Asianet Suvarna News Asianet Suvarna News

ಸರ್ಕಾರದ ವಿರುದ್ಧ ಪೋಸ್ಟ್ ಹಾಕಿದ್ದಕ್ಕೆ ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ: ಪೊಲೀಸರ ವಿರುದ್ಧ ಸಂಸದ ಪ್ರತಾಪ್ ಸಿಂಹ ಗರಂ!

ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪೋಸ್ಟ್ ಹಾಕಿದ್ದಕ್ಕೆ ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರು ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆ ಮೈಸೂರು, ಕೊಡಗು ಸಂಸದ ಪ್ರತಾಪ ಸಿಂಹ ವಿರಾಜಪೇಟೆ ಠಾಣೆಗೆ ತೆರಳಿ ಪೊಲೀಸರನ್ನ ತರಾಟೆ ತೆಗೆದುಕೊಂಡರು.

BJP Workers Harassment by police MP Pratap simha warns virajpet police at kodagu rav
Author
First Published Nov 25, 2023, 8:51 PM IST

ಕೊಡಗು (ನ.25): ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪೋಸ್ಟ್ ಹಾಕಿದ್ದಕ್ಕೆ ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರು ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆ ಮೈಸೂರು, ಕೊಡಗು ಸಂಸದ ಪ್ರತಾಪ ಸಿಂಹ ವಿರಾಜಪೇಟೆ ಠಾಣೆಗೆ ತೆರಳಿ ಪೊಲೀಸರನ್ನ ತರಾಟೆ ತೆಗೆದುಕೊಂಡರು.

ಫೇಸ್‌ಬುಕ್‌ನಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪೋಸ್ಟ್ ಹಾಕಿದ್ದ ಬಿಜೆಪಿ ಕಾರ್ಯಕರ್ತ ರೋಷನ್ ಕಾರ್ಯಪ್ಪ. ಠಾಣೆಗೆ ಕರೆಯಿಸಿ ಮುಚ್ಚಳಿಕೆ ಬರೆಸಿಕೊಂಡಿದ್ದ ಪೊಲೀಸರು. ಸಾಮಾಜಿಕ ಜಾಲತಾಣದಲ್ಲಿ ಪಕ್ಷಗಳ ವಿರುದ್ಧ ಪೋಸ್ಟ್ ಹಾಕುವುದು ಸಹಜ. ಹಾಗಂತ ಹೀಗೆ ಕೇಸ್ ಹಾಕಿ ತೊಂದರೆ ಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಸಂಸದ, ಬಿಜೆಪಿ ಕಾರ್ಯಕರ್ತರನ್ನು ಠಾಣೆಗೆ ಕರೆಯಿಸಿ ಮುಚ್ಚಳಿಕೆ ಬರೆಸಿಕೊಳ್ಳಲು ನಿಮಗೇನು ಪವರ್ ಇದೆ ಎಂದು ಪೊಲೀಸರ ವಿರುದ್ಧ ಆಕ್ರೋಶಗೊಂಡರು. 

ಎಂಪಿ ಎಲೆಕ್ಷನ್‌ಗೂ, ರಾಜ್ಯಾಧ್ಯಕ್ಷರ ನೇಮಕಕ್ಕೂ ಸಂಬಂಧವಿಲ್ಲ: ಪ್ರತಾಪ ಸಿಂಹ

ಚುನಾವಣೆ ಸಂದರ್ಭ ಪೇ ಸಿಎಂ, ಸಿಎಂ ಸೀಟು ಮಾರಾಟಕ್ಕೆ ಇದೆ ಎಂದೆಲ್ಲಾ ಕಾಂಗ್ರೆಸ್‌ನವರು ಪೋಸ್ಟ್ ಹಾಕಿದ್ದರು. ಅವರು ಸಾಮಾಜಿಕ ಮಾಧ್ಯಮಗಳಲ್ಲೇ ಪ್ರಚಾರ ಮಾಡಿದರು.  ಹಾಗಾದರೆ ಅವರ ಮೇಲೆ ಕ್ರಮ ತೆಗೆದುಕೊಂಡಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು. 

ನಮ್ಮ ಕಾರ್ಯಕರ್ತರಿಗೆ ಕಿರುಕುಳ ನೀಡುವಂಥ ಘಟನೆಗಳು ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಪೊಲೀಸ್ ವರಿಷ್ಟಾಧಿಕಾರಿಗೆ ಎಚ್ಚರಿಕೆ ನೀಡಿದ್ದೇನೆ. ಆದರೂ ನಮ್ಮ ಕಾರ್ಯಕರ್ತರಿಗೆ ತೊಂದರೆ ಕೊಡಲಾಗುತ್ತಿದೆ. ಸರ್ಕಾರದ ವಿರುದ್ಧ ಪೋಸ್ಟ್ ಹಾಕಿದರೆ, ಪ್ರಶ್ನಿಸಿದರೆ ಠಾಣೆಗೆ ಕರೆದು ಕಿರುಕುಳ ನೀಡಲಾಗುತ್ತಿದೆ. ಇಂಥ ಪೊಲೀಸ್ ದೌರ್ಜನ್ಯವನ್ನು ಬಿಜೆಪಿ ಸಹಿಸುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಪೊಲೀಸ್ ಠಾಣೆಯಲ್ಲೇ ಪೊಲೀಸರಿಗೆ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಸಂಸದರ ಜೊತೆಯಲ್ಲೇ ಇದ್ದ ಮಾಜಿ ಶಾಸಕ ಕೆಜಿ ಬೋಪಯ್ಯ.

ನನಗೀಗ ರಾಜಕೀಯದ 20-20 ಮ್ಯಾಚ್ ಆಡುವ ಜವಾಬ್ದಾರಿ ಪಕ್ಷ ವಹಿಸಿದೆ: ಬಿವೈ ವಿಜಯೇಂದ್ರ

Follow Us:
Download App:
  • android
  • ios