ಬೆಂಗಳೂರು(ಸೆ.30): ಕೊರೋನಾ ಹಿನ್ನೆಲೆಯಲ್ಲಿ ಪ್ರಯಾಣಿಕರ ಕೊರತೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬಿಎಂಟಿಸಿಯು ಇದೀಗ ಖರ್ಚು-ವೆಚ್ಚಗಳಿಗೆ ಕತ್ತರಿ ಹಾಕಿ ಮಿತವ್ಯಯಕ್ಕೆ ಮುಂದಾಗಿದೆ.

ನಿಗಮದಿಂದ ಭದ್ರತಾ ವಿಭಾಗ, ವಿಭಾಗ ನಿಯಂತ್ರಣಾಧಿಕಾರಿ, ಉಗ್ರಾಣ ವಿಭಾಗ, ತಾಂತ್ರಿಕ ವಿಭಾಗ, ಸಂಚಾರ, ಆಡಳಿತ, ಸಾರ್ವಜನಿಕ ಸಂಪರ್ಕ ವಿಭಾಗ, ಕೇಂದ್ರೀಯ ಕಾರ್ಯಾಗಾರ, ಲೆಕ್ಕಪತ್ರ ವಿಭಾಗಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನೀಡಲಾಗಿದ್ದ 31 ಮೊಬೈಲ್‌ ಸಿಮ್‌ ಕಾರ್ಡ್‌ಗಳನ್ನು ಶಾಶ್ವತವಾಗಿ ರದ್ದುಗೊಳಿಸಿ ಆದೇಶಿಸಲಾಗಿದೆ.

ಇಂದಿನಿಂದ ಬಿಎಂಟಿಸಿ ಬಸ್‌ ಪಾಸ್‌ ವಿತರಣೆ

ಈ ಹಿಂದೆಯೂ ಕೂಡ ನೌಕರರ ಹಲವು ಭತ್ಯೆಗಳು, ಪ್ರೋತ್ಸಾಹಧನ ಸೇರಿದಂತೆ ಕೆಲವೊಂದು ಸೌಲಭ್ಯಗಳಿಗೂ ಬ್ರೇಕ್‌ ಹಾಕಲಾಗಿತ್ತು. ಅವಶ್ಯಕತೆಗೆ ತಕ್ಕಷ್ಟುಬಿಡಿಭಾಗ ಖರೀದಿ, ಕಚೇರಿ ಸಲಕರಣೆಗಳು, ಪೀಠೋಪಕರಣ, ವಾಹನ ಬಳಕೆ, ಪ್ರವಾಸ ಸೇರಿದಂತೆ ಕೆಲವೊಂದು ಖರ್ಚು-ವೆಚ್ಚಗಳಿಗೆ ಕತ್ತರಿ ಹಾಕಲಾಗಿತ್ತು. ಇದೀಗ ಮೊಬೈಲ್‌ ಸಿಮ್‌ ಕಾರ್ಡ್‌ಗಳನ್ನು ರದ್ದುಗೊಳಿಸುವ ಮೂಲಕ ವೆಚ್ಚಕ್ಕೆ ಕಡಿವಾಣ ಹಾಕಲಾಗಿದೆ.