ಪ್ರಧಾನಿ ಮೋದಿ ಭಾವಚಿತ್ರ ತೆಗೆದು ಸಿಎಂ ಫೋಟೊ ಹಾಕಿದ್ದಕ್ಕೆ ರೊಚ್ಚಿಗೆದ್ದ ಬಿಜೆಪಿ ಕಾರ್ಯಕರ್ತರು!
ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನದ ಮೇಲಿದ್ದ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ತೆಗೆದು ಸಿಎಂ ಸಿದ್ದರಾಮಯ್ಯರ ಭಾವಚಿತ್ರ ಹಾಕಿಸಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ರೊಚ್ಚಿಗೆದ್ದ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ನಡೆದಿದೆ.
ಹಾವೇರಿ (ಫೆ.5): ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನದ ಮೇಲಿದ್ದ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ತೆಗೆದು ಸಿಎಂ ಸಿದ್ದರಾಮಯ್ಯರ ಭಾವಚಿತ್ರ ಹಾಕಿಸಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ರೊಚ್ಚಿಗೆದ್ದ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ನಡೆದಿದೆ.
ಕೇಂದ್ರ ಸರಕಾರದ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಪೋಟೋ ಹಾಕಲಾಗಿತ್ತು. ಆದರೆ ಪ್ರಧಾನಿಯವರ ಫೋಟೊವನ್ನೇ ತೆಗೆದು ಅವಮಾನಿಸಿದ್ದಲ್ಲದೇ ಸಿಎಂ ಸಿದ್ದರಾಮಯ್ಯ ಹಾಗೂ ಪಶುಸಂಗೋಪನಾ ಸಚಿವರ ಭಾವಚಿತ್ರ ಹಾಕಲಾಗಿದೆ. ಕೇಂದ್ರದ ಯೋಜನೆಯನ್ನು ತಮ್ಮದೆಂದು ಬಿಂಬಿಸುವ ಹುನ್ನಾರ ಎಂದು ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಕಾರ್ಯಕರ್ತರು.
ರಾಷ್ಟ್ರ ರಾಜಕಾರಣದ ಸಹವಾಸ ಬೇಡ ಅಂತಿರೋ ಸಚಿವರು; ಗೆಲ್ಲುವ ಅಭ್ಯರ್ಥಿ ಆಯ್ಕೆಗೆ ಕೈ ಹೈಕಮಾಂಡ್ ಹೈರಾಣು!
ವಾಹನದ ಮೇಲಿದ್ದ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ತೆರವು ಮಾಡಿದ್ದಕ್ಕೆ ರೊಚ್ಚಿಗೆದ್ದ ಕಾರ್ಯಕರ್ತರು. ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನದ ಮೇಲಿದ್ದ ಸಿಎಂ ಹಾಗೂ ಪಶುಸಂಗೋಪನಾ ಸಚಿವರ ಭಾವಚಿತ್ರಕ್ಕೆ ಸಗಣಿ ಎರಚಿ ಆಕ್ರೋಶ ವ್ಯಕ್ತಪಡಿಸಿದರು. ಘಟನೆ ವಿಡಿಯೋ ವೈರಲ್ ಆಗಿದ್ದು. ಕೇಂದ್ರ ಸರ್ಕಾರದ ಯೋಜನೆ ತಮ್ಮದೆಂದು ಬಿಂಬಿಸಿರುವ ರಾಜ್ಯಸರ್ಕಾರದ ನಡೆ ಟೀಕೆಗೆ ಗುರಿಯಾಗಿದೆ.