* ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು (ಅ.04) ವಿಧಾನಸೌಧದಲ್ಲಿ ಕ್ಯಾಬಿನೆಟ್​ ಸಭೆ* ರಾಜ್ಯ ಕ್ಯಾಬಿನೆಟ್​ ಸಭೆಯಲ್ಲಿ ತೆಗೆದುಕೊಳ್ಳಲಾದ ಪ್ರಮುಖ ನಿರ್ಣಯಗಳು* ರಾಜ್ಯ ಪೊಲೀಸ್ ನೇಮಕಾತಿಯಲ್ಲಿ ತಿದ್ದುಪಡಿ, ಬಡ್ತಿ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ

ಬೆಂಗಳೂರು, (ಅ.05):  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು (ಅ.04) ವಿಧಾನಸೌಧದಲ್ಲಿ ಸಂಪುಟ​ ಸಭೆ (Cabinet Meeting) ನಡೆಯಿತು.ಈ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಸಭೆಯಲ್ಲಿ ಚರ್ಚಿಸಲಾದ ಮತ್ತು ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಣಯಗಳನ್ನು ಸಂಸದೀಯ ವ್ಯವಹಾರಗಳ ಸಚಿವ ಜಿ.ಸಿ.ಮಾಧುಸ್ವಾಮಿ (JC Madhuswamy) ಮಾಧ್ಯಮಗಳ ಮುಂದೆ ವಿವರಿಸಿದ್ದು, ರಾಜ್ಯ ಪೊಲೀಸ್ ನೇಮಕಾತಿ‌ ತಿದ್ದುಪಡಿಗೆ ಅನುಮತಿ ನೀಡಲಾಗಿದ್ದು ಭಡ್ತಿ ಪಡೆಯಲು ನಿಗದಿಪಡಿಸಲಾಗಿದ್ದ 5 ವರ್ಷಗಳನ್ನು 4 ವರ್ಷಗಳಿಗೆ ಇಳಿಸಲಾಗಿದೆ ಎಂದರು.

ಒಂದು ನಾನಿರ್ಬೇಕು, ಇಲ್ಲ ನೀವಿರ್ಬೇಕು: ಸಿಎಂ ಬೊಮ್ಮಾಯಿಗೆ ವಾಲ್ಮೀಕಿ ಶ್ರೀ ಎಚ್ಚರಿಕೆ

ಮಂಡ್ಯ ಶುಗರ್ ಕಾರ್ಖಾನೆ ಪ್ರಾರಂಭದ ಚರ್ಚೆ ಕುರಿತು ಕಾರ್ಖಾನೆಯನ್ನು ಸರ್ಕಾರವೇ ನಡೆಸಬೇಕಾ.?ಖಾಸಗಿಯವರಿಗೆ ನೀಡಬೇಕಾ.?ಎಂಬ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆಯಾಗಿದ್ದು ಕ್ಯಾಬಿನೆಟ್ ಸಬ್ ಕಮಿಟಿ ರಚನೆ ಮಾಡಿದೆ ಸಚಿವ ನಾರಾಯಣಗೌಡ, ಗೋವಿಂದ್​ ಕಾರಜೋಳ, ಆರ್​.ಅಶೋಕ್, ಶಂಕರಗೌಡ ಮುನೇನಕೊಪ್ಪ ಈ ಕಮೀಟಿಯ ನೇತೃತ್ವ ವಹಿಸಿಕೊಳ್ಳುವರು ಎಂದು ಸಚಿವ ಮಾಹಿತಿ ನೀಡಿದ್ದಾರೆ.

ಕ್ಯಾಬಿನೆಟ್​ ಸಭೆಯಲ್ಲಿ ತೆಗೆದುಕೊಳ್ಳಲಾದ ಪ್ರಮುಖ ನಿರ್ಣಯಗಳು

* ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ ಲ್ಯಾಂಡ್ ಯೋಜನೆ 1500 ಕೋಟಿ 300‌ ಕೋಟಿಯಲ್ಲಿ ಸಿಹಿ ನೀರು ಸಂಗ್ರಹಕ್ಕೆ ಕಾರ್ ಲ್ಯಾಂಡ್ ಯೋಜನೆಗೆ ಅನುಮೋದನೆ

* ಉಡುಪಿ ಜಿಲ್ಲೆಯ ಹೊಸ ಹೆಬ್ರಿ ತಾಲೂಕಿನಲ್ಲಿ ಹೊಸ ಹೊಬಳಿ ನಿರ್ಮಾಣ ಮಾಡಲು ಸಂಪುಟ ಒಪ್ಪಿಗೆ.

* ಸಂದ್ಯಾ ಸುರಕ್ಷ ಯೋಜನೆಯಡಿ ವೃದ್ಧಾಪ್ಯ ವೇತನವನ್ನು 600 ರೂನಿಂದ 800 ಮತ್ತು 1000 ರೂನಿಂದ 1200 ರೂಗೆ ಹೆಚ್ಚಳ

* ಶುಚಿ ಸಂಭ್ರಮ ಕಿಟ್ ಖರೀದಿಗೆ ಒಪ್ಪಿಗೆ
* ಕರ್ನಾಟಕ ರಾಜ್ಯ ಮತ್ತು ಕೃಷಿ ಅಭಿವೃದ್ಧಿ ಬಾಂಕ್​ಗಳ ಪುನಶ್ಚೇತನಕ್ಕೆ ನಬಾರ್ಡ್​ನಿಂದ ಸಾಲ ಪಡೆಯಲು ಸಂಪುಟ ಅನುಮತಿ ನೀಡಿದ್ದು 1550 ಕೋಟಿ ಹಣವನ್ನು ಒದಗಿಸಲಾಗುವುದು.

* ರಾಜ್ಯ ಪೊಲೀಸ್ ನೇಮಕಾತಿ‌ ತಿದ್ದುಪಡಿಗೆ ಅನುಮತಿ ನೀಡಲಾಗಿದ್ದು ಭಡ್ತಿ ಪಡೆಯಲು ನಿಗದಿಪಡಿಸಲಾಗಿದ್ದ 5 ವರ್ಷಗಳನ್ನು 4 ವರ್ಷಗಳಿಗೆ ಇಳಿಕೆ.

* ಹಿಪ್ಪರಗಿ ತಿರುವು ಬ್ಯಾರೇಜ್ ತಡೆಗೋಡೆ ನಿರ್ಮಾಣ ಸಂಬಂಧಿಸಿ ತಡೆಗೋಡೆ ನಿರ್ಮಾಣಕ್ಕೆ 28 ಕೋಟಿ ನೀಡಲು ಸಮ್ಮತಿ.