* ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ಮೇಲೆ ಕಣ್ಗಾವಲಿಡಲು ಮುಂದಾದ ಸಿಎಂ* ಇಲಾಖೆಗಳ ಮೇಲೆ ಕಣ್ಗಾವಲಿಡಲು ಡ್ಯಾಶ್​ ಬೋರ್ಡ್​ಗೆ ಚಾಲನೆ * ಇಲಾಖೆಗಳ ಕೆಲಸದ ಮೇಲೆ ಕುಳಿತಲ್ಲೇ ಡ್ಯಾಶ್​ಬೋರ್ಡ್​ ಮೂಲಕ ಮಾಹಿತಿ

ಬೆಂಗಳೂರು, (ಅ.05): ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಪ್ರಗತಿಯಲ್ಲಿರುವ ಯೋಜನೆಗಳು ಅವುಗಳ ಸ್ಥಿತಿಗತಿಗಳ ಕುರಿತು ನೇರವಾಗಿ ಮಾಹಿತಿ ಪಡೆಯಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಾಗಿದ್ದಾರೆ.

ಇದಕ್ಕಾಗಿಯೇ ಸಮಗ್ರ ಮಾಹಿತಿಯುಳ್ಳ ಸಿಎಂ ಡ್ಯಾಶ್ ಬೋರ್ಡ್​ಗೆ (Dashboard) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai)ಇಂದು (ಅ.05) ಚಾಲನೆ ನೀಡಿದರು. 

ರಾಜ್ಯ ಕ್ಯಾಬಿನೆಟ್​ ಸಭೆಯಲ್ಲಿ ತೆಗೆದುಕೊಳ್ಳಲಾದ ಪ್ರಮುಖ ನಿರ್ಣಯಗಳು

ಜನರಿಗೆ ಹತ್ತಿರವಾಗಿರುವ 10 ಇಲಾಖೆಗಳ ಮೇಲೆ ಸಿಎಂ ಕಣ್ಣಿಡಲಿದ್ದು, ಪ್ರತಿಯೊಂದು ಕಾಮಗಾರಿ, ಕೆಲಸದ ಮೇಲೆ ಕುಳಿತಲ್ಲೇ ಡ್ಯಾಶ್​ಬೋರ್ಡ್​ ಮೂಲಕ ಮಾಹಿತಿ ಪಡೆಯಲಿದ್ದಾರೆ. 

Scroll to load tweet…

ಅಧಿಕಾರಿಗಳ ಕಾರ್ಯವೈಖರಿ ಮೇಲೆ ಕಣ್ಣಿಡಲು ಇದು ಸಹಕಾರಿಯಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಸಿಎಂ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್ ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.