ಸ್ತಬ್ಧಚಿತ್ರ ನಿರಾಕರಣೆ ಬಗ್ಗೆ ಸಿಎಂ ಮೊಸಳೆ ಕಣ್ಣೀರು: ವಿಜಯೇಂದ್ರ

ಎಲ್ಲ ವಿಷಯದಲ್ಲೂ ಕೇಂದ್ರ ಸರ್ಕಾರ ರಾಜ್ಯದ ವಿರುದ್ಧ ಇದೆ ಎಂದು ಬಿಂಬಿಸುವುದನ್ನು ಬಿಡಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ತೀಕ್ಷ್ಣವಾಗಿ ಹೇಳಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ 

BY Vijayendra React to Karnataka Tableau Reject grg

ಬೆಂಗಳೂರು(ಜ.11):  ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ ನೀಡದಿರುವ ವಿಷಯದಲ್ಲಿ ಯಾವುದೇ ದುರುದ್ದೇಶ ಇಲ್ಲ. ಕಳೆದ ವರ್ಷ ಹೀಗಾದಾಗ ನಮ್ಮ ಸರ್ಕಾರದ ಹಿರಿಯರು ಯತ್ನಿಸಿದ್ದರಿಂದ ಅವಕಾಶ ಸಿಕ್ಕಿತ್ತು. ಇದನ್ನು ಗಮನಿಸದೆ ಮೊಸಳೆ ಕಣ್ಣೀರು ಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಎಲ್ಲ ವಿಷಯದಲ್ಲೂ ಕೇಂದ್ರ ಸರ್ಕಾರ ರಾಜ್ಯದ ವಿರುದ್ಧ ಇದೆ ಎಂದು ಬಿಂಬಿಸುವುದನ್ನು ಬಿಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀಕ್ಷ್ಣವಾಗಿ ಹೇಳಿದ್ದಾರೆ.

ಟ್ಯಾಬ್ಲೊ ಆಯ್ಕೆ ಪಾರದರ್ಶಕ: ಕೇಂದ್ರ

ನವದೆಹಲಿ: ಜ.26ರ ಗಣರಾಜ್ಯೋತ್ಸವದಂದು ಕರ್ನಾಟಕದ ಟ್ಯಾಬ್ಲೊ (ಸ್ತಬ್ಧ ಚಿತ್ರ)ಪ್ರದರ್ಶನಕ್ಕೆ ಅವಕಾಶ ನೀಡದೆ ಕೇಂದ್ರ ಸರ್ಕಾರ ತಾರತಮ್ಯ ಮಾಡಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪದ ಕುರಿತು ಸ್ಪಷ್ಟನೆ ನೀಡಿರುವ ರಕ್ಷಣಾ ಸಚಿವಾಲಯವು ‘ಟ್ಯಾಬ್ಲೊ ಪ್ರದರ್ಶನಕ್ಕೆ ರಾಜ್ಯಗಳಿಗೆ ಅವಕಾಶ ನೀಡಿರುವ ಪ್ರಕ್ರಿಯೆಯಲ್ಲಿ ಯಾವುದೇ ತಾರತಮ್ಯವಾಗಿಲ್ಲ’ ಎಂದಿದೆ.

ಗಣರಾಜ್ಯೋತ್ಸವ ಪರೇಡ್‌ಗೆ ಕರ್ನಾಟಕ ಸ್ತಬ್ಧಚಿತ್ರಕ್ಕಿಲ್ಲ ಅವಕಾಶ: ಕನ್ನಡಿಗ ವಿರೋಧಿ ಸರ್ಕಾರವೆಂದ ಸಿಎಂ ಸಿದ್ದರಾಮಯ್ಯ

ಅಲ್ಲದೇ ಗಣರಾಜ್ಯೋತ್ಸವದಂದು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಮಾನ ಅವಕಾಶ ನೀಡಬೇಕೆಂದು 3 ವರ್ಷಗಳ ಅವಧಿಯ ಯೋಜನೆಯೊಂದನ್ನು ಹಮ್ಮಿಕೊಳ್ಳಲಾಗಿದೆ. ಇದರ ಪ್ರಕಾರ, 2024, 25 ಮತ್ತು 26ರಲ್ಲಿ ಪ್ರತಿ ವರ್ಷ ಕೆಲ ರಾಜ್ಯಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಒಪ್ಪಂದಕ್ಕೆ ಕರ್ನಾಟಕವನ್ನು ಸೇರಿ 28 ರಾಜ್ಯಗಳು ಸಹಿ ಹಾಕಿವೆ. ಅದರಂತೆ ಈ ವರ್ಷ 16 ರಾಜ್ಯಗಳನ್ನು ಅತ್ಯಂತ ಪಾರದರ್ಶಕವಾಗಿ ಆಯ್ಕೆ ಮಾಡಲಾಗಿದೆ. ಅದಾಗ್ಯೂ ಸಮಿತಿ ಆಯ್ಕೆಯಿಂದ ಹೊರಗುಳಿದಿರುವ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳು ಜ.23ರಿಂದ 31ರವರೆಗೆ ಕೆಂಪುಕೋಟೆಯ ಸಂಕೀರ್ಣದಲ್ಲಿ ನಡೆಯಲಿರುವ ‘ಭಾರತ್‌ ಪರ್ವ್‌’ನಲ್ಲಿ ತಮ್ಮ ಟ್ಯಾಬ್ಲೋಗಳನ್ನು ಪ್ರದರ್ಶಿಸಬಹುದು ಎಂದು ಮೂಲಗಳು ತಿಳಿಸಿವೆ.

ಈ ಬಾರಿ ಆಯ್ಕೆಯಾಗಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ಆಯ್ಕೆಯಾಗದ ಕರ್ನಾಟಕ ಮತ್ತು ಪಂಜಾಬ್ ರಾಜ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಭಗವಂತ್‌ ಮಾನ್‌, ಬೇಕೆಂದೇ ಕೇಂದ್ರ ಬಿಜೆಪಿ ಸರ್ಕಾರ ತಾರತಮ್ಯ ಮಾಡಿದೆ ಎಂದು ಆರೋಪಿಸಿದ್ದರು.

Latest Videos
Follow Us:
Download App:
  • android
  • ios