'ದೇಶಕ್ಕೆ ತಂದೆ ಇರಲ್ಲ, ಮಕ್ಕಳಿರ್ತಾರೆ: ಗಾಂಧೀಜಿ ಬಗ್ಗೆ ಕಂಗನಾ ಮತ್ತೊಂದು ವಿವಾದ!
ಇತ್ತೀಚೆಗಷ್ಟೇ ರೈತ ಕಾಯ್ದೆ ಕುರಿತ ಹೇಳಿಕೆ ನೀಡಿ ಕ್ಷಮೆ ಯಾಚಿಸಿದ್ದ ನಟಿ, ಬಿಜೆಪಿ ಸಂಸದೆ ಕಂಗನಾ ರಾಣಾವತ್ ಮತ್ತೊಂದು ವಿವಾದದಲ್ಲಿ ಸಿಕ್ಕಿಬಿದ್ದಿದ್ದಾರೆ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಕುರಿತು ಅವರು ನೀಡಿದ ಪರೋಕ್ಷ ಹೇಳಿಕೆಯೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ.
ನವದೆಹಲಿ (ಅ.3) : ಇತ್ತೀಚೆಗಷ್ಟೇ ರೈತ ಕಾಯ್ದೆ ಕುರಿತ ಹೇಳಿಕೆ ನೀಡಿ ಕ್ಷಮೆ ಯಾಚಿಸಿದ್ದ ನಟಿ, ಬಿಜೆಪಿ ಸಂಸದೆ ಕಂಗನಾ ರಾಣಾವತ್ ಮತ್ತೊಂದು ವಿವಾದದಲ್ಲಿ ಸಿಕ್ಕಿಬಿದ್ದಿದ್ದಾರೆ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಕುರಿತು ಅವರು ನೀಡಿದ ಪರೋಕ್ಷ ಹೇಳಿಕೆಯೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಭಾನುವಾರ ಮಹಾತ್ಮಾ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮದಿನವಿತ್ತು. ಈ ಹಿನ್ನೆಲೆಯಲ್ಲಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟೊಂದನ್ನು ಹಾಕಿರುವ ಕಂಗನಾ, ‘ದೇಶಕ್ಕೆ ತಂದೆ (ರಾಷ್ಟ್ರಪಿತ) ಇರಲ್ಲ, ಅದರೆ ಮಕ್ಕಳು (ಲಾಲ್) ಇರುತ್ತಾರೆ. ಭಾರತ ಮಾತೆಯ ಈ ಮಕ್ಕಳಿಗೆ ಧನ್ಯವಾದ’ ಎಂದು ಬರೆದಿದ್ದಾರೆ.
ಅವರ ಈ ಹೇಳಿಕೆ ಗಾಂಧೀಜಿ ಅವರಿಗೆ ನೀಡಲಾಗಿರುವ ರಾಷ್ಟ್ರಪಿತ ಗೌರವವನ್ನು ಕಡೆಗಣಿಸುವ ರೀತಿಯದ್ದು ಎಂಬ ವಿಶ್ಲೇಷಣೆಗೆ ಕಾರಣವಾಗಿದೆ. ಬಿಜೆಪಿ ಸಂಸದೆ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಇನ್ನೊಂದೆಡೆ ಪಂಜಾಬ್‌ನ ಬಿಜೆಪಿ ನಾಯಕ ಮನೋರಂಜನ್ ಕಾಲಿಯಾ ಕೂಡಾ ಕಂಗನಾ ಹೇಳಿಕೆ ಟೀಕಿಸಿದ್ದಾರೆ.
ಹರಿಯಾಣ ಚುನಾವಣೆ ಹೊತ್ತಲ್ಲಿ ಬಿಜೆಪಿಗೆ ತಲೆನೋವಾದ ಕಂಗನಾ!
ಬಾಲಿವುಡ್‌ನಿಂದ ರಾಜಕೀಯಕ್ಕೆ ಪಾದಾರ್ಪಣೆ ಮಾಡಿರುವ ಸಂಸದೆ ಕಂಗನಾ ರಣಾವತ್ ಅವರ ಸಿನಿಮಾ ಮತ್ತು ರಾಜಕೀಯ ಹೇಳಿಕೆಗಳು ದೇಶಾದ್ಯಂತ ಸುದ್ದಿ ಮಾಡುತ್ತಿವೆ. ಗೆದ್ದು ಸಂಸದೆಯಾದ ನಂತರ ಅವರು ಕ್ಷೇತ್ರದ ಅಭಿವೃದ್ಧಿ, ಬಿಜೆಪಿಯನ್ನು ಬಲಪಡಿಸುವ ಬಗ್ಗೆ ಮಾತನಾಡುವ ಬದಲು ಪಕ್ಷಕ್ಕೆ ಸಂಕಷ್ಟ ತಂದೊಡ್ಡುತ್ತಿದ್ದಾರೆ. ಕಂಗನಾ ಅವರ ಹೇಳಿಕೆಗಳಿಂದ ಬಿಜೆಪಿ ಪದೇ ಪದೇ ಮುಜುಗರಕ್ಕೀಡಾಗುತ್ತಿದೆ. ಈ ಹಿಂದೆ ರೈತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದರು. ಬಿಜೆಪಿ ವರಿಷ್ಠರು ಎಚ್ಚರಿಕೆ ನೀಡಿದ್ದರು. ಎಚ್ಚರಿಕೆಯ ಹೊರತಾಗಿಯೂ, ಅವರು ಮತ್ತೆ ರೈತರ ಮಸೂದೆಯ ಕುರಿತು ಹೇಳಿಕೆ ನೀಡುವ ಮೂಲಕ ವಿರೋಧ ಪಕ್ಷಗಳ ಆಕ್ರೋಶಕ್ಕೆ ಗುರಿಯಾಗಿದ್ರು
32 ಕೋಟಿ ರೂಗೆ ಬಂಗಲೆ ಮಾರಿ 3 ಕೋಟಿ ರೂ ರೇಂಜ್ ರೋವರ್ ಖರೀದಿಸಿದ ಕಂಗನಾ!
2020 ರಲ್ಲಿ ರೈತರ ಆಂದೋಲನದ ನಂತರ ಹಿಂತೆಗೆದುಕೊಂಡ 3 ಕೃಷಿ ಕಾನೂನುಗಳನ್ನು ಮತ್ತೆ ಜಾರಿಗೆ ತರುವುದಾಗಿ ಹೇಳುವ ಮೂಲಕ ಎನ್‌ಡಿಎ ಸರ್ಕಾರವನ್ನು ಮತ್ತೆ ಸಂಕಷ್ಟಕ್ಕೆ ಸಿಲುಕಿಸಿದ್ರು. ಹೈಕಮಾಂಡ್ ಎಚ್ಚರಿಕೆ ಬಳಿಕ ಕ್ಷಮೆ ಕೇಳಿದ್ದ ಕಂಗನಾ ಇನ್ಮೇಲೆ ಸುಧಾರಿಸಿಕೊಳ್ತಾರೆ ವಿವಾದಾತ್ಮಕ ಹೇಳಿಕೆ ನೀಡಲಿಕ್ಕಿಲ್ಲ ಎಂದೇ ಭಾವಿಸಲಾಗಿತ್ತು. ಇದೀಗ ಮಹಾತ್ಮ ಗಾಂಧಿ ಕುರಿತು ಅವರ ಹೇಳಿಕೆ ಬಿಜೆಪಿಯವರಿಗೆ ಉಡಿಯಲ್ಲಿ ಕೆಂಡ ಕಟ್ಟಿಕೊಂಡಂತಾಗಿದೆ.