ಆ.15ರಂದು ಮತ್ತೆ 75ಎಲೆಕ್ಟ್ರಿಕ್‌ ಬಸ್‌ಗಳು ರಸ್ತೆಗೆ, ಯಲಹಂಕದಿಂದ ಆರಂಭ

 ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಆಗಸ್ಟ್‌ 15 ರಂದು ಮತ್ತೆ 75 ಹವಾನಿಯಂತ್ರಣ ರಹಿತ ವಿದ್ಯುತ್‌ ಬಸ್‌ಗಳನ್ನು ಸಾರ್ವಜನಿಕರ ಸೇವೆಗೆ ನೀಡಲು ಬಿಎಂಟಿಸಿ ನಿರ್ಧರಿಸಿದೆ.

BMTC  start 75 electric buses from Yelahanka gow

ಬೆಂಗಳೂರು (ಆ.8): ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಆಗಸ್ಟ್‌ 15 ರಂದು ಮತ್ತೆ 75 ಹವಾನಿಯಂತ್ರಣ ರಹಿತ ವಿದ್ಯುತ್‌ ಬಸ್‌ಗಳನ್ನು ಸಾರ್ವಜನಿಕರ ಸೇವೆಗೆ ನೀಡಲು ಬಿಎಂಟಿಸಿ ನಿರ್ಧರಿಸಿದೆ. ಅಶೋಕಾ ಲೇಲ್ಯಾಂಡ್‌ ಕಂಪೆನಿಯ 41 ಆಸನಗಳುಳ್ಳ ಇ- ಬಸ್‌ಗಳಿಗೆ ಆಗಸ್ಟ್‌ 15ರಂದು ಚಾಲನೆ ನೀಡಲಾಗುವುದು. ಈ ಬಸ್‌ಗಳು ಬೆಂಗಳೂರು ನಗರದ ಹೊರ ವಲಯದ ರಸ್ತೆಗಳಲ್ಲಿ ಕಾರ್ಯಚರಣೆ ಮಾಡಲಿವೆ. ಮೊದಲ ಹಂತದಲ್ಲಿ ಯಲಹಂಕದ 30ನೇ ಡಿಪೋದಿಂದ ಬಸ್‌ ಸೇವೆ ಆರಂಭವಾಗಲಿದೆ. ಈಗಾಗಲೇ ಎಲೆಕ್ಟ್ರಿಕ್‌ ಬಸ್‌ಗಳಿಗೆ ಚಾರ್ಜಿಂಗ್‌ ಘಟಕವನ್ನು ಪ್ರಾರಂಭಿಸಲಾಗಿದೆ. ಇನ್ನುಳಿದ ಬಸ್‌ಗಳ ನಿರ್ವಹಣೆಗೆ ಬಿಡದಿ ಮತ್ತು ಅತ್ತಿಬೆಲೆ ಡಿಪೋಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಪ್ರಸ್ತುತ ರಸ್ತೆಗಿಳಿಯಲಿರುವ ಬಸ್‌ಗಳು ಯಲಹಂಕದಿಂದ ಶಿವಾಜಿನಗರ, ಕೆಂಗೇರಿ, ಕೆಂಪೇಗೌಡ ಬಸ್‌ನಿಲ್ದಾಣ, ದೇವನಹಳ್ಳಿ ದೊಡ್ಡಬಳ್ಳಾಪುರ ಮಾರ್ಗಗಳಲ್ಲಿ ಕಾರ್ಯಚರಣೆ ಮಾಡಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫೇಮ್‌-2 ಯೋಜನೆಯಡಿಯಲ್ಲಿ ಬರುತ್ತಿರುವ 300 ಎಲೆಕ್ಟ್ರಿಕ್‌ ಬಸ್‌ಗಳನ್ನು ಪಡೆದುಕೊಳ್ಳಲು ಬಿಎಂಟಿಸಿ 2021ರ ಸೆಪ್ಟಂಬರ್‌ನಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಪ್ರತಿ ಕಿಲೋಮೀಟರ್‌ಗೆ 48.9 ರು.ಗಳಂತೆ ಬಿಎಂಟಿಸಿ ಪಾವತಿ ಮಾಡಬೇಕಾಗಿದೆ. ಆದರೆ, ಬಸ್‌ನ ನಿರ್ವಹಣೆ, ಚಾರ್ಜಿಂಗ್‌ ಹಾಗೂ ಚಾಲಕರನ್ನು ಅಶೋಕಾ ಲೇಲ್ಯಾಂಡ್‌ ಸಂಸ್ಥೆಯೇ ಒದಗಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆದರೆ, ಈ ಬಸ್‌ಗಳು ಪ್ರತಿ ದಿನ 225 ಕಿಲೋಮೀಟರ್‌ ಕನಿಷ್ಟಪ್ರಯಾಣಿಸಿದರೆ ಮಾತ್ರ ಪ್ರತಿ ಕಿಲೋಮೀಟರ್‌ಗೆ 48 ರು.ಗಳಂತೆ ನೀಡಲಾಗುವುದು. ನಿಗದಿತ ಪ್ರಮಾಣಕ್ಕಿಂತ ಕಡಿಮೆ ದೂರ ಕ್ರಮಿಸಿದಲ್ಲಿ ಅಷ್ಟಕ್ಕೆ ಮಾತ್ರ ಹಣ ಸಂದಾಯ ಮಾಡುವಂತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅಷ್ಟೇ ಅಲ್ಲ ಈ ನಿಯಮದಂತೆ ಬಸ್‌ಗಳು ಕಾರ್ಯಚರಣೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ.

 ಹೆಚ್ಚುವರಿ ಸಿಟಿ ಬಸ್‌ ಓಡಿಸುವಂತೆ ಮನವಿ: ವಿಜಯನಗರ 4ನೇ ಹಂತ ಹಾಗೂ ಆರ್‌ಎಂಪಿ ಬಸ್‌ ತಂಗುದಾಣಕ್ಕೆ ಹೆಚ್ಚುವರಿ ಸಿಟಿ ಬಸ್‌ ಓಡಿಸುವಂತೆ ಮನವಿ ಮಾಡಿದ್ದು, ಬೆಳಗ್ಗೆ 6.45 ಚಾಮುಂಡಿ ಎಕ್ಸ್‌ಪ್ರೆಸ್‌ಗೆ ಸಾಕಷ್ಟುಜನ ಈ ಬಡಾವಣೆಯಿಂದ ಹೋಗುತ್ತಾರೆ. ನಂತರದಲ್ಲಿ ಹೊರಡುವ ರೈಲಿಗೆ ಹೋಗುವವರಿರುತ್ತಾರೆ. ಬೇರೆ ಬೇರೆ ತಾಲೂಕುಗಳಿಗೆ ಹೋಗುವ ಶಿಕ್ಷಕರು, ಕಚೇರಿ ಸಿಬ್ಬಂದಿ ಬೆಳಗ್ಗೆ ಬೇಗನೆ ಮನೆ ಬಿಡಬೇಕಾಗುತ್ತದೆ.

Bengaluru ತಳ್ಳೋಗಾಡಿಯಾದ ಬಿಎಂಟಿಸಿ ಬಸ್, ಟ್ರಾಫಿಕ್ ಜಾಮ್ ..!

ಶಾಲಾ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಕಾರ್ಖಾನೆಗಳಿಗೆ ಹೋಗುವ ನೌಕರರ ಇರುವುದರಿಂದ ಅಲ್ಲದೆ ವಿಜಯನಗರ ಬಡಾವಣೆ ಜನಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆ ಈಗ ಓಡುತ್ತಿರುವ ಬಸ್‌ಗಳ ಜೊತೆಗೆ ಹೆಚ್ಚುವರಿ ಬಸ್‌ಗಳನ್ನು ಬಿಡಬೇಕು, ಅಲ್ಲದೆ ವಿಜಯನಗರ 4ನೇ ಹಂತಕ್ಕೆ ಬರುವ ಬಸ್‌ಗಳಿಗೆ ಬೋರ್ಡ್‌ ವಿಜಯನಗರ 4ನೇ ಹಂತ ಎಂಬುದಾಗಿ ಫಲಕ ನಮೂದಿಸಬೇಕು.

ಉತ್ತರಕನ್ನಡ: ಬಸ್‌ಗಾಗಿ ವಿದ್ಯಾರ್ಥಿಗಳ ಬೇಡಿಕೆ, ಕ್ಯಾರೇ ಅನ್ನದ ಅಧಿಕಾರಿಗಳು

ವಿಜಯನಗರ 4ನೇ ಹಂತ ಆರ್‌ಎಂಪಿ ಲೇಔಟ್‌ವರೆಗೂ ವಿಸ್ತರಿಸಿದ್ದು, ಆರ್‌ಎಂಪಿ ಲೇಔಟ್‌ ಬಸ್‌ ತಂಗುದಾಣದಿಂದ ವಿಜಯನಗರ ನೇ ಹಂತ ಆ ಭಾಗದ ನಿವಾಸಿಗಳು ಸಂಕಲ್ಪ ಅಪಾರ್ಚ್‌ಮೆಂಟ್‌ ನಿವಾಸಿಗಳು, ಆರ್‌ಎಂಪಿ ನಿವಾಸಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಕೂಲಿ ಕಾರ್ಮಿಕರು ಬಹಳಷ್ಟುಜನರು ಗುಪೇ ಇಲ್ಲಿರುತ್ತದೆ. ಆದರೆ ಇಲ್ಲಿ ಬಸ್‌ ವ್ಯವಸ್ಥೆಯೇ ಇಲ್ಲ. ಆರ್‌ಎಂಪಿ ಲೇಔಟ್‌ ಬಸ್‌ ತಂಗುದಾಣಕ್ಕೂ ಅಗತ್ಯ ಬಸ್‌ಗಳ ವ್ಯವಸ್ಥೆ ಮಾಡಬೇಕಾಗಿ ಮನವಿ.

- ಬಿ.ಜಿ. ರಂಗೇಗೌಡ, ವಿಜಯನಗರ 4ನೇ ಹಂತ, ಮೈಸೂರು.

Latest Videos
Follow Us:
Download App:
  • android
  • ios