Asianet Suvarna News Asianet Suvarna News

ಮೂರೇ ದಿನಕ್ಕೆ ಕೆಟ್ಟು ನಿಂತ ಎಲೆಕ್ಟ್ರಿಕ್‌ ಬಸ್‌!

ಪರಿಸರ ಮಾಲಿನ್ಯ ತಡೆಯುವುದು ಮತ್ತು ಡೀಸೆಲ್‌ ಬಳಕೆ ಕಡಿಮೆ ಮಾಡುವ ಸಲುವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನೂತನವಾಗಿ ಪರಿಚಯಿಸಿರುವ ಎಲೆಕ್ಟ್ರಿಕ್‌ ಬಸ್‌ಗಳು ಉದ್ಘಾಟನೆಗೊಂಡ ಕೆಲ ದಿನಗಳಲ್ಲಿಯೇ ಮಾರ್ಗ ಮಧ್ಯದಲ್ಲಿಯೇ ಕೆಟ್ಟು ನಿಲ್ಲುತ್ತಿವೆ.

BMTC The electric bus that broke down for three days! rav
Author
Bengaluru, First Published Aug 17, 2022, 5:18 AM IST

(ಬೆಂಗಳೂರು ಆ.17)  ಪರಿಸರ ಮಾಲಿನ್ಯ ತಡೆಯುವುದು ಮತ್ತು ಡೀಸೆಲ್‌ ಬಳಕೆ ಕಡಿಮೆ ಮಾಡುವ ಸಲುವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನೂತನವಾಗಿ ಪರಿಚಯಿಸಿರುವ ಎಲೆಕ್ಟ್ರಿಕ್‌ ಬಸ್‌ಗಳು ಉದ್ಘಾಟನೆಗೊಂಡ ಕೆಲ ದಿನಗಳಲ್ಲಿಯೇ ಮಾರ್ಗ ಮಧ್ಯದಲ್ಲಿಯೇ ಕೆಟ್ಟು ನಿಲ್ಲುತ್ತಿವೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ಮತ್ತು ಬಿಎಂಟಿಸಿ(BMTC) ರಜತ ಮಹೋತ್ಸವದ ಅಂಗವಾಗಿ 75 ಇ-ಬಸ್‌(E-bus)ಗಳನ್ನು ಆ.14ರಂದು ನಿಗಮ ರಸ್ತೆಗಿಳಿಸಿತ್ತು. ಈ ಬಸ್‌ಗಳನ್ನು ವಿಧಾನಸೌಧ ಭವ್ಯ ಮೆಟ್ಟಿಲುಗಳ ಮುಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಚಾಲನೆ ನೀಡಿದ್ದರು. ಆದರೆ, ಉದ್ಘಾಟನೆಗೊಂಡ ಮೂರೇ ದಿನದಲ್ಲಿ ರಸ್ತೆಗಳಲ್ಲಿ ಬಸ್‌ಗಳು ಕೆಟ್ಟು ನಿಲ್ಲುತ್ತಿವೆ.

ಆ.15ರಂದು ಮತ್ತೆ 75ಎಲೆಕ್ಟ್ರಿಕ್‌ ಬಸ್‌ಗಳು ರಸ್ತೆಗೆ, ಯಲಹಂಕದಿಂದ ಆರಂಭ

ಮಂಗಳವಾರ ಬೆಳಗ್ಗೆ ಯಲಹಂಕ ಕಡೆಯಿಂದ ಬೆಂಗಳೂರಿಗೆ ಆಗಮಿಸುವ ಎರಡು ಬಸ್‌ಗಳು ಹೆಬ್ಬಾಳದ ಎಸ್ಟೀಮ್‌ ಮಾಲ್‌ ಮುಂದೆ ಕೆಟ್ಟು ನಿಂತಿದ್ದವು. ಹೊಸ ವಾಹನಗಳು ಎಂದು ಹುಮ್ಮಸ್ಸಿನಿಂದ ಬಸ್‌ಗೆ ಹತ್ತಿದ್ದ ಪ್ರಯಾಣಿಕರಿಗೆ ನಿರಾಸೆಯುಂಟು ಮಾಡಿತ್ತು. ಬಳಿಕ ಆ ಬಸ್‌ನಿಂದ ಇಳಿದು ಸಾಮಾನ್ಯ ಬಸ್‌ಗಳಲ್ಲಿ ಪ್ರಯಾಣಿಸುವಂತಾಗಿತ್ತು.

ಬೆಳಗ್ಗೆ 8ಕ್ಕೆ ಯಲಹಂಕ ಕಡೆಯಿಂದ ಬಂದಿದ್ದ ಸ್ವಚ್‌ ಮೊಬಿಲಿಟಿ ಕಂಪನಿಯ ಬಸ್‌ ಎಸ್ಟೀಮ್‌ ಮಾಲ್‌ ಬಳಿಗೆ ಬರುತ್ತಿದ್ದಂತೆ ಎಂಜಿನ್‌ ಸ್ಥಗಿತಗೊಂಡಿದೆ. ಮತ್ತೆ ಬಸ್ಸನ್ನು ಚಾಲು ಮಾಡುವುದಕ್ಕೆ ಸಾಕಷ್ಟುಬಾರಿ ಪ್ರಯತ್ನ ಪಡುತ್ತಿದ್ದೇವೆ. ಆದರೆ, ಸಾಧ್ಯವಾಗುತ್ತಿಲ್ಲ. ಪ್ರಯಾಣಿಕರು ಕಚೇರಿಗಳಿಗೆ ಹೋಗಬೇಕು ಎಂದು ಪಟ್ಟು ಹಿಡಿಯುತ್ತಿದ್ದಾರೆ. ಆದ್ದರಿಂದ ಬೇರೊಂದು ಬಸ್‌ಗೆ ಹತ್ತಿ ಸುತ್ತಿರುವುದಾಗಿ ಬಸ್‌ನ ನಿರ್ವಾಹಕ ವಿವರಿಸಿದರು.

ಅಲ್ಲದೆ, ಮಧ್ಯಾಹ್ನ 4ರ ವೇಳೆಗೆ ಅದೇ ಸ್ಥಳದಲ್ಲಿ ಮತ್ತೊಂದು ಬಸ್ಸನ್ನು ಮೂರು ಮಂದಿ ಮೆಕ್ಯಾನಿಕ್‌ಗಳು ರಿಪೇರಿ ಮಾಡುತ್ತಿದ್ದರು. ಹೊಸ ಬಸ್‌ ಯಾವ ಕಾರಣಕ್ಕಾಗಿ ನಿಂತಿದೆ ಎಂದು ಪ್ರಶ್ನಿಸಿದರೆ, ಸ್ವಿಚ್‌ ಮೊಬಲಿಟಿ ಬಸ್‌ಗಳು ಬೆಂಗಳೂರು ರಸ್ತೆಗಳಲ್ಲಿ ಗುಂಡಿಗಳಿರುವುದರಿಂದ ಸಮಸ್ಯೆ ಕಾಣಿಸುತ್ತದೆ. ಇದರಿಂದ ಸ್ವಲ್ಪ ವೇಗವಾಗಿ ಬಂದ ಬಳಿಕ ಚಕ್ರಗಳು ಬ್ಲಾಕ್‌ ಆಗಲಿವೆ. ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು ಎಂದು ಹೇಳಿದರು.

Bengaluru ತಳ್ಳೋಗಾಡಿಯಾದ ಬಿಎಂಟಿಸಿ ಬಸ್, ಟ್ರಾಫಿಕ್ ಜಾಮ್ ..!

ಪ್ರಾರಂಭಲ್ಲಿ ಗೊಂದಲ: ಹೊಸ ತಂತ್ರಜ್ಞಾನವನ್ನು ಪರಿಚಯಿಸುವ ಪ್ರಾರಂಭದಲ್ಲಿ ಸಣ್ಣ ಪುಟ್ಟಗೊಂದಲಗಳುಂಟಾಗುವುದು ಸಾಮಾನ್ಯ. ಆದನ್ನು ಸರಿಪಡಿಸಿಕೊಂಡು ಹೋಗಬೇಕು. ಹಲವು ವರ್ಷಗಳಿಂದ ಡೀಸೆಲ್‌ ಬಸ್‌ಗಳು ಸಂಚರಿಸುತ್ತಿವೆ. ಆದರೂ, ಕೆಲ ಸಂದರ್ಭಗಳಲ್ಲಿ ರಿಪೇರಿ ಆಗುತ್ತವೆ. ಆದೇ ರೀತಿ ಈ ಬಸ್‌ಗಳು ಸಹಾ ರಿಪೇರಿ ಆಗುತ್ತವೆ. ಇದನ್ನು ಧನಾತ್ಮಕವಾಗಿ ಪರಿಗಣಿಸಬೇಕು. ಸಣ್ಣ ಗೊಂದಲ ಉಂಟಾದ ತಕ್ಷಣ ಇಡೀ ತಂತ್ರಜ್ಞಾನವೇ ಸರಿಯಿಲ್ಲ ಎಂದು ತೀರ್ಮಾನಿಸಬಾರದು ಎಂದು ಬಸ್‌ನ ನಿರ್ವಾಹಕ ಹೇಳಿದರು.

Follow Us:
Download App:
  • android
  • ios