ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವುದು ಕಾರ್ಯಕರ್ತರಲ್ಲಿ ಹೊಸ ಹುರುಪು ಬಂದಿದೆ: ನಳೀನ್
ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವುದು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು ಬಂದಿದೆ ಎಂದು ನಿರ್ಗಮಿತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಮಂಗಳೂರು (ನ.10): ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವುದು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು ಬಂದಿದೆ ಎಂದು ನಿರ್ಗಮಿತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಬಿವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಹಿನ್ನೆಲೆ ಇಂದು ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಆಡಳಿತ ವೈಫಲ್ಯಗಳು ಕಂಡುಬರುತ್ತಿವೆ. ಕಳೆದ ಆರು ತಿಂಗಳ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಎಲ್ಲದರ ವಿರುದ್ಧ ಹೋರಾಟ ಕೈಗೆತ್ತಿಕೊಂಡು ಪಾರ್ಟಿಯನ್ನು ತಳಮಟ್ಟದಿಂದ ಮತ್ತೆ ಸಂಘಟನೆ ಮಾಡುವ ಶಕ್ತಿ ವಿಜಯೇಂದ್ರಗೆ ಇದೆ. ಜೊತೆಯಾಗಿ ಪಕ್ಷ ಸಂಘಟನೆ ಮಾಡಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದರು.
ಕೊಟ್ಟಿರುವ ಜವಾಬ್ದಾರಿ ವಿಜಯೇಂದ್ರ ಸವಾಲಾಗಿ ಸ್ವೀಕರಿಸುತ್ತಾನೆ: ಸಂಸದ ಬಿವೈ ರಾಘವೇಂದ್ರ
ಕಳೆದ ನಾಲ್ಕು ವರ್ಷ ಅವಧಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷನಾಗಿದ್ದಕ್ಕೆ ನನಗೆ ತೃಪ್ತಿ ಇದೆ. ಕರಾವಳಿಯಿಂದ ಬಂದವನು ರಾಜ್ಯ ಏನು ಸುತ್ತುತ್ತಾನೆ ಅನ್ನೋದಕ್ಕೆ ಅಪವಾದವಾಗಿ ರಾಜ್ಯ ಸುತ್ತಿ ಸಂಘಟನೆ ಮಾಡಿದ್ದೇನೆ. ಎಲ್ಲಾ ಹಿರಿಯರ ಮಾರ್ಗದರ್ಶನದಲ್ಲಿ ರಾಜ್ಯದ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ ಎಂದರು. ಇದೇ ವೇಳೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೀರಾ ಎಂಬ ಪ್ರಶ್ನೆಗೆ ನಗುತ್ತಾ ಸುಮ್ಮನಾದ ಕಟೀಲು.
ಈಗ ಕಾಂಗ್ರೆಸ್‌ಗೆ ನೇರಾನೇರ ಪೈಪೋಟಿ:
ಇಷ್ಟು ದಿನಗಳ ಕಾಲ ಬಿಜೆಪಿ ದೌರ್ಬಲ್ಯದ ಲಾಭ ಪಡೆದುಕೊಂಡಿದ್ದ ಕಾಂಗ್ರೆಸ್. ನಳೀನ್ ಕುಮಾರ ಕಟೀಲ್‌ರನ್ನು ಗಂಭೀರವಾಗಿ ಪರಿಗಣಿಸದೇ ಕಡೆಗಣಿಸಿದ್ದ ಕಾಂಗ್ರೆಸ್. ಕಟೀಲ್ ರನ್ನು ಪಾಲಿಟಿಕಲ್ ಜೋಕರ್ ಎಂದೇ ಬಿಂಬಿಸಿದ್ದ ಕಾಂಗ್ರೆಸ್. ಆದರೆ ಇನ್ಮುಂದೆ ವಿಜಯೇಂದ್ರರನ್ನು ಹಾಗೆ ಬಿಂಬಿಸುವುದು ಅಸಾಧ್ಯ. ಪ್ರಬಲ ಸಮುದಾಯದ ಯಡಿಯೂರಪ್ಪ ಬೆನ್ನಿಗೆ ಇರುವುದರಿಂದ ಕಾಂಗ್ರೆಸ್ ಗೆ ಪೈಪೋಟಿ ಎದುರಿಸುವುದು ಸಹಜ. ಸಮುದಾಯದ ನಾಯಕತ್ವಕ್ಕೆ ನಡೆಯುತ್ತಿರುವ ಪೈಪೋಟಿ ಗೆ ವಿಜಯೇಂದ್ರ ಕೂಡ ಎಂಟ್ರಿಯಾಗಿದ್ದಾರೆ.
ರಾಜ್ಯಾಧ್ಯಕ್ಷರಾದ ಬೆನ್ನಲ್ಲೇ ವಿಜಯೇಂದ್ರ ಮೊದಲ ಘೋಷಣೆ, ಶುಕ್ರವಾರ ವಿಪ ...
ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್ ಅನ್ಯಾಯ ಮಾಡುತ್ತಿದೆ ಎಂಬ ಮೆಸೇಜ್ ಮತ್ತೆ ಪಾಸ್ ಆಗುವ ಸಾಧ್ಯತೆ. ಇದನ್ನು ಕೌಂಟರ್ ಮಾಡುವುದಕ್ಕೆ ಸ್ಟ್ರಾಟಜಿ ಬದಲಿಸಬೇಕಿರುವುದು ಕಾಂಗ್ರೆಸ್. ಇದೀಗ ವಿಜಯೇಂದ್ರ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿರುವುದರಿಂದ ಕಾಂಗ್ರೆಸ್ ವಿರುದ್ಧ ಹೋರಾಟಕ್ಕೆ ಹೊಸ ಸ್ವರೂಪ ಸಿಗುವ ಆತಂಕ ಕಾಂಗ್ರೆಸ್‌ಗೆ ಎದುರಾಗಿದೆ.