ಉದ್ಯಮಿ ಮೋಹನ್‌ದಾಸ್‌ ಪೈ ಅವರು ಡಿಸಿಎಂ ಡಿಕೆ ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಬೆಂಗಳೂರು ಅಭಿವೃದ್ಧಿ ಕುರಿತು ಚರ್ಚಿಸಿದ್ದಾರೆ. ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುವಂತೆ ಮನವಿ ಮಾಡಿದ್ದು, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಬೆಂಗಳೂರು (ಮಾ.1): ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಿ ಐಟಿ ಸಚಿವ ಪ್ರಿಯಾಂಕ್‌ ಖರ್ಗೆ ಜೊತೆಗೆ ಸೋಶಿಯಲ್‌ ಮೀಡಿಯಾದಲ್ಲಿ ಜಟಾಪಟಿ ನಡೆಸಿದ್ದ ಉದ್ಯಮಿ ಮೋಹನ್‌ದಾಸ್‌ ಪೈ ಶನಿವಾರ ಇಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಭೇಟಿ ಮಾಡಿ ಮಾತುಕತೆ ನಡೆಸಿದರು. ಸದಾಶಿವ ನಗರದ ಡಿಸಿಎಂ ಡಿಕೆಶಿ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಇತ್ತೀಚೆಗೆ ಸರ್ಕಾರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದ ಮೋಹನ್ ದಾಸ್ ಪೈ, ಬೆಂಗಳೂರು ಅಭಿವೃದ್ಧಿ ವಿಚಾರಕ್ಕೆ ಏನೂ ಕೆಲಸ ಆಗಿಲ್ಲ ಎಂದು ಕಿಡಿಕಾರಿದ್ದರು.

ಭೇಟಿಯ ಬಳಿಕ ಮಾತನಾಡಿದ ಮೋಹನ್‌ದಾಸ್‌ ಪೈ, 'ನಾವು ಬೆಂಗಳೂರು ಮಿನಿಸ್ಟರ್ ಬಳಿ ಚರ್ಚೆ ಮಾಡಿದ್ದೇವೆ. ಬೆಂಗಳೂರು ವಿಷಯವಾಗಿ ಚರ್ಚೆಯಾಗಿದೆ. ಅವರು ಬೆಂಗಳೂರು ಹೀರೋ ಆಗಬೇಕು. ಬೆಂಗಳೂರು ಅಭಿವೃದ್ಧಿ ಆಗಬೇಕು. ಬೆಂಗಳೂರು ಉತ್ತಮ ನಗರ, ಗ್ಲೋಬಲ್ ಸಿಟಿ, ಸೈನ್ಸ್ ಬೇಕು. ನಮಗೆ ಒಳ್ಳೆಯ ಅಭಿವೃದ್ಧಿ ಬೇಕು. ಪುಟ್‌ಪಾತ್, ರಸ್ತೆ, ಮೆಟ್ರೋ ಅಭಿವೃದ್ಧಿ ಆಗಬೇಕು. ಇನ್ನೂ ಆರು ತಿಂಗಳಲ್ಲಿ ಅಭಿವೃದ್ಧಿ ಮಾಡುತ್ತೇನೆ ಅಂದಿದ್ದಾರೆ. ಸಮಸ್ಯೆ ಬಗೆ ಹರಿಸುವ ಭರವಸೆ ಇದೆ. ನಾವು ಸಮಸ್ಯೆ ಬಗ್ಗೆ ಹೇಳಿದ್ದೇವೆ . ಕೆಲವರು ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತಾರೆ. ಕೆಲವರು ಟೀಕೆ ಮಾಡ್ತಾರೆ. ಭಾರತದಲ್ಲಿ ಯಾವುದೇ ಸಿಟಿಯಲ್ಲಿ ಅಭಿವೃದ್ಧಿ ಬಗ್ಗೆ ಕೇಳಲ್ಲ. ನಾವು ಹೇಳಿದ್ರೆ, ಕರೆದು ಅಭಿಪ್ರಾಯ ‌ಪಡೀತಾರೆ' ಎಂದು ಹೇಳಿದರು.

ಬೆಂಗಳೂರು ರೋಡ್‌ ಸರಿ ಇಲ್ಲ ಅಂತಾ ಉದ್ಯಮಿ ಹೇಳಿದ್ರೆ, 500 ಶಬ್ದದ ಟ್ವೀಟ್‌ ಕುಟ್ಟಿ ತನ್ನ ಬೆನ್ನು ತಟ್ಟಿಕೊಂಡ ಪ್ರಿಯಾಂಕ್‌ ಖರ್ಗೆ!

ಇಷ್ಟು ಸಾಮರಸ್ಯ ಬೇರೆ ಯಾವ ಸಿಟಿಯಲ್ಲಿ ಇಲ್ಲ.ಕನ್ನಡಿಗರಿಗೆ ಒಳ್ಳೆಯ ಕೆಲಸ ಸಿಗಬೇಕು. ಬೆಂಗಳೂರು ಅಭಿವೃದ್ಧಿ ಆಗಬೇಕು ಎಂದರು. ಒಂದು ಪಕ್ಷದ ವಿರುದ್ದ ಮಾತನಾಡ್ತಿರಾ ಎಂಬ ಆರೋಪದ ಬಗ್ಗೆ ಮಾತನಾಡಿದ ಅವರು, 'ಅದು ತಪ್ಪು ನಾನು ಬೊಮ್ಮಾಯಿ ಇದ್ದಾಗ ಭ್ರಷ್ಟಾಚಾರ ಬಗ್ಗೆ ಮಾತನಾಡಿದ್ದೆ. ಟಿವಿ ಡಿಬೇಟ್ ನಲ್ಲಿ ಮಾತನಾಡಿದ್ದೇನೆ. ಯಡಿಯೂರಪ್ಪ ವಿರುದ್ಧವೂ ಮಾತನಾಡಿದ್ದೇನೆ. ಎಲ್ಲ ಸರ್ಕಾರ ಇದ್ದಾಗ ಮಾತನಾಡಿದ್ದೇನೆ. ಎಲ್ಲಾ ಸಿಎಂಗಳು ನನ್ನ ಕರೆದು ಅಭಿಪ್ರಾಯ ಕೇಳಿದ್ದಾರೆ. ಬೆಂಗಳೂರು ಬಗ್ಗೆ ಅಂತರಾಷ್ಟ್ರೀಯ ಗಮನಸೆಳೆದಿದೆ. ಬೇರೆ ಎಲ್ಲ ಕಡೆಯಿಂದ ನನ್ನನ್ನು ಕೇಳ್ತಾರೆ. ಅಮೆರಿಕಾದಿಂದಲೂ ನಮ್ಮ ಸ್ನೇಹಿತರು ಕಾಲ್ ಮಾಡಿ ಕೇಳುತ್ತಾರೆ. ಬೆಂಗಳೂರು ನಮ್ಮ ಸಿಟಿ ಈ ಬಗ್ಗೆ ನಾವು ಮಾತನಾಡಿದ್ದೇವೆ. ಬೇರೆ ನಗರಗಳ ಅಭಿವೃದ್ಧಿ ಅಲ್ಲಿಯವರು ಮಾತನಾಡುತ್ತಾರೆ/ ಬೇರೆ ನಗರದಲ್ಲಿ ಸಮಸ್ಯೆ ಇಲ್ಲವಾ ಎಂದ ನಾಯಕರಿಗೆ ಮೋಹನ್‌ದಾಸ್‌ ಪೈ ತಿರುಗೇಟು ನೀಡಿದ್ದಾರೆ.

ಉದ್ಯಮಿ ಮೋಹನದಾಸ್ ಪೈ ಸಲಹೆ ಕೊಡಲಿ, ಟೀಕೆ ಮಾಡದಿರಲಿ: ಸಚಿವ ಎಂ‌.ಬಿ. ಪಾಟೀಲ ಎಚ್ಚರಿಕೆ