Asianet Suvarna News Asianet Suvarna News

ಅಪ್ರಾಪ್ತ ಬಾಲಕಿ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ: ವಿಚಾರಣೆಗೆ ಸಮಯ ಕೇಳಿದ ಯಡಿಯೂರಪ್ಪ

ಲೈಂಗಿಕ ಕಿರುಕುಳ ಸಂಬಂಧ ಜೂ.12 ರಂದು ಹಾಜರಾಗುವಂತೆ ಯಡಿಯೂರಪ್ಪ ಅವರಿಗೆ ಸೋಮವಾರ ಸಿಐಡಿ ನೋಟಿಸ್ ಜಾರಿಗೊಳಿಸಿತ್ತು. ಈ ನೋಟಿಸ್‌ ಅನ್ನು ಸ್ವೀಕರಿಸಿದ್ದ ಯಡಿಯೂರಪ್ಪನವರ ಸಿಬ್ಬಂದಿ, ವಿಚಾರಣೆ ಸಂಗತಿಯನ್ನು ಯಡಿಯೂರಪ್ಪ ನವರಿಗೆ ತಿಳಿಸಿದ್ದರು. ಆದರೆ ತಾವು ದೆಹಲಿ ಪ್ರವಾಸದಲ್ಲಿರುವ ಕಾರಣ ವಿಚಾರಣೆಗೆ ಬರಲು ಸಾಧ್ಯವಿಲ್ಲ ಎಂದು ಹೇಳಿ ಕಾಲಾವಕಾಶ ಕೋರಿದ ಯಡಿಯೂರಪ್ಪ
 

BS Yediyurappa  Asked for time for the Inquiry on Sexual Harassment of Minor Girl Case grg
Author
First Published Jun 14, 2024, 8:16 AM IST

ಬೆಂಗಳೂರು(ಜೂ.14):  ಅಪ್ರಾಪ್ತ ಬಾಲಕಿ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗಲು 4 ದಿನಗಳ ಕಾಲಾ ವಕಾಶ ನೀಡುವಂತೆ ಕೋರಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಸಿಐಡಿಗೆ ಪತ್ರ ಬರೆದಿದ್ದಾರೆ.

ನಾನು ಪೂರ್ವನಿಗದಿತ ಕಾರ್ಯಕ್ರಮ ನಿಮಿತ್ತ ದೆಹಲಿಗೆ ತೆರಳುವ ಕಾರಣ ಜೂ.17ರಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಯಡಿಯೂರಪ್ಪ ಅವರು ತನಿಖಾಧಿಕಾರಿಗೆ ಮನವಿ ಮಾಡಿದ್ದಾರೆ.  ಈ ಹಿಂದೆ ನೀಡಿದ್ದ ನೋಟಿಸ್‌ಗಳಿಗೆ ಸಮ್ಮತಿಸಿ ಅದೇ ದಿನ ವಿಚಾರಣೆಗೆ ಸಹ ಹಾಜರಾಗಿ ತನಿಖೆಗೆ ಸಹಕರಿಸಿದ್ದೇನೆ. ಹೀಗಾಗಿ ತಮಗೆ ವಿಚಾರಣೆಗೆ ಹಾಜರಾ ಗಲು ಸಮಯ ನೀಡುವಂತೆ ಯಡಿಯೂರಪ್ಪ ಮನವಿ ಮಾಡಿದ್ದಾರೆ. 

ಪೋಕ್ಸೋ ಪ್ರಕರಣ: ಬಿಎಸ್‌ವೈಗಾಗಿ ದೆಹಲಿಯಲ್ಲಿ ಸಿಐಡಿ ಅಧಿಕಾರಿಗಳ ತಂಡದಿಂದ ತಲಾಶ್‌!

ಲೈಂಗಿಕ ಕಿರುಕುಳ ಸಂಬಂಧ ಜೂ.12 ರಂದು ಹಾಜರಾಗುವಂತೆ ಯಡಿಯೂರಪ್ಪ ಅವರಿಗೆ ಸೋಮವಾರ ಸಿಐಡಿ ನೋಟಿಸ್ ಜಾರಿಗೊಳಿಸಿತ್ತು. ಈ ನೋಟಿಸ್‌ ಅನ್ನು ಸ್ವೀಕರಿಸಿದ್ದ ಯಡಿಯೂರಪ್ಪನವರ ಸಿಬ್ಬಂದಿ, ವಿಚಾರಣೆ ಸಂಗತಿಯನ್ನು ಯಡಿಯೂರಪ್ಪ ನವರಿಗೆ ತಿಳಿಸಿದ್ದರು. ಆದರೆ ತಾವು ದೆಹಲಿ ಪ್ರವಾಸದಲ್ಲಿರುವ ಕಾರಣ ವಿಚಾರಣೆಗೆ ಬರಲು ಸಾಧ್ಯವಿಲ್ಲ ಎಂದು ಹೇಳಿ ಅವರು ಕಾಲಾವಕಾಶ ಕೋರಿದ್ದಾರೆ. 

Latest Videos
Follow Us:
Download App:
  • android
  • ios