ಇವರಿಗಿಲ್ಲ ಬರ: ಶಾಸಕರು, ಸಚಿವರ ವೇತನ ಏರಿಕೆಗೆ ಸಂಪುಟ ಒಪ್ಪಿಗೆ!
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು 2022ರಲ್ಲಿ ಶಾಸಕರು, ಸಚಿವರ ವೇತನ ಹಾಗೂ ಭತ್ಯೆಯನ್ನು ಹೆಚ್ಚಳ ಮಾಡಿದ್ದ ನಿರ್ಣಯಕ್ಕೆ ಘಟನೋತ್ತರ ಒಪ್ಪಿಗೆ ನೀಡಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಬೆಂಗಳೂರು (ಅ.20): ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು 2022ರಲ್ಲಿ ಶಾಸಕರು, ಸಚಿವರ ವೇತನ ಹಾಗೂ ಭತ್ಯೆಯನ್ನು ಹೆಚ್ಚಳ ಮಾಡಿದ್ದ ನಿರ್ಣಯಕ್ಕೆ ಘಟನೋತ್ತರ ಒಪ್ಪಿಗೆ ನೀಡಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
2022ರ ಫೆಬ್ರುವರಿಯಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ವೇತನ, ಭತ್ಯೆ ಪರಿಷ್ಕರಣೆ ಮಾಡಲಾಗಿತ್ತು. ಈವರೆಗೆ ಪರಿಷ್ಕೃತ ವೇತನವನ್ನು ಶಾಸಕರು, ಸಚಿವರು ಪಡೆಯುತ್ತಿದ್ದರು. ಆದರೆ ಇದಕ್ಕೆ ಸಚಿವ ಸಂಪುಟ ಒಪ್ಪಿಗೆ ಪಡೆಯದ ಹಿನ್ನೆಲೆಯಲ್ಲಿ ಘಟನೋತ್ತರ ಒಪ್ಪಿಗೆ ನೀಡಿರುವುದಾಗಿ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಅಕ್ರಮ ಆಸ್ತಿ ಪ್ರಕರಣ ಮತ್ತೆ ಸಂಕಷ್ಟ ; ಡಿಕೆಶಿ ವಾದ ಒಪ್ಪದ ಹೈಕೋರ್ಟ್
ಮಲ ತ್ಯಾಜ್ಯ ಸಂಸ್ಕರಣೆ ಘಟಕ: ಎನ್ ಜಿಟಿ ನಿರ್ದೇಶನದಂತೆ ನಗರಾಭಿವೃದ್ಧಿ ಇಲಾಖೆಯು ಪರಿಸರ ಪರಿಹಾರ ನಿಧಿಯ ಅಡಿ 50 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇರುವ 110 ನಗರಗಳಲ್ಲಿ 400.24 ಕೋಟಿ ರು. ವೆಚ್ಚದಲ್ಲಿ ಮಲ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಬೆಳಗಾವಿ ಕಲಾಪ ದಿನಾಂಕ ನಿಗದಿ ಅಧಿಕಾರ ಸಿಎಂಗೆ
ಬೆಳಗಾವಿಯಲ್ಲಿ 2 ವಾರಗಳ ನಡೆ ಯಲಿರುವ ಚಳಿಗಾಲದ ಅಧಿವೇ ಶನ ಕರೆಯುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾ ಗಿದ್ದು, ದಿನಾಂಕ ನಿಗದಿ ಮತ್ತಿತರ ಅಧಿಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಬಿದ್ದರೂ ಆಶ್ಚರ್ಯವಿಲ್ಲ: ಬಿ.ಸಿ.ಪಾಟೀಲ್