ಹಳೆಯ ವಿದ್ಯಾರ್ಥಿಯೊಬ್ಬ ದುರ್ವರ್ತನೆಗೆ ಹೊಸಪೇಟೆಯ ಕಟ್ಟಾ ಕೃಷ್ಣವೇಣಮ್ಮ ಸ್ಮಾರಕ ಕನ್ನಡ ಮಾಧ್ಯಮ ಶಾಲೆ ಶಿಕ್ಷಕರು ರೋಸಿಹೋಗಿದ್ದಾರೆ. ಪ್ರತಿನಿತ್ಯ ಮದ್ಯ, ಗಾಂಜಾ ಸೇವಿಸಿ ಬಂದು ಕಿರಿಕಿರಿ ಕೊಡುತ್ತಿದ್ದಾನೆ. ಇವನಿಂದ ತೊಂದರೆ ಆಗ್ತಿದೆ ಎಂದು ಪೊಲೀಸರಿಗೆ ದುರು ಕೊಟ್ಟರೂ ಪ್ರಯೋಜನವಾಗಿಲ್ಲ. ಪೊಲೀಸರಿಗೂ ತಲೆನೋವಾಗಿದ್ದಾನಂತೆ ಕಿರಾತಕ

ವಿಜಯನಗರ (ಮಾ.19): ಹಳೆಯ ವಿದ್ಯಾರ್ಥಿಯೊಬ್ಬ ದುರ್ವರ್ತನೆಗೆ ಹೊಸಪೇಟೆಯ ಕಟ್ಟಾ ಕೃಷ್ಣವೇಣಮ್ಮ ಸ್ಮಾರಕ ಕನ್ನಡ ಮಾಧ್ಯಮ ಶಾಲೆ(Katta Krishnavenamma Memorial Kannada Medium School) ಶಿಕ್ಷಕರು ರೋಸಿಹೋಗಿದ್ದಾರೆ.

1 ರಿಂದ 10 ತರಗತಿಯವರೆಗೆ 300 ಮಕ್ಕಳಿರುವ ಕನ್ನಡ ಶಾಲೆಯಲ್ಲಿ ಶಿಕ್ಷಕಿಯರು ಪಾಠ ಮಾಡುವ ಶಾಲೆಗೆ ನುಗ್ಗುತ್ತಿರುವ ಮದ್ಯವ್ಯಸನಿ. ವಿದ್ಯಾರ್ಥಿಗಳ ಮಧ್ಯೆ ಕುಳಿತು ಮದ್ಯಮಿಶ್ರಿತ ಜ್ಯೂಸ್ ಸೇವನೆ ಮಾಡುವ ಕಿರಾತಕ. ಕ್ಲಾಸ್ ಒಳಗಡೆ ಬಂದು ಮದ್ಯ ಕುಡಿಯೋದ್ಯಾಕೆ ಅಂತಾ ಕೇಳಿದ್ರೆ "ನಾನು ಜ್ಯೂಸ್ ಕುಡಿತಿನಿ' ಅಂತ ಹೇಳ್ತಾನೆ ಅವನ ದುರ್ವರ್ತನೆಯಿಂದ ಶಾಲೆಯ ಶಿಕ್ಷಕರಿಗೆ ಮಕ್ಕಳಿಗೆ ಕಿರಿಕಿರಿಯಾಗಿದೆ. ಶಾಲೆಯಿಂದ ಆಚೆ ಹೋಗುವಂತೆ ಹೇಳಿದರೆ ಶಿಕ್ಷಕರಿಗೆ ಅವಾಜ್ ಹಾಕುತ್ತಾನೆ!

Food Poisoning: ಕಲುಷಿತ ಆಹಾರ ಸೇವಸಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ: ಶಾಸಕ ಹರತಾಳು ಹಾಲಪ್ಪ ಭೇಟಿ

ರಾಮು ಅಲಿಯಾಸ್ ಹೆಗ್ಗಣ ಎಂದು ಗುರುತಿಸಲಾಗಿರುವ ಇವನು ಅದೇ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದಾನೆ. ಶಿಕ್ಷಕರು ಪಾಠ ಮಾಡುವ ವೇಳೆ ಮದ್ಯ ಗಾಂಜಾ ಮಿಶ್ರಿತ ಜ್ಯೂಸ್ ತೆಗೆದುಕೊಂಡು ಶಾಲೆಗೆ ನುಗ್ಗುತ್ತಾನೆ.

ನನಗೂ ಪಾಠ ಮಾಡಿ ಅಂತಾ ಕಿರಿಕ್:

ದಿನನಿತ್ಯ ಮದ್ಯ ಗಾಂಜಾ ಸೇವನೆಯ ಅಮಲಿನಲ್ಲಿರುವ ರಾಮು ಅಲಿಯಾಸ್ ಹೆಗ್ಗಣ ಶಾಲೆಗೆ ನುಗ್ಗಿ ನನಗೂ ಪಾಠ ಹೇಳ್ಕೊಡಿ ಅಂತಾ ಶಿಕ್ಷಕಿಯರಿಗೆ ತೊಂದರೆ ಕೊಡುತ್ತಿರುವ ದುರುಳ. ಇದು ಒಂದು ದಿನದ ತೊಂದರೆ ಅಲ್ಲ, ದಿನನಿತ್ಯ ಇವನು ಶಾಲೆಗೆ ನುಗ್ಗಿ ಮಕ್ಕಳಿಗೆ ಪಾಠ ಮಾಡುವುದಕ್ಕೆ ಅಡ್ಡಿಪಡಿಸುತ್ತಿದ್ದಾನೆ. ಸಾಲದ್ದಕ್ಕೆ ಶಾಲೆ ಇಲ್ಲದಾಗಲೂ ಮದ್ಯದ ಬಾಟಲಿಯೊಂದಿಗೆ ಶಾಲೆ ಅವರಣದೊಳಗೆ ನುಗ್ಗಿ ಕುಡಿಯುತ್ತಾನೆ. ಎಲ್ಲೆಂದರಲ್ಲಿ ಉಗುಳಿ ಶಾಲೆ ಮೈದಾನ ಕೊಳಕು ಮಾಡಿದ್ದಾನೆ. ಇದರಿಂದ ಶಿಕ್ಷಕರು, ವಿದ್ಯಾರ್ಥಿಗಳು ಇವನ ಕಾಟಕ್ಕೆ ಬೇಸತ್ತು‌ ಹೋಗಿದ್ದಾರೆ.

Mangaluru: ಫುಡ್ ಪಾಯ್ಸನ್‌ಗೆ ನರ್ಸಿಂಗ್ ವಿದ್ಯಾರ್ಥಿಗಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಪೊಲೀಸ್ ಠಾಣೆಗೆ ದೂರು ಕೊಟ್ಟರೂ ಪ್ರಯೋಜನ ಇಲ್ಲ:

ದುಶ್ಚಟಗಳಿಗೆ ದಾಸನಾಗಿರುವ ರಾಮು ಅಲಿಯಾಸ್ ಹೆಗ್ಗಣ ಪ್ರತಿದಿನ ಶಾಲೆಗೆ ನುಗ್ಗಿ ಶಿಕ್ಷಕರು ಮಕ್ಕಳಿಗೆ ತೊಂದರೆ ಕೊಡುತ್ತಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ಕೊಟ್ಟರೂ ಪ್ರಯೋಜನ ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡಿರುವ ಶಾಲಾ ಸಿಬ್ಬಂದಿ. ಪೊಲೀಸರಿಗೂ ತಲೆನೋವಾಗಿದ್ದಾನಂತೆ ಕುಡುಕ ರಾಮು ಅಲಿಯಾಸ್ ಹೆಗ್ಗಣ. ಸದ್ಯಕ್ಕಂತೂ ಇವನಿಂದ ಕನ್ನಡ ಶಾಲೆಯ ಶಿಕ್ಷಕಿಯರಿಗೆ ಮಕ್ಕಳಿಗೆ ನೆಮ್ಮದಿ ಇಲ್ಲದಂತಾಗಿದೆ.