ಹಿಜಾಬ್‌ ಧರಿಸಿದ ಮುಸ್ಲಿಂ ವಿದ್ಯಾರ್ಥಿನಿಗೆ ಬುರ್ಖಾ ಧರಿಸಿ ಬಸ್‌ ಹತ್ತು ಎಂದು ಬಸ್‌ ಚಾಲಕ ಹೇಳುವ ಮೂಲಕ ದುರ್ವರ್ತನೆ ತೋರಿದ ಘಟನೆ ಬುಧವಾರ ಕಮಲಾಪುರದಲ್ಲಿ ನಡೆದಿದೆ. ವಿದ್ಯಾರ್ಥಿನಿ ಯರೊಂದಿಗೆ ಸಾರಿಗೆ ಸಂಸ್ಥೆಯ ಬಸ್‌ ಚಾಲಕನ ದುರ್ವರ್ತನೆಯನ್ನು ಸ್ಥಳೀಯರು ಖಂಡಿಸಿದ್ದಾರೆ.

ಕಲಬುರಗಿ (ಜು.27) :  ಹಿಜಾಬ್‌ ಧರಿಸಿದ ಮುಸ್ಲಿಂ ವಿದ್ಯಾರ್ಥಿನಿಗೆ ಬುರ್ಖಾ ಧರಿಸಿ ಬಸ್‌ ಹತ್ತು ಎಂದು ಬಸ್‌ ಚಾಲಕ ಹೇಳುವ ಮೂಲಕ ದುರ್ವರ್ತನೆ ತೋರಿದ ಘಟನೆ ಬುಧವಾರ ಕಮಲಾಪುರದಲ್ಲಿ ನಡೆದಿದೆ. ವಿದ್ಯಾರ್ಥಿನಿ ಯರೊಂದಿಗೆ ಸಾರಿಗೆ ಸಂಸ್ಥೆಯ ಬಸ್‌ ಚಾಲಕನ ದುರ್ವರ್ತನೆಯನ್ನು ಸ್ಥಳೀಯರು ಖಂಡಿಸಿದ್ದಾರೆ.

ಅಲ್ಲೇ ಇದ್ದ ಶಿಕ್ಷಕ ಈ ಬಗ್ಗೆ ಪ್ರಶ್ನಿಸಿದಾಗ ಚಾಲಕ ಶಿಕ್ಷಕನೊಂದಿಗೂ ಅಸಡ್ಡೆಯಿಂದ ವರ್ತಿಸಿರೋದು ಗೊತ್ತಾಗಿದೆ. ಕಲಬುರಗಿಯಿಂದ ಬಸವ ಕಲ್ಯಾಣಕ್ಕೆ ತೆರಳುತ್ತಿದ್ದ ಬಸ್‌ ಕಮಲಾಪುರ ಬಸ್‌ ನಿಲ್ದಾಣದಲ್ಲಿ ಬಂದಾಗ ವಿದ್ಯಾರ್ಥಿನಿಯರು ಓಕಳಿ ಗ್ರಾಮಕ್ಕೆ ಹೋಗಲು ಬಸ್‌ ಹತ್ತುವಾಗ ಈ ಪ್ರಸಂಗ ನಡೆದಿದೆ.

ಗಾಂಜಾ ಮದ್ಯ ಸೇವಿಸಿ ತರಗತಿಗೆ ನುಗ್ಗಿ ದುರ್ವರ್ತನೆ: ದೂರು ನೀಡಿದರೂ ಶಿಕ್ಷಕರಿಗೆ ಸಿಗುತ್ತಿಲ್ಲ ಪೊಲೀಸ್ ನೆರವು!

ವಿದ್ಯಾರ್ಥಿನಿಯರ ಜತೆ ಬಸ್‌ ಚಾಲಕನ ದುರ್ವರ್ತನೆ ಕಂಡ ಶಿಕ್ಷಕ ಪ್ರಶ್ನಿಸಿದಾಗ ತಕ್ಷಣ ಚಾಲಕ ಶಿಕ್ಷಕನ ವಿರುದ್ಧವೂ ದುರ್ವವರ್ತನೆ ತೋರಿದ್ದಾನೆ. ಯಾರಿಗೆ ದೂರು ಕೊಡ್ತಿಯಾ ಕೊಡು ಎಂದು ಶಿಕ್ಷPನ ಜೊತೆಗೇ ಚಾಲಕ ಗೂಂಡಾವರ್ತನೆ ತೋರಿದ್ದಾನೆ. ಬಸ್‌ ಚಾಲಕನ ಗೂಂಡಾ ವರ್ತನೆಗೆ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕರು ಆಕ್ರೋಶ ಹೊರಹಾಕಿದ್ದಾರೆ.