ಕಾಂಗ್ರೆಸ್‌ಗೆ ಎಲ್ಲ ಜಾತಿಯವರು ಮತ ಹಾಕಿದ್ದಾರೆ: ಶಾಮನೂರಿಗೆ ಉಗ್ರಪ್ಪ ಪರೋಕ್ಷ ಟಾಂಗ್
ಶಾಮನೂರು ಶಿವಶಂಕರಪ್ಪ ಅವರು ಯಾವ ಆಧಾರದಲ್ಲಿ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಎಲ್ಲ ಜಾತಿಯ ಜನ ಮತ ನೀಡಿದ್ದಾರೆ. ರಾಜ್ಯದ 7 ಕೋಟಿ ಜನಸಂಖ್ಯೆಯಲ್ಲಿ ಶೇ.1ರಷ್ಟು ಮಾತ್ರ ಸರ್ಕಾರಿ ನೌಕರರು ಇದ್ದಾರೆ. ಇನ್ನುಳಿದವರು ಮತದಾರರು. ಹೀಗಾಗಿ ಮತದಾರರಿಗೆ ಆದ್ಯತೆ ನೀಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಹೇಳಿದ ವಿ.ಎಸ್. ಉಗ್ರಪ್ಪ
ಬಳ್ಳಾರಿ(ಅ.09): ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಎಲ್ಲ ಜಾತಿಯವರು ಮತ ಹಾಕಿದ್ದು, ಮತದಾರರಿಗೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ತಿಳಿಸಿದರು.
ರಾಜ್ಯದಲ್ಲಿ ಲಿಂಗಾಯಿತರ ಕಡೆಗಣನೆ ಕುರಿತ ಶಾಮನೂರು ಶೀವಶಂಕರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಶಾಮನೂರು ಶಿವಶಂಕರಪ್ಪ ಅವರು ಯಾವ ಆಧಾರದಲ್ಲಿ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಎಲ್ಲ ಜಾತಿಯ ಜನ ಮತ ನೀಡಿದ್ದಾರೆ. ರಾಜ್ಯದ 7 ಕೋಟಿ ಜನಸಂಖ್ಯೆಯಲ್ಲಿ ಶೇ.1ರಷ್ಟು ಮಾತ್ರ ಸರ್ಕಾರಿ ನೌಕರರು ಇದ್ದಾರೆ. ಇನ್ನುಳಿದವರು ಮತದಾರರು. ಹೀಗಾಗಿ ಮತದಾರರಿಗೆ ಆದ್ಯತೆ ನೀಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.
ಶಾಮನೂರು ಸತ್ಯವನ್ನೇ ಹೇಳಿದ್ದಾರೆ, ರಾಜ್ಯ ಸರ್ಕಾರ ಚಿಂತಿಸಲಿ: ಜೋಶಿ
ಸರ್ಕಾರಿ ನೌಕರರಾದವರು ಉದ್ಯೋಗ ಪಡೆದ ಬಳಿಕ ಜಾತಿಯನ್ನು ಮರೆಯುತ್ತಾರೆ. ಜಾತಿ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ವೈಯಕ್ತಿಕ ಹಿತಾಸಕ್ತಿ ಕಡೆ ಗಮನ ಹರಿಸುತ್ತಾರೆ ಎಂದು ಪರೋಕ್ಷವಾಗಿ ಶಾಮನೂರು ಶಿವಶಂಕರಪ್ಪ ಅವರಿಗೆ ಟಾಂಗ್ ನೀಡಿದರು.