ಮಾಸಿಕ 6 ಲಕ್ಷ ಜೀವನಾಂಶ ಕೋರಿದ ಪತ್ನಿಗೆ ನೀನೇ ದುಡಿ ಎಂದ ಹೈಕೋರ್ಟ್..!
ಪತಿಯ ಜೊತೆಗೆ ವೈವಾಹಿಕ ಸಂಬಂಧ ಮುರಿದು ಬಿದ್ದಿರುವ ಹಿನ್ನೆಲೆ ಕೌಟುಂಬಿಕ ನ್ಯಾಯಾಲಯ ತನಗೆ ಮಾಸಿಕ 50000 ರು. ಜೀವನಾಂಶ ನಿಗದಿಪಡಿಸಿದೆ. ತನ್ನ ತಿಂಗಳ ಖರ್ಚು 6.16 ಲಕ್ಷವಾಗುತ್ತಿದ್ದು, ಕನಿಷ್ಠ 5 ಲಕ್ಷ ಮಾಸಿಕ ಜೀವನಾಂಶ ಪಾವತಿಸಲು ಪತಿಗೆ ಆದೇಶಿಸಬೇಕು ಎಂದು ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ಇತ್ತೀಚೆಗೆ ಹೈಕೋರ್ಟ್ ಮುಂದೆ ವಿಚಾರಣೆಗೆ ಬಂದಿತ್ತು.
ಬೆಂಗಳೂರು(ಆ.23): ತನ್ನನ್ನು ಪರಿತ್ಯಜಿಸಿರುವ ಗಂಡನಿಂದ ಮಾಸಿಕ 6.16 ಲಕ್ಷ ರು. ಜೀವನಾಂಶ ಕೋರಿದ ಪತ್ನಿಯ ಧೋರಣೆಗೆ ತೀವ್ರ ಅಚ್ಚರಿ ವ್ಯಕ್ತಪಡಿಸಿದ ಹೈಕೋರ್ಟ್, ಒಬ್ಬ ಮಹಿಳೆ ತನಗಾಗಿ ತಿಂಗಳಿಗೆ ಇಷ್ಟು ಖರ್ಚು ಮಾಡುತ್ತಾರೆಯೇ? ಇದು ಜೀವನಾಂಶ ಕೇಳುತ್ತಿಲ್ಲ. ಪತಿಯಿಂದ ವಸೂಲಾತಿ ಮಾಡುವುದಷ್ಟೇ. ಇಷ್ಟು ಹಣವನ್ನು ಖರ್ಚು ಮಾಡಬೇಕು ಎಂದು ಬ ಬಯಸಿದರೆ ತಾನೇ ದುಡಿಯಬೇಕು ಎಂದು ಕಟುವಾಗಿ ನುಡಿದ ಘಟನೆ ಇತ್ತೀಚೆಗೆ ನಡೆದಿದೆ. ಪತಿಯ ಜೊತೆಗೆ ವೈವಾಹಿಕ ಸಂಬಂಧ ಮುರಿದು ಬಿದ್ದಿರುವ ಹಿನ್ನೆಲೆ ಕೌಟುಂಬಿಕ ನ್ಯಾಯಾಲಯ ತನಗೆ ಮಾಸಿಕ 50000 ರು. ಜೀವನಾಂಶ ನಿಗದಿಪಡಿಸಿದೆ. ತನ್ನ ತಿಂಗಳ ಖರ್ಚು 6.16 ಲಕ್ಷವಾಗುತ್ತಿದ್ದು, ಕನಿಷ್ಠ 5 ಲಕ್ಷ ಮಾಸಿಕ ಜೀವನಾಂಶ ಪಾವತಿಸಲು ಪತಿಗೆ ಆದೇಶಿಸಬೇಕು ಎಂದು ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ಇತ್ತೀಚೆಗೆ ಹೈಕೋರ್ಟ್ ಮುಂದೆ ವಿಚಾರಣೆಗೆ ಬಂದಿತ್ತು.
ಅರ್ಜಿದಾರೆಯ ಮನವಿ ಕಂಡು ಅಚ್ಚರಿ ಗೊಳಗಾದ ನ್ಯಾಯಮೂರ್ತಿ ಲಲಿತಾ ಕನ್ನಘಂಟಿ, ಮಾಸಿಕ ವೆಚ್ಚಕ್ಕಾಗ ಅರ್ಜಿದಾರೆಗೆ 6,16,300 ಬೇಕೆ? ಪತಿ ಎಷ್ಟು ಸಂಪಾದನೆ ಮಾಡುತ್ತಿದ್ದಾರೆ ಎಂಬುದನ್ನು ಆಧರಿಸಿ ಪತ್ನಿಗೆ ಜೀವನಾಂಶ ನೀಡಲಾಗದು. ಪತಿ 10 ಕೋಟಿ ಸಂಪಾದಿಸಬಹುದು, ಹಾಗೆಂದು ನ್ಯಾಯಾಲಯವು ಪತ್ನಿಗೆ 5 ಕೋಟಿ ರು. ಕೊಡಲು ಆದೇಶಿಸಲಾಗುತ್ತದೆಯೇ? ಒಬ್ಬ ಮಹಿಳೆ ತನಗಾಗಿ ತಿಂಗಳಿಗೆ ಇಷ್ಟು ಖರ್ಚು ಮಾಡುತ್ತಾರೆಯೇ? ಇದು ಜೀವನಾಂಶ ಕೇಳುವುದಲ್ಲ. ನಿಜವಾಗಿಯೂ ವಸೂಲಿ ಮಾಡುವುದಾಗಿದೆ. ಪತ್ನಿಗೆ ಮಾಸಿಕ 6.16 ಲಕ್ಷರು, ಬೇಕೆಂದರೆ, ಅವರು ಸಂಪಾದಿಸಲಿ. ಪತಿ ಸಂಪಾದಿಸಿರುವುದನ್ನು ಕೇಳುವುದಲ್ಲ. ಪತಿಗೆ ಬೇರೆ ಜವಾಬ್ದಾರಿ ನಿರ್ವಹಿಸುವುದು ಬೇಡವೇ.
ಮಕ್ಕಳನ್ನು ಆರೈಕೆ ಮಾಡುವುದು ಬೇಡವೇ ಎಂದು ಕಟುವಾಗಿ ಪ್ರಶ್ನಿಸಿತು. ಪತ್ನಿಯ ಪರ ವಕೀಲರು, ಅರ್ಜಿದಾರೆಗೆ ಪೌಷ್ಟಿಕಾಂಶಯುಕ್ತ ಆಹಾರ ಬೇಕಿದೆ. ಈಗ ಅವರು ಹೊರಗಡೆ ಊಟ ಮಾಡುವಂತಾ ಗಿದೆ. ಊಟಕ್ಕೆ ತಿಂಗಳಿಗೆ 40000 ರು. ಬೇಕಿದೆ. ಅರ್ಜಿದಾರೆಯನ್ನು ತೊರೆದಿರುವ ಪತಿಯು ಪ್ರತಿದಿನ ಬ್ರಾಂಡೆಡ್ ಬಟ್ಟೆಗಳನ್ನು ಧರಿಸುತ್ತಿದ್ದಾರೆ. ಈ ಶರ್ಟಿನ ಬೆಲೆ 10000 ರು. ಇದೆ. ಆದರೆ ಅರ್ಜಿದಾರೆ ಹಳೆಯ ಬಟ್ಟೆ ಧರಿಸಬೇಕಿದೆ. ಬಟ್ಟೆ, ಸೌಂದರ್ಯ ವರ್ಧಕ, ಔಷಧಿ ವೆಚ್ಚ ಮತ್ತು ಇತರೆ ವಸ್ತುಗಳ ಖರೀದಿಗೆ 60 ಸಾವಿರ ರು. ಬೇಕಿದೆ. ಎಂದು ವಿವರಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಗಳು, ಏನ್ರಿ ಇದೆಲ್ಲಾ? ಈ ವಿಚಾರಗಳನ್ನು ಕೋರ್ಟ್‌ಗೆ ಹೇಳಬೇಡಿ.
ಚೌಕಾಸಿ ನಡೆಸಲು ನ್ಯಾಯಾಲಯ ಮಾರುಕಟ್ಟೆಯಲ್ಲ, ಅರ್ಜಿದಾರೆಗೆ ಅರ್ಥವಾಗುತ್ತಿಲ್ಲ. ಆಕೆಯ ವಾಸ್ತವಿಕ ಖರ್ಚುವೆಚ್ಚಗಳನ್ನು ನ್ಯಾಯಾಲ ಯಕ್ಕೆ ತಿಳಿಸಬೇಕು. ಇಲ್ಲವಾದರೆ ಅರ್ಜಿ ಯನ್ನು ವಜಾಗೊಳಿಸಲಾಗುವುದು. ನ್ಯಾಯ ಯುತವಾಗಿ ನಡೆದುಕೊಳ್ಳಲು ನಿಮಗೆ ಕೊನೆಯ ಅವಕಾಶ ನೀಡಲಾಗುತ್ತಿದೆ. ನೀವು ಅರ್ಥ ಮಾಡಿಕೊಂಡು ಆಕೆಗೆ ಸಲಹೆ ನೀಡ ಬೇಕು ಎಂದು ವಕೀಲರಿಗೆ ಸೂಚಿಸಿತು. ಅಲ್ಲದೆ, ಅರ್ಜಿದಾರೆಯು ಮಗುವಿನ ಖರ್ಚಿಗೆ ವೆಚ್ಚವಾಗುವುದನ್ನು ಏನೂ ಹೇಳಿಲ್ಲ: ವೈವಾಹಿಕ ವ್ಯಾಜ್ಯವಿದೆ ಎಂದು ಮಾಸಿಕ ವೈಯಕ್ತಿಕ ಖರ್ಚಿಗೆ 6,16,300 ರು. ಕೇಳಿ ವತೆಗೆ ಶಿಕ್ಷೆ ನೀಡುವುದಲ್ಲ, ನ್ಯಾಯಾಲಯದ ಪ್ರಕ್ರಿಯೆ ದುರ್ಬಳಕ ಮಾಡಿಕೊಳ್ಳಬಹುದು ಎಂದುಕೊಳ್ಳುವವರೆಗೆ ಬಹು ಸ್ಪಷ್ಟವಾದ ಸಂದೇಶವನ್ನು ಹಾಲಿ ಪ್ರಕರಣದ ಮೂಲಕ ಹೊರಡಿಸಲಾಗುವುದು ಎಂದು ನ್ಯಾಯಮೂರ್ತಿಗಳು ನುಡಿದರು.
ಪೋಕ್ಸೋ ಕೇಸ್ ಸೆಟ್ಲ್‌ಮೆಂಟ್ ಅರ್ಜಿಗಳು ಹೆಚ್ಚಳ: ಸಂತ್ರಸ್ತೆಯನ್ನೇ ಮದುವೆಯಾಗುತ್ತೇನೆಂದು ಆರೋಪಿಗಳ ಅರ್ಜಿ..!
ಅದಕ್ಕೆ ಪತ್ನಿ ಪರ ವಕೀಲರು, ಜೀವನಾಂಶ ಕೋರಿಕೆಯು ತನ್ನ ವಾಸವಿಕ ಖರ್ಚು ವೆಚ್ಚವಲ್ಲ. ಅದು ನಿರೀಕ್ಷಿತ ವೆಚ್ಚವಾಗಿದೆ ಎಂದು ಸಮಜಾಯಿಷಿ ನೀಡಲು ಮುಂದಾದರು. ಇದರಿಂದ ಮತ್ತಷ್ಟು ಬೇಸರಗೊಂಡ ನ್ಯಾಯಮೂರ್ತಿಗಳು, ನಿರೀಕ್ಷಿತ ವೆಚ್ಚಗ ಳನ್ನು ಆಧರಿಸಿ ಜೀವನಾಂಶ ಕೋರಲು ಕಾನೂನಿನಲ್ಲಿ ಅವಕಾಶವಿಲ್ಲ. ಅಂತಹ ಕಾನೂನು ಎಲ್ಲಿದೆ ನಮಗೆ ತೋರಿಸಿ ಎಂದು ತಾಕಿತು ಮಾಡಿತು.
ಅಂತಿಮವಾಗಿ ಪತ್ನಿಯು ಮಾಸಿಕ ತನ್ನ ವಾಸ್ತವಿಕ ಖರ್ಚು-ವೆಚ್ಚ ವಿವರಗಳನ್ನು ಒಳಗೊಂಡ ಪ್ರಮಾಣ ಪತ್ರ ಸಲ್ಲಿಸಬೇಕು. ನಂತರ ನ್ಯಾಯಾಲಯ ಅಗತ್ಯ ಆದೇಶ ಹೊರಡಿಸಲಿದೆ ಎಂದು ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಸೆ.9ಕ್ಕೆ ಮುಂದೂಡಿದೆ.