ರಾಜಕೀಯಕ್ಕಾಗಿ ಲಿಂಗಾಯತರ ಒಡೆವ ದುಷ್ಕೃತ: ಬಿ.ವೈ.ವಿಜಯೇಂದ್ರ
ಲಿಂಗಾಯತ ಸಮಾಜ ಕವಲು ದಾರಿಯಲ್ಲಿ ಸಾಗುತ್ತಿದೆ. ಸಮಾಜದಲ್ಲಿ ವಿಷ ಬೀಜ ಬಿತ್ತಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಆಗುತ್ತಿದೆ. ಇದನ್ನು ಸಮಾಜದವರು ಜಾಗೃತರಾಗಿ ಗಮನಿಸಬೇಕು. ಪಕ್ಕದ ಮನೆಗೆ ಬೆಂಕಿ ಹತ್ತಿದೆ ನಮ್ಮ ಮನೆಗಲ್ಲ ಎಂದು ಸುಮ್ಮನಿರಬಾರದು. ನಮ್ಮ ಸಮಸ್ಯೆಗಳನ್ನು ಬದಿಗಿಟ್ಟು, ಸಮುದಾಯ ಮಾತ್ರವಲ್ಲ, ನಾಡಿನ ಎಳೆಗಾಗಿ ಲಿಂಗಾಯತ ಎಲ್ಲ ಒಳಪಂಗಡಗಳು ಒಂದಾಗಿ ನಿಲ್ಲಬೇಕು ಎಂದು ಮನವಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
ಬೆಂಗಳೂರು(ಜ.15): ರಾಜಕೀಯ ಲಾಭಕ್ಕಾಗಿ ವೀರಶೈವ ಲಿಂಗಾಯತರಲ್ಲಿ ವಿಷಬೀಜ ಬಿತ್ತಿ ಸಮಾಜ ಒಡೆಯುವ ದುಷ್ಕೃತ್ಯ ನಡೆಯುತ್ತಿದ್ದು, ಎಲ್ಲ ಒಳಪಂಗಡಗಳು ಎಚ್ಚೆತ್ತು ನಾಡಿನ ಒಳಿತಿಗಾಗಿ ಒಂದಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಮಂಗಳವಾರ ನೊಳಂಬ ಲಿಂಗಾಯತ ಸಂಘ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಶ್ರೀ ಗುರು ಸಿದರಾಮೇಶ್ವರರ 852ನೇ ಜಯಂತಿ ಮಹೋ ತವದಲ್ಲಿ ನೊಳಂಬ ಇತಿಹಾಸ, ಸಂಘದ ಸಾಕ್ಷ್ಯಚಿತ್ರ' ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಲಿಂಗಾಯತರು ಹಿಂದೂಗಳು ಅಲ್ಲ, ವೀರಶೈವರು ಅಲ್ಲ: ಹಿಮ್ಮಡಿ ಮುರುಘರಾಜೇಂದ್ರ ಶ್ರೀ
ಲಿಂಗಾಯತ ಸಮಾಜ ಕವಲು ದಾರಿಯಲ್ಲಿ ಸಾಗುತ್ತಿದೆ. ಸಮಾಜದಲ್ಲಿ ವಿಷ ಬೀಜ ಬಿತ್ತಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಆಗುತ್ತಿದೆ. ಇದನ್ನು ಸಮಾಜದವರು ಜಾಗೃತರಾಗಿ ಗಮನಿಸಬೇಕು. ಪಕ್ಕದ ಮನೆಗೆ ಬೆಂಕಿ ಹತ್ತಿದೆ ನಮ್ಮ ಮನೆಗಲ್ಲ ಎಂದು ಸುಮ್ಮನಿರಬಾರದು. ನಮ್ಮ ಸಮಸ್ಯೆ ಗಳನ್ನು ಬದಿಗಿಟ್ಟು, ಸಮುದಾಯ ಮಾತ್ರವಲ್ಲ, ನಾಡಿನ ಎಳೆಗಾಗಿ ಲಿಂಗಾಯತ ಎಲ್ಲ ಒಳಪಂಗಡಗಳು ಒಂದಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.
ನೊಳಂಬ ಸಮುದಾಯ ಇಡೀ ಲಿಂಗಾಯತ ಸಮಾಜವನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದೆ. ಯಡಿಯೂರಪ್ಪ ಅವರು ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡುತಮ್ಮ ಆಡಳಿತದಲ್ಲಿ ಬಸವಣ್ಣನವರ ಕಾಯಕ ತತ್ವ ಅನುಷಾನ ಮಾಡಿದ್ದಾರೆ. ಸಮಾಜ ನಮ್ಮ ಮೇಲಿಟ್ಟ ವಿಶ್ವಾಸ ಉಳಿಸಿಕೊಳ್ಳುತ್ತೇವೆ. ಏನೇ ಸಮಸ್ಯೆ ಬಂದರೂ ಮೆಟ್ಟಿ ನಿಂತು ಯಡಿಯೂರಪ್ಪ ಅವರಂತೆ ಸಮಾಜದ ಶಕ್ತಿ ಹೆಚ್ಚಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬದಲಾದ ಕಾಲ ಘಟ್ಟದಲ್ಲಿ ಸಮುದಾಯದ ಯುವಕರಲ್ಲಿ ಸ್ವಧರ್ಮ ನಿಷ್ಠೆ, ಪರಂಪರೆಯ ಮೇಲಿನ ಗೌರವ ಕಡಿಮೆ ಆಗುತ್ತಿದೆ. ಯಾಂತ್ರಿಕ ಬದುಕು ಪ್ರಾತಿನಿಧ್ಯ ಪಡೆಯುತ್ತಿರುವ ಈ ಕಾಲಮಾನದಲ್ಲಿ ಯುವಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದರು.
ಕೇಂದ್ರ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, 12ನೇಶತಮಾನದ ಶರಣರು ತೋರಿಸಿದ ಸಮಾಜದಲ್ಲಿನ ಲೋಪದೋಷ ಸರಿಪಡಿಸಿಕೊಂಡು ಹೋಗಬೇಕಾದ ಅಗತ್ಯವಿದೆ ಎಂದು ಹೇಳಿದರು.
ಪ್ರಿಯಾಂಕ್ ಖರ್ಗೆ ರಜಾಕಾರರು ಮುಸ್ಲಿಮರಲ್ಲ ಅಂತಾರೆ, ಹಾಗಾದ್ರೆ ಅವರೇನು ಲಿಂಗಾಯತರ? ಬ್ರಾಹ್ಮಣರಾ?: ಯತ್ನಾಳ್ ಲೇವಡಿ
'ಜಗದ ಬೆರಗು' ಗ್ರಂಥ ಬಿಡುಗಡೆ ಮಾಡಿದ ಸಂಸದ ಗೋವಿಂದ ಕಾರಜೋಳ, ವರ್ಗ ರಹಿತ, ಜಾತಿ ರಹಿತ ಸಮಾಜ ನಿರ್ಮಾಣಕ್ಕಾಗಿ ಸಿದ್ದರಾಮೇಶ್ವರರು ಬಸವಣ್ಣನವರಿಗೆ ಹೆಗಲು ಕೊಟ್ಟಿದ್ದರು. ಈ ಬಗ್ಗೆ ನೊಳಂಬರು ತಮ್ಮ ಇತಿಹಾಸದ ಬಗ್ಗೆ ಹೆಮ್ಮೆ ಮೂಡಿಸಿಕೊಳ್ಳಿ ಎಂದರು.
ತರಳಬಾಳು ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕುದ್ದೂರು ತಮ್ಮಡಿಹಳ್ಳಿ ಡಾ. ಅಭಿನವ ಮಲ್ಲಿಕಾರ್ಜುನ ದೇಶೀಕೇಂದ್ರ ಸ್ವಾಮೀಜಿ, ಗೋಡೆಕೆರೆ ಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿದರು. ಶಾಸಕ ಎಸ್.ಆರ್. ವಿಶ್ವನಾಥ್, ಜ್ಯೋತಿ ಗಣೇಶ್, ಮಾಜಿ ಶಾಸಕ ಡಿ.ಎಸ್.ಸುರೇಶ್ ಸೇರಿ ಇನ್ನೂ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.