Asianet Suvarna News Asianet Suvarna News

ಬಳ್ಳಾರಿ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಬ್ರೋಕರ್ ಗಳದ್ದೇ ಕಾರುಬಾರು; ಶಾಸಕ ಭರತ್ ರೆಡ್ಡಿ ಭೇಟಿ ನೀಡಿದಾಗ ಏನಾಯ್ತು ನೋಡಿ!

ಬಳ್ಳಾರಿ ಸಬ್ ರಿಜಿಸ್ಟಾರ್ ಕಚೇರಿಯಲ್ಲಿನ ಅವಾಂತರಗಳಿಂದ ಬೇಸತ್ತ ಜನರು ಅದೆಷ್ಟೋ ಬಾರಿ ಮೇಲಾಧಿಕಾರಿಗಳಿಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಸಾರ್ವಜನಿಕರ ದೂರಿನ ಹಿನ್ನೆಲೆ ದಿಡೀರನೇ ಕಚೇರಿಗೆ ಬಂದ ಬಳ್ಳಾರಿ ಶಾಸಕ ಭರತ್ ರೆಡ್ಡಿ ಅಧಿಕಾರಿಗಳ ಚಳಿ ಬಿಡಿಸಿದ್ದಾರೆ.

Broker trouble in Bellary Sub-Registrar office: MLA Bharat Reddy sudden visit rav
Author
First Published Oct 12, 2023, 3:30 PM IST

ವರದಿ: ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ (ಅ.12) : ಆ ಕಚೇರಿಯಲ್ಲಿ ಹಣ ನೀಡದೇ ಇದ್ರೇ ಏನು ಕೆಲಸವೇ ಆಗಲ್ವಂತೆ. ಕಚೇರಿ ಸಿಬ್ಬಂದಿಗಿಂತ ಬ್ರೋಕರ್ ಗಳು ಹೇಳಿದ ಮಾತೇ ಇಲ್ಲಿ ವೇದವಾಕ್ಕೆ. ನೇರವಾಗಿ ಯಾರೇ ಕಚೇರಿಗೆ ಬಂದ್ರೂ ಅವರ ಕೆಲಸವೇ ಆಗೋದೇ ಇಲ್ಲ. ಹೀಗೆ ನೂರಾರು ಆರೋಪಗಳಿಗರುವ ಬಳ್ಳಾರಿ ಸಬ್ ರಿಜಿಸ್ಟಾರ್ ಕಚೇರಿಯಲ್ಲಿನ ಅವಾಂತರಗಳಿಂದ ಬೇಸತ್ತ ಜನರು ಅದೆಷ್ಟೋ ಬಾರಿ ಮೇಲಾಧಿಕಾರಿಗಳಿಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಸಾರ್ವಜನಿಕರ ದೂರಿನ ಹಿನ್ನೆಲೆ ದಿಡೀರನೇ ಕಚೇರಿಗೆ ಬಂದ ಬಳ್ಳಾರಿ ಶಾಸಕ ಭರತ್ ರೆಡ್ಡಿ ಅಧಿಕಾರಿಗಳ ಚಳಿ ಬಿಡಿಸಿದ್ದಾರೆ.

 ಅಧಿಕಾರಿಗಳ ಕಾರ್ಯವೈಖರಿಗೆ ಸಾರ್ವಜನಿಕರ ಆಕ್ರೋಶ

ಬ್ರೋಕರ್ ಗಳ ಅಡ್ಡಾವಾಗಿರೋ ಬಳ್ಳಾರಿ ಸಬ್ ರಿಜಿಸ್ಟಾರ್ ಕಚೇರಿ ಅವಾಂತರಕ್ಕೆ ಸಾರ್ವಜನಿಕರ ಸುಸ್ತೋ ಸುಸ್ತು. ದೀಡರನೇ ಕಚೇರಿಗೆ ಭೇಟಿ ನೀಡಿದ ಬಳ್ಳಾರಿ ಶಾಸಕನ ಮುಂದೆ ದೂರಿನ ಸುರಿಮಳೆ. ಹೌದು, ಕೆಲವೊಂದು ಇಲಾಖೆಯಲ್ಲಿ ಅಧಿಕಾರಿಗಳಿಗಿಂದ ಬ್ರೋಕರ್ ಗಳು ಹೇಳಿದ ಕೆಲಸವೇ ಬೇಗ ಆಗುತ್ತದೆ ಎನ್ನುವ ಮಾತಿಗೆ ಬಳ್ಳಾರಿಯ ಸಬ್ ರಿಜಿಸ್ಟಾರ್ ಕಚೇರಿ ತಾಜಾ ಉದಾಹರಣೆಯಾಗಿ ನಿಂತಿದೆ.

ಬಳ್ಳಾರಿ: ಪೊಲೀಸ್ ಕ್ವಾಟ್ರಸ್‌ಲ್ಲಿ ಪೇದೆ ಆತ್ಮಹತ್ಯೆ, ಸಾವಿಗೆ ಕಾರಣವಾಯ್ತೇ ಹಿರಿಯ ಅಧಿಕಾರಿಗಳ ಕಿರುಕುಳ?

ರಿಜಿಸ್ಟೇಷನ್ ಮಾಡಿಸೋದ್ರಿಂದ ಹಿಡಿದು, ಲೀಜ್ ಬರೆಸೋದು, ಮಾರ್ಟಿಗೇಜ್ ಮಾಡೋದು ಸೇರಿದಂತೆ ಯಾವೊಂದು ಕೆಲಸವೂ ಇಲ್ಲಿ ಹಣವಿಲ್ಲದೇ ನಡೆಯೋದೇ ಇಲ್ಲ. ಆ ಹಣವನ್ನು ಇಲ್ಲಿ ನೇರವಾಗಿ ಯಾರು ಪಡೆಯೋದಿಲ್ಲ. ಎಲ್ಲವೂ ಬ್ರೋಕರ್ ಗಳ ಮೂಲಕವೇ ನಡೆಯುತ್ತದೆ. ದೈರ್ಯ ಮಾಡಿ ನೇರವಾಗಿ ರಿಜಿಸ್ಟೇಷನ್ ಮಾಡಿಸಲು ಹೋದ್ರೆ, ಆ ಡಾಕುಮೆಂಟ್ ಸರಿ ಇಲ್ಲ. ಇದು ಸರಿಯಿಲ್ಲವೆನ್ನು ಸಿದ್ಧ ಉತ್ತರವನ್ನು ಕೊಟ್ಟು ಕಚೇರಿ ಅಲೆದಾಡಿಸುತ್ತಾರೆ. ಇದೆಲ್ಲವನ್ನು ಗಮನಿಸಿದ ಸ್ಥಳೀಯ ಶಾಸಕ ಭರತ್ ರೆಡ್ಡಿ ದೀಡರನೇ ಕಚೇರಿಗೆ ಭೇಟಿ ನೀಡಿ ಸಬ್ ರಿಜಿಸ್ಟರ್ ಗಳಾದ ವೀರೆಶ್ ಮತ್ತು ಆನಂದ ಕುಮಾರ ಸೇರಿದಂತೆ ಇತರೆ ಅಧಿಕಾರಿಗಳಿಗೆ ಚಾಟಿ ಬೀಸಿದ್ರು. 

ಹಿಂದೆ ಹೇಗಾಯ್ತೋ ಗೊತ್ತಿಲ್ಲ. ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರದ ಆಟ ನಡೆಯೋದಿಲ್ಲ. ಇನ್ಮೂಂದೆ ಹೀಗೆ ದೂರು ಬಂದ್ರೆ, ನೇರವಾಗಿ ನಾನೇ ಲೋಕಾಯುಕ್ತರಿಗೆ ದೂರು ನೀಡೋದಲ್ಲದೇ ಕಂದಾಯ ಇಲಾಖೆ ಮಂತ್ರಿಗೇಳಿ ವರ್ಗಾವಣೆ ಮಾಡಿಸೋದಾಗಿ  ಎಚ್ಚರಿಕೆ ನೀಡಿದ್ರು.

ಕಚೇರಿಗೆ ಬಂದ ಶಾಸಕರ ಮುಂದೆಯೇ ನೂರಾರು ದೂರಿನ ಸುರಿಮಳೆ

ಇನ್ನೂ ಕೋಟಿಗಟ್ಟಲೇ ವ್ಯವಹಾರ ನಡೆಯೋ ಈ ಕಚೇರಿಯಿಂದ ರಾಜ್ಯಕ್ಕೆ ತರೆಗೆ ರೂಪದಲ್ಲಿ ಲಕ್ಷಾಂತರ ರೂಪಾಯಿ ಆದಾಯ ಬರುತ್ತದೆ. ಆದ್ರೇ, ಇಲ್ಲಿ ಕನಿಷ್ಠ ಪಾರ್ಕಿಂಗ್ ವ್ಯವಸ್ಥೆ, ಕುಡಿಯುವ ನೀರಿನ ಮತ್ತು ಮಹಿಳೆಯ ರಿಗೂ ಸೇರಿದಂತೆ ಪುರುಷರಿಗೆ ಶೌಚಾಲಯದ ವ್ಯವಸ್ಥೆ ಇಲ್ಲ. ಈ ಬಗ್ಗೆ ಜಿಲ್ಲಾ ನೋಂದಣಾಧಿಕಾರಿ ಮಬುನ್ನಿಸಾ ಅವರನ್ನು ಕೇಳಿದ್ರೇ, ಬ್ರೋಕರ್ಗಳಿದ್ದಾರೆ. 

ಹಣದ ವಹಿವಾಟು ನಡೆಯುವ ಬಗ್ಗೆ ಯಾವುದೇ ದೂರು ಬಂದಿಲ್ಲ ಎನ್ನುತ್ತಿದ್ದಾರೆ. ಹೊಸ ತಂತ್ರಾಂಶ ಬಂದ ಮೇಲೆ ಸಾರ್ವಜನಿಕರು ನೇರವಾಗಿ ನೋಂದಣಿ ಮಾಡಿಕೊಳ್ಳಬಹುದು ಎಂದು ಜಾರಿಕೊಳ್ಳುತ್ತಿದ್ದಾರೆ.  ಅಲ್ಲದೇ  ಶಾಸಕರಿಗೆ ದೂರು ಬಂದಿರಬಹುದು ಹೀಗಾಗಿ ಅವರು ಬಂದಿದ್ದಾರೆ. ನಮಗಂತೂ ದೂರು ಬಂದಿಲ್ಲ. ಆದ್ರೂ ಒಮ್ಮೆ ಪರಿಶೀಲಿಸುವುದಾಗಿ ನಿರ್ಲಕ್ಷ್ಯದಿಂದ ಉತ್ತರ ನೀಡುತ್ತಾರೆ.

ಕಾಂಗ್ರೆಸ್‌ಗೆ ಎಲ್ಲ ಜಾತಿಯವರು ಮತ ಹಾಕಿದ್ದಾರೆ: ಶಾಮನೂರಿಗೆ ಉಗ್ರಪ್ಪ ಪರೋಕ್ಷ ಟಾಂಗ್‌

 ಹಣ ನೀಡದೇ ಇದ್ರೇ ಯಾವುದೇ ಕೆಲಸ ಆಗೋದಿಲ್ಲವೆನ್ನುವ ನೇರ ಆರೋಪ

ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎನ್ನುವ ರೀತಿ  ಪ್ರತಿ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿರೋದೆ ಎನ್ನುವುದಕ್ಕೆ ಬಳ್ಳಾರಿ ಸಬ್ ರಿಜಿಸ್ಟೇಷನ್ ಕಚೇರಿ ಸಾಕ್ಷಿಯಾಗಿದೆ. ಅಲ್ಲದೇ ಭ್ರಷ್ಟಾಚಾರ ಮುಕ್ತ ಆಡಳಿತ ನೀಡೋ ಭರೆವಸೆ ಯೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಆದ್ರೇ, ಇಲ್ಲಿ ನೋಡಿದ್ರೇ, ಪ್ರತಿಯೊಂದು ಸರ್ಕಾರಿ ಕಚೇರಿಯಲ್ಲಿ ಹಣವಿಲ್ಲದೆ ಏನು ನಡೆಯೋದೇ ಇಲ್ಲ ಎನ್ನುವಂತಾಗಿದೆ

Follow Us:
Download App:
  • android
  • ios