್ಯ ಯೋಜನೆ'ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಚಾಲನೆ ನೀಡಿದರು.
ಸಾರಿಗೆ ನೌಕರರು ಮತ್ತು ಕುಟುಂಬ ದವರು ಯಾವುದೇ ಹಣ ಪಾವತಿಸದೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಯೋಜನೆ ಅಡಿಯಲ್ಲಿ ಕೆಎಸ್ಸಾರ್ಟಿಸಿ ಅಡಿಯಲ್ಲಿ ಕೆಲಸ ಮಾಡುವ 34 ಸಾವಿರ ಸಿಬ್ಬಂದಿ ಮತ್ತು ಅವರ ಅವಲಂಬಿತರಾದ ಮಕ್ಕಳು, ತಂದೆ-ತಾಯಿ ಸೇರಿದಂತೆ 1.50 ಲಕ್ಷಕ್ಕೂ ಹೆಚ್ಚಿನ ಜನರು ರಾಜ್ಯದ ಆಯುರ್ವೇದ, ಪ್ರಕೃತಿ, ಯುನಾನಿ, ಹೋಮಿಯೋಪತಿ ಸೇರಿದಂತೆ ಮತ್ತಿತರ ಚಿಕಿತ್ಸಾ ವಿಧಾನ ಹೊಂದಿದ 275ಕ್ಕೂ ಹೆಚ್ಚಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.
500 ಆದ್ರೂ ಮಟನ್ ಖರೀದಿ ಮಾಡ್ತೀರಿ, ಬಸ್ ದರ ಏರಿಕೆ ದೊಡ್ಡದು ಮಾಡ್ತೀರಿ: ಸಚಿವ ಚಲುವರಾಯಸ್ವಾಮಿ
ನೇತ್ರ, ದಂತ, ಹೃದಯ ಸೇರಿದಂತೆ ಎಲ್ಲ ರೀತಿಯ ರೋಗ ಗಳಿಗೂ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ. ಅದಕ್ಕೆ ಸಂಬಂಧಿಸಿದಂತೆ ಕೆಎಸ್ಸಾರ್ಟಿಸಿಯು ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾ ಡಿಕೊಂಡಿದ್ದು, ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ 2014ರಲ್ಲಿ ನಿಗದಿ ಮಾಡಲಾದ ದರದ ಆಧಾರದಲ್ಲಿ ನೌಕರರ ಚಿಕಿತ್ಸಾ ಮೊತ್ತವನ್ನು ಆಸ್ಪತ್ರೆಗಳಿಗೆ ಪಾವತಿಸಲಿದೆ.
ಯೋಜನೆಗಾಗಿ ನ್ಯಾಸ ಮಂಡಳಿ ರಚನೆ:
ಆರೋಗ್ಯ ಯೋಜನೆ ಸಮರ್ಪಕ ಜಾರಿಗಾಗಿ ಕೆಎಸ್ಸಾರ್ಟಿಸಿಯು ಆರೋಗ್ಯ ನ್ಯಾಸ ಮಂಡಳಿ ಸ್ಥಾಪಿಸಿದೆ. ಅದಕ್ಕೆ 20 ಕೋಟಿ ರು. ಕಾರ್ಪಸ್ ನಿಧಿಯನ್ನು ಪಾವತಿಸಲಾಗಿದ್ದು, ಅದರ ಜತೆಗೆ ನಿಗಮದ ಅಧಿಕಾರಿಗಳು ಮತ್ತು ಸಿಬ್ಬಂದಿ ವೇತನದಲ್ಲಿ ಮಾಸಿಕ 650 ರು. ವಂತಿಕೆ ರೂಪದಲ್ಲಿ ಕಡಿತಗೊಳಿಸಲಾಗು ತ್ತದೆ. ಆ ಹಣವನ್ನು ನ್ಯಾಸ ಮಂಡಳಿಗೆ ಪಾವ ತಿಸಿ, ನೌಕರರ ಚಿಕಿತ್ಸಾ ವೆಚ್ಚಕ್ಕೆ ಮಂಡಳಿಯಿಂದ ಹಣ ಬಿಡುಗಡೆ ಮಾಡಲಾಗುತ್ತದೆ.
ಆಸ್ಪತ್ರೆ ಬಿಲ್‌ಗಳ ಆಡಿಟ್
ಯೋಜನೆ ಅಡಿಯಲ್ಲಿ ಒಪ್ಪಂದ ಮಾಡಿ ಕೊಂಡಿರುವ ಆಸ್ಪತ್ರೆಗಳು ನೌಕರರು ಅಥವಾ ಅವರ ಕುಟುಂಬದವರು ಪಡೆದ ಚಿಕಿತ್ಸೆಯ ಬಿಲ್‌ಗಳನ್ನು ನಿಗಮಕ್ಕೆ ಕಳುಹಿಸಬೇಕಿದೆ. ಆ ಬಿಲ್‌ಗಳು ಸಮರ್ಪಕವಾಗಿವೆಯೇ ಅಥವಾ ಸರ್ಕಾರ ನಿಗದಿ ಮಾಡಿರುವ ಮೊತ್ತದಷ್ಟಿದೆಯೇ ಎಂಬುದನ್ನು ಪರಿಶೀಲಿಸಲು ಕೆಎಸ್ಸಾರ್ಟಿಸಿಯು ಮೆಡ್ ಅಸಿಸ್ಟ್ ಎಂಬ ಖಾಸಗಿ ಸಂಸ್ಥೆ ಯನ್ನು ನೇಮಿಸಿದೆ. ಆ ಸಂಸ್ಥೆಯು ಜಿಲ್ ಗಳನ್ನು ಆಡಿಟ್ ಮಾಡಿ ಕೆಎಸ್ಸಾರ್ಟಿಸಿಗೆ ಸಲ್ಲಿಸಲಿದೆ. ಅದನ್ನಾಧರಿಸಿ ನಿಗಮವು ಆಸ್ಪತ್ರೆಗೆ ಆರ್‌ಟಿಜಿಎಸ್ ಮೂಲಕ ಚಿಕಿತ್ಸಾ ವೆಚ್ಚವನ್ನು ಪಾವತಿಸಲಿದೆ. ಇದರಿಂದಾಗಿ ನೌಕರರು ಆಸ್ಪತ್ರೆ ಬಿಲ್ ಗಳನ್ನು ನಿಗಮಕ್ಕೆ ಸಲ್ಲಿಸುವ ಗೊಂದಲ ಇರುವುದಿಲ್ಲ.
ಬಸ್ ಪ್ರಯಾಣಿಕರಿಗೆ ಶಾಕ್: ಟಿಕೆಟ್ ದರ 7-115 ಹೆಚ್ಚಳ!
ನೌಕರರ ಬಗ್ಗೆ ಅಸಡ್ಡೆ ಬೇಡ
ವಿಧಾನಸೌಧದ ಸಮ್ಮೇಳನ ಸಭಾಂಗಣ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಎಸ್ಸಾರ್ಟಿಸಿ ಆರೋಗ್ಯ ಯೋಜನೆಗೆ ಚಾಲನೆ ನೀಡಿ ಮತ್ತು ಸಾಂಕೇತಿಕವಾಗಿ ನೌಕರರಿಗೆ ಕೆಎಸ್ಸಾರ್ಟಿಸಿ ಆರೋಗ್ಯ ಕಾರ್ಡ್ ವಿತರಿಸಿ ಮಾತನಾಡಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಆಸ್ಪತ್ರೆಗಳು ನಗದು ರಹಿತ ಚಿಕಿತೆ ನೀಡಬೇಕು ಎಂಬ ಕಾರಣಕ್ಕಾಗಿ ಸಾರಿಗೆ ನೌಕರರನ್ನು ಅಸಡ್ಡೆಯಿಂದ ಕಾಣಬಾರದು.ನೌಕರರುಮತ್ತು ಕುಟುಂಬದವ ರಿಗೆ ಉತ್ತಮ ಚಿಕಿತ್ಸೆ ಕೊಡಬೇಕು. ಯಾವುದೇ ದೂರಿಗೂ ಆಸ್ಪದವಿಲ್ಲದೆ, ನೌಕರರ ಆರೋಗ್ಯ ಕಾಪಾಡು ವತ್ತ ಗಮನಹರಿಸಬೇಕು ಎಂದರು. ನೌಕರರು ಸಾರಿಗೆ ನಿಗಮಗಳ ಆದಾಯ ಹೆಚ್ಚಿಸಲು ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆ ಯನ್ನು ಯಶಸ್ವಿಯಾಗಿ ಜಾರಿಗೊಳಿಸುವಲ್ಲಿ ನೌಕರರ ಪಾತ್ರ ದೊಡ್ಡದು ಎಂದರು.
ಶೀಘ್ರ ಇತರೆ ನಿಗಮಕ್ಕೆ ಸಾರಿಗೆ ನೌಕರರ 20 ವರ್ಷಗಳ ಬೇಡಿಕೆ ಈಡೇರಿಸಲಾಗಿದೆ. ನೌಕರರ ಆರೋಗ್ಯ ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದ್ದು, ಅದಕ್ಕಾಗಿ ಯೋಜನೆ ಜಾರಿಗೊಳಿಸಲಾಗಿದೆ. ಸದ್ಯ ಕೆಎಸ್ಸಾರ್ಟಿಸಿಯಲ್ಲಿ ಯೋಜನೆ ಅನುಷ್ಠಾನಗೊಂಡಿದ್ದು, ಶೀಘ್ರದಲ್ಲಿ ಬಿಎಂಟಿಸಿ, ಎನ್‌ಡಬ್ ಲ್ಯೂಕೆಆರ್‌ಟಿಸಿ, ಕೆಕೆಆರ್ ಟಿಸಿಗಳಲ್ಲೂ ಜಾರಿಗೊಳಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.