ಮೋರ್ ಪವರ್ ಫುಲ್, ಮೋರ್ ಎನಿಮೀಸ್; ಇದು ರಾಜಕೀಯದ ತಂಬ್ ರೂಲ್ ಎಂದ ಡಿಕೆಶಿ

ಬಿಜೆಪಿ ಅವರು ರಾಜಕೀಯವಾಗಿ ಮಾತಾಡಲಿ. ರಾಜಕೀಯ ಮಾಡೇ ಯಡಿಯೂರಪ್ಪನವರಿಂದ ನನ್ನ ವಿರುದ್ದ ತನಿಖೆಗೆ ಪರ್ಮಿಷನ್ ಕೊಡ್ಸಿಸಿದ್ದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಹೇಳಿದರು.

More Powerful, More Enemies; This is the thumb rule of politics, says DK Shivakumar rav

ಬೆಂಗಳೂರು (ಅ.20): ಬಿಜೆಪಿ ಅವರು ರಾಜಕೀಯವಾಗಿ ಮಾತಾಡಲಿ. ರಾಜಕೀಯ ಮಾಡೇ ಯಡಿಯೂರಪ್ಪನವರಿಂದ ನನ್ನ ವಿರುದ್ದ ತನಿಖೆಗೆ ಪರ್ಮಿಷನ್ ಕೊಡ್ಸಿಸಿದ್ದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಹೇಳಿದರು.

ಇಂದು ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಂದು  ಅಡ್ವೋಕೇಟ್ ಜನರಲ್ ತನಿಖೆಗೆ ಪರ್ಮಿಷನ್ ಕೊಡಲು ಬರಲ್ಲ ಅಂತ ಬರೆದಿದ್ರು. ಅದರೂ ಯಡಿಯೂರಪ್ಪ ತನಿಖೆಗೆ ಅನುಮತಿ ಕೊಡಿಸಿದ್ರು. ಬೇರೆ ಯಾರ ಮೇಲೂ ತನಿಖೆಗೆ ಪರ್ಮಿಷನ್ ಕೊಟ್ಟಿಲ್ಲ. ಅವರ ಪಾರ್ಟಿಯವರದ್ದೇ ಬೇಕಾದಷ್ಟು ಕೇಸ್ ಇವೆ. ನಾನು ಶಾಸಕನಾಗಿದ್ರೂ ಸ್ಪೀಕರ್ ಹತ್ರನೂ ಅದನ್ನ ತೆಗೆದುಕೊಂಡು ಹೋಗಲಿಲ್ಲ. ಆದರೆ ಇವರು ಎಲ್ಲೋ ತೆಗೆದುಕೊಂಡು ಹೋದ್ರು ಪರ್ಮಿಷನ್ ಕೊಟ್ರು. ಈಗ ಶೇ.90ರಷ್ಟು ತನಿಖೆ ಮಾಡಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಈವರೆಗೂ ನನ್ನ ಹತ್ರ ಯಾವುದೇ ಆಫೀಸರ್ ಬಂದು ತನಿಖೆ ಮಾಡಿಲ್ಲ. ಅದು ಹೇಗೆ ತನಿಖೆ ಮಾಡಿದ್ರೋ ಗೊತ್ತಿಲ್ಲ. ನೋಡೋಣ ಈಗ ತಾನೆ ಬಂದಿದ್ದೇನೆ. ನಮ್ಮ ವಕೀಲರ ಹತ್ರ ಚರ್ಚೆ ಮಾಡ್ತೀನಿ ಎಂದರು.

ಸುಪ್ರೀಂ, ಸಿಬಿಐ, ಲೋಕಾಯುಕ್ತ ಇರೋದು ರಾಜಕಾರಣ ಮಾಡಕ್ಕೆ ಅಲ್ಲ; ಡಿಕೆಶಿ ವಿರುದ್ಧ ಈಶ್ವರಪ್ಪ ಗರಂ

ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗ್ತಿಲ್ಲ ಎಂಬ ಬಿಜೆಪಿ ನಾಯಕರ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,  ಹಾದಿ ಬೀದಿಯಲ್ಲಿ ಹೋಗುವವರಿಗೆ ಉತ್ತರ ನೀಡಲು ನಾನು ತಯಾರಿಲ್ಲ. ಕೋರ್ಟ್ ಏನು ಹೇಳುತ್ತದೆಯೋ ಕೋರ್ಟ್ ಪ್ರಕಾರ ಗೌರವ ಕೊಡಬೇಕು ಅಷ್ಟೆ. ಹಾಗೆ ಹೀಗೆ ಅವರು ಹೇಳ್ತಾರೆ ಅಂತ ಉತ್ತರ ಕೊಡಲು ಆಗೊಲ್ಲ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ಕೇಸರಿ ಪಾಳಯಕ್ಕೆ ಬಿಗ್ ಶಾಕ್; ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ ಇಂದು ಕಾಂಗ್ರೆಸ್ ಸೇರ್ಪಡೆ!

ಇನ್ನು ಶಾಸಕಿ ಪೂರ್ಣಿಮಾ ಶ್ರೀನಿವಾಸ ಕಾಂಗ್ರೆಸ್ ಸೇರ್ಪಡೆಗೆ ಬಿಜೆಪಿಯವರು ವಿರೋಧ ಮಾಡಿದ್ದಾರೆಂಬ ವಿಚಾರ ಕೇಳಿಬಂದಿದೆ.  ರಾಜಕೀಯವಾಗಿ ಯಾರು ಪ್ರಬಲವಾಗಿದ್ದಾರೋ ಅವರಿಗೆ ವಿರೋಧಿಗಳು ಇರ್ತಾರೆ. ಇದು ರಾಜಕೀಯದ ತಂಬ್ ರೂಲ್ ಮೋರ್ ಪವರ್ ಫುಲ್   ಮೋರ್ ಎನಿಮೀಸ್. ಪೂರ್ಣಿಮಾ ಶ್ರೀನಿವಾಸ್ ಶಾಸಕರಾಗಿದ್ರು, ಕಾರ್ಪೋರೆಟರ್ ಆಗಿದ್ರು. ಅವರ ತಂದೆ ನಮ್ಮ ನಾಯಕರಾಗಿದ್ರು. ಈಗ ಬಿಜೆಪಿ ಜೆಡಿಎಸ್ ಮೈತ್ರಿ ವಿರೋಧಿಸಿ ಕಾಂಗ್ರೆಸ್ ಸೇರುತ್ತಿದ್ದಾರೆ. ವಿರೋಧಿಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ತಿರುಗೇಟು ನೀಡಿದರು.

Latest Videos
Follow Us:
Download App:
  • android
  • ios