ವಿಜಯೇಂದ್ರ ಸಿಎಂ ಆಗೋದನ್ನ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ: : ಶಿವನಗೌಡ ನಾಯಕ ಭವಿಷ್ಯ!
ಬಿಜೆಪಿ ಮಾಜಿ ಸಚಿವ ಶಿವನಗೌಡ ನಾಯಕ ಅವರು ಬಿ.ವೈ. ವಿಜಯೇಂದ್ರ ಅವರು ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ವಿಜಯೇಂದ್ರ ಅವರು ರಾಜ್ಯಕ್ಕೆ ಏಮ್ಸ್ ತರುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ರಾಯಚೂರು (ಜ.19): ಬಿವೈ ವಿಜಯೇಂದ್ರ ಈಗ ರಾಜ್ಯಾಧ್ಯಕ್ಷರಾಗಿದ್ದಾರೆ. ಮುಂದೊಂದು ದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಶಿವನಗೌಡ ನಾಯಕ ಹೇಳಿದರು.
ಮಾನ್ವಿಯಲ್ಲಿ ಕೆಎಸ್ ಎನ್ ನೇತೃತ್ವದಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭ ಉದ್ದೇಶಿಸಿ ಮಾತನಾಡಿದ ಶಿವನಗೌಡ ನಾಯಕ ಅವರು, ವಿಜಯೇಂದ್ರ ಅಧಿಕಾರದ ಕತ್ತಿ ಹಿಡಿದು ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ. ವಿಜಯೇಂದ್ರ ಅಧಿಕಾರಕ್ಕೆ ಬಂದರೆ ನಮಗೆ ನವಲಿ ಜಲಾಶಯ ಮಾಡಿ, ಹತ್ತಾರು ಕೆರೆ ನಿರ್ಮಾಣ ಮಾಡಲಿದ್ದಾರೆ ಎಂದರು.
ನಿನ್ನಪ್ಪನನ್ನೂ ಸಿಎಂ ಮಾಡೋಕೆ ಬಂದಿದ್ದು ನಾನು, ನೀನೊಬ್ಬ ಬಚ್ಚಾ ವಿಜಯೇಂದ್ರ.. ಗೋಕಾಕ್ ಸಾಹುಕಾರ ನೇರಾನೇರ ವಾಗ್ದಾಳಿ!
ವಿಜಯೇಂದ್ರ ಸಿಎಂ ಆಗುವುದನ್ನ ತಪ್ಪಿಸಲು ಸಾಧ್ಯವಿಲ್ಲ:
ವಿಜಯೇಂದ್ರ ಮುಂದೆ ಈ ರಾಜ್ಯದ ಮುಖ್ಯಮಂತ್ರಿಯಾಗುವುದು ಶತಸಿದ್ಧ. ಅವರು ಮುಖ್ಯಮಂತ್ರಿ ಆಗುವುದನ್ನ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಈ ರಾಜ್ಯದ ಸಿಎಂ ಆಗೇ ಆಗ್ತಾರೆ ಎಂದು ಭವಿಷ್ಯ ನುಡಿದರು. ಇದೇ ವೇಳೆ ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ತರುವ ಕುರಿತು ಮಾತನಾಡಿದ ಅವರು, ಜಿಲ್ಲೆಯ ಜನರು ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ವಿಜಯೇಂದ್ರ ಅವರು ಮೋದಿ, ನಡ್ಡಾ, ಅಮಿತ್ ಶಾ ಅವರ ಮನವೊಲಿಸಿ ರಾಯಚೂರು ಜಿಲ್ಲೆಗೆ ಏಮ್ಸ್ ತರುತ್ತಾರೆ ಎಂಬ ಭರವಸೆ ಇದೆ. ರಾಯಚೂರು ಜಿಲ್ಲೆಗೆ ಏಮ್ಸ್ ತರುವುದು ವಿಜಯೇಂದ್ರ ಅವರಿಂದ ಮಾತ್ರ ಸಾಧ್ಯ ಎಂದರು.