Asianet Suvarna News Asianet Suvarna News

ಇಂದಿನಿಂದ ಬಿಎಂಟಿಸಿ ಬಸ್‌ ಪಾಸ್‌ ವಿತರಣೆ

ಅನಿಯಮಿತವಾಗಿ ಪ್ರಯಾಣಿಸಲು ಅನುಕೂಲವಾಗುವ ಬಿಎಂಟಿಸಿ ರಿಯಾಯಿತಿ ದರದ ಪಾಸು ವಿತರಣೆ| (1050) ಹಾಗೂ ಹಿರಿಯ ನಾಗರಿಕರ ಮಾಸಿಕ ಪಾಸು (945) ನಿಗದಿತ ಸ್ಥಳಗಳಲ್ಲಿ ವಿತರಣೆ|ಬೆಂಗಳೂರು ಒನ್‌ ಎಲ್ಲ 200 ಕೇಂದ್ರಗಳು ಹಾಗೂ ಹೆಚ್ಚಿನ ಜನ ದಟ್ಟಣೆ ಇರುವ ಪ್ರದೇಶಗಳಲ್ಲಿ ಸಾರಥಿ ವಾಹನಗಳ ಮೂಲಕ ಮಾಸಿಕ ಪಾಸು ವಿತರಣೆ| 
 
 

BMTC Bus Pass Distribution from today
Author
Bengaluru, First Published Sep 28, 2020, 7:32 AM IST

ಬೆಂಗಳೂರು(ಸೆ.28): ಸಾರ್ವಜನಿಕರು ಅನಿಯಮಿತವಾಗಿ ಪ್ರಯಾಣಿಸಲು ಅನುಕೂಲವಾಗುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ರಿಯಾಯಿತಿ ದರದ ಸಾಮಾನ್ಯ ಮಾಸಿಕ ಪಾಸು (1050) ಹಾಗೂ ಹಿರಿಯ ನಾಗರಿಕರ ಮಾಸಿಕ ಪಾಸು (945) ಗಳನ್ನು ಸೆ.28ರಿಂದ ನಿಗದಿತ ಸ್ಥಳಗಳಲ್ಲಿ ವಿತರಿಸಲಾಗುತ್ತದೆ.

ಕೆಂಪೇಗೌಡ ಬಸ್‌ ನಿಲ್ದಾಣ, ಕೆ.ಆರ್‌ ಮಾರುಕಟ್ಟೆ, ಶಿವಾಜಿನಗರ ಬಸ್‌ ನಿಲ್ದಾಣ, ಶಾಂತಿನಗರ, ಕೋರಮಂಗಲ, ಜಯನಗರ, ವಿಜಯನಗರ ಸೇರಿದಂತೆ ಸಂಸ್ಥೆಯ ಎಲ್ಲ ಟಿಟಿಎಂಸಿಗಳಲ್ಲಿ ವಿತರಿಸಲಾಗುವುದು. ಮಾಗಡಿ ರಸ್ತೆ ಟೋಲ್‌ಗೇಟ್‌ನ ಶೃಂಗೇರಿ ಎಂಟರ್‌ಪ್ರೈಸಸ್‌, ಹನುಮಂತ ನಗರ ಬ್ಲಾಕ್‌ನ ಶ್ರೀ ರವಿಕುಮಾರ್‌ ಶ್ರೀರಾಮ ಟ್ರಾವೆಲ್ಸ್‌, ಸುಂಕದಕಟ್ಟೆಯ ಆರ್‌.ರೇಣುಕಾಂಬ ವಿಜಯದುರ್ಗಾ ಎಂಟರ್‌ಪ್ರೈಸಸ್‌, ರಾಜಾಜಿನಗರದ ಎ.ಆರ್‌.ಎಂಟರ್‌ಪ್ರೈಸಸ್‌ ಸೇರಿದಂತೆ 13 ಖಾಸಗಿ ಏಜೆನ್ಸಿಗಳಿಂದಲೂ ಪಾಸು ನೀಡಲಾಗುತ್ತದೆ. 

ಸಾರಿಗೆ ನಿಗಮದ 10,000 ನೌಕರರಿಗೆ ಸಂಬಳವಿಲ್ಲ

ಅಲ್ಲದೇ ಬೆಂಗಳೂರು ಒನ್‌ ಎಲ್ಲ 200 ಕೇಂದ್ರಗಳು ಹಾಗೂ ಹೆಚ್ಚಿನ ಜನ ದಟ್ಟಣೆ ಇರುವ ಪ್ರದೇಶಗಳಲ್ಲಿ ಸಾರಥಿ ವಾಹನಗಳ ಮೂಲಕ ಮಾಸಿಕ ಪಾಸುಗಳನ್ನು ವಿತರಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ದೂ. 080 22537295ಗೆ ಕರೆ ಮಾಡಿ, ಇಲ್ಲವೇ ಹತ್ತಿರದ ಸಂಸ್ಥೆಯ ಟಿಟಿಎಂಸಿಗೆ ಭೇಟಿ ನೀಡಬಹುದು.
 

Follow Us:
Download App:
  • android
  • ios