ಬ್ರಾಹ್ಮಣ ಸಾವರ್ಕರ್ ಗೋಮಾಂಸ ಸೇವಿಸುತ್ತಿದ್ದರು: ವಿವಾದವೆಬ್ಬಿಸಿದ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ

ಬ್ರಾಹ್ಮಣ ಸಮಾಜದ ವೀರ ಸಾವರ್ಕರ್ ಅವರು ಮಾಂಸ ಸೇವಿಸುತ್ತಿದ್ದರು ಅಷ್ಟೇ ಅಲ್ಲ, ಅದನ್ನು ಅವರು ಬಹಿರಂಗವಾಗಿ ಸಮರ್ಥಿಸಿಕೊಳ್ಳುತ್ತಿದ್ದರು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

brahmin veera Savarkar eating nonveg health minister dinesh gundurao controversy states rav

ಬೆಂಗಳೂರು (ಅ.3) ಬ್ರಾಹ್ಮಣ ಸಮಾಜದ ವೀರ ಸಾವರ್ಕರ್ ಅವರು ಮಾಂಸ ಸೇವಿಸುತ್ತಿದ್ದರು ಅಷ್ಟೇ ಅಲ್ಲ, ಅದನ್ನು ಅವರು ಬಹಿರಂಗವಾಗಿ ಸಮರ್ಥಿಸಿಕೊಳ್ಳುತ್ತಿದ್ದರು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಗಾಂಧಿ ಜಯಂತಿ ಪ್ರಯುಕ್ತ ಜಾಗೃತ ಕರ್ನಾಟಕ ಮತ್ತು ಅಹರ್ನಿಶಿ ಪ್ರಕಾಶನ ಆಯೋಜಿಸಿದ್ದ 'ಗಾಂಧೀಜಿ ಹಂತಕ' ಕೃತಿ ಬಿಡುಗಡೆ ಸಮಾರಂಭರದಲ್ಲಿ ಭಾಗವಹಿಸಿದ ಮಾತನಾಡಿದ ಸಚಿವರು, ಸಾವರ್ಕರ್ ಒಂದು ರೀತಿಯಲ್ಲಿ ಮಾಡರ್ನಿಷ್ಟ್ ಆಗಿಯೂ ಕಾಣುತ್ತಾರೆ. ಆದರೆ ಮೂಲಭೂತವಾದಿಯಾಗಿದ್ದರು ಎಂಬುದರಲ್ಲಿ ಸಂಶಯವಿಲ್ಲ. ಮೂಲಭೂತವಾದ ನಮ್ಮ ಸಂಸ್ಕೃತಿಯಲ್ಲ. ಇದು ಯುರೋಪ್‌ನಿಂದ ಬಂದಿದ್ದಾಗಿದೆ ಎಂದರು.

'ದೇಶಕ್ಕೆ ತಂದೆ ಇರಲ್ಲ, ಮಕ್ಕಳಿರ್ತಾರೆ: ಗಾಂಧೀಜಿ ಬಗ್ಗೆ ಕಂಗನಾ ಮತ್ತೊಂದು ವಿವಾದ!

ಸಾವರ್ಕರ್ ಯೂರೋಪ್ ನಿಂದ ಸಾಕಷ್ಟು ಪ್ರಭಾವ ಹೊಂದಿದ್ದರು ಅದರಿಂದಾಗಿ ಅವರು  ಮೂಲಭೂತವಾದಿಯಾಗಿದ್ದಿರಬಹುದು. ಆದರೆ ಗಾಂಧೀಜಿಯವರು ಸಸ್ಯಹಾರಿ, ನಮ್ಮ ಸಂಸ್ಕೃತಿ, ಸಂಪ್ರದಾಯಗಳ ಮೇಲೆ ಗಾಂಧೀಜಿಯವರಿಗೆ ಅಪಾರವಾದ ನಂಬಿಕೆ ಇತ್ತು. ಸಾವರ್ಕರ್ ಗೋ ಹತ್ಯೆಯ ವಿರೋಧಿ ಅಲ್ಲ ಒಂದು ಕಡೆ ಅವ್ರು ಗೋ ಮಾಂಸ ಕೂಡ ತಿನ್ನುತ್ತಿದ್ದರು ಎಂದು ಸಹ ಹೇಳುತ್ತಾರೆ ಎಂದರು.

Latest Videos
Follow Us:
Download App:
  • android
  • ios