Asianet Suvarna News Asianet Suvarna News

ಅಂಬೇಡ್ಕರ್‌ ಹೆಸರು ಭಾರತರತ್ನಕ್ಕೆ ಶಿಫಾರಸು ಮಾಡಿದ್ದು ಅಟಲ್‌: ಸಿ.ಟಿ.ರವಿ

ಒಬ್ಬರ ತುಷ್ಟೀಕರಣ ರಾಜನೀತಿಗೆ ವಿರುದ್ಧವಾದದ್ದು ಎಂದು ನಂಬಿದ್ದ ಅಂಬೇಡ್ಕರ್‌ ಅವರು ಏಕರೂಪ ನಾಗರೀಕ ಸಂಹಿತೆಯ ಪರವಾಗಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. 

BJP National General Secretary CT Ravi Talks About Dr BR Ambedkar At Mysuru gvd
Author
First Published Jan 8, 2023, 1:36 PM IST

ಮೈಸೂರು (ಜ.08): ಒಬ್ಬರ ತುಷ್ಟೀಕರಣ ರಾಜನೀತಿಗೆ ವಿರುದ್ಧವಾದದ್ದು ಎಂದು ನಂಬಿದ್ದ ಅಂಬೇಡ್ಕರ್‌ ಅವರು ಏಕರೂಪ ನಾಗರೀಕ ಸಂಹಿತೆಯ ಪರವಾಗಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಬಿಜೆಪಿ ಎಸ್ಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸಿಗರು ಬಿಜೆಪಿ ದಲಿತ ವಿರೋಧಿ, ಸಂವಿಧಾನ ವಿರೋಧಿ ಮತ್ತು ಅಂಬೇಡ್ಕರ್‌ ವಿರೋಧಿ ಎಂದು ಬಿಂಬಿಸುತ್ತಾರೆ. ಆದರೆ ಸಂವಿಧಾನ ದಿನ ಆರಂಭಿಸಿದ್ದು ಪ್ರಧಾನಿ ಮೋದಿ. ಅಂಬೇಡ್ಕರ್‌ ಅವರು 1952ರಲ್ಲಿ ಸಂಸತ್‌ ಪ್ರವೇಶಿಸಲು ಜನಸಂಘ ಬೆಂಬಲ ನೀಡಿತ್ತು. 

ಜನತಾ ಪಕ್ಷ ದೇಶದಲ್ಲಿ ಅಧಿಕಾರದಲ್ಲಿದ್ದಾಗ ಅಂಬೇಡ್ಕರ್‌ಗೆ ಭಾರತರತ್ನ ನೀಡಬೇಕು ಎಂದು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಹೆಸರು ಶಿಫಾರಸ್ಸು ಮಾಡಿದ್ದರು. ಅದು ಹೇಗೆ ಬಿಜೆಪಿ ದಲಿತ ವಿರೋಧಿಯಾದೀತು ಎಂದು ಅವರು ಪ್ರಶ್ನಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಸಮುದಾಯದ ತುಷ್ಟೀಕರಣ ನೀತಿಯನ್ನು ಅವರು ವಿರೋಧಿಸಿದ್ದರು. ಏಕರೂಪ ನಾಗರೀಕ ಸಂಹಿತೆಯ ಪರವಾಗಿ ಅವರು ಅಭಿಪ್ರಾಯ ಹೊಂದಿದ್ದರು. ಸಂವಿಧಾನದ ಮೂಲಕ ಅವರು ನಮಗೆ ಸಮಾನತೆಯ ಅವಕಾಶ ನೀಡಿದ್ದಾರೆ. ಅವರನ್ನು ನಾವು ಸ್ಮರಿಸಬೇಕು ಎಂದರು.

ನಾಟಕ ಮಾಡುವ ವೇಳೆಯೆ ಹೃದಯಘಾತದಿಂದ ಕುಸಿದು ಬಿದ್ದು ಪ್ರಾಣಬಿಟ್ಟ ಕಲಾವಿದ!

ದೇಶದಲ್ಲಿ ಭ್ರಷ್ಟಾಚಾರ ಹುಟ್ಟಿದ್ದೆ ಕಾಂಗ್ರೆಸ್‌ನಿಂದ: ದೇಶದಲ್ಲಿ ಭ್ರಷ್ಟಾಚಾರ ಹುಟ್ಟಿದ್ದೆ ಕಾಂಗ್ರೆಸ್‌ ಪಕ್ಷದಿಂದ. ಆ ಪಕ್ಷದ ನಾಯಕರು ನಮಗೆ ನೀತಿ ಪಾಠ ಹೇಳುವ ಅಗತ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಪಟ್ಟಣದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ವಿಧಾನಸೌಧದಲ್ಲಿ ಸರ್ಕಾರಿ ಅಧಿಕಾರಿಯಿಂದ .10 ಲಕ್ಷ ವಶಪಡಿಸಿಕೊಂಡ ಮಾತ್ರಕ್ಕೆ ಕಾಂಗ್ರೆಸ್‌ನವರು ನಮ್ಮ ಪಕ್ಷದ ನಾಯಕರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ. ಈ ಪ್ರಕರಣ ಸಂಬಂಧ ಈಗಾಗಲೇ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ನಾನು ತನಿಖೆಗೆ ಮುಂಚೆ ಯಾರಿಗೂ ಕ್ಲಿನ್‌ಚಿಚ್‌ ಕೊಡಲ್ಲ. ಯಾರನ್ನು ದೂರುವುದಿಲ್ಲ ಎಂದರು.

ವಿಪಕ್ಷದವರು ಟೂಲ್‌ಕಿಟ್‌ ರಾಜಕಾರಣ ಮಾಡೋದಕ್ಕೆ ಈ ರೀತಿ ಮಾಡುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸಚಿವರ ಆಪ್ತ ಸಹಾಯಕರ ಕಚೇರಿಯಲ್ಲಿ ಟಿಫನ್‌ ಕ್ಯಾರಿಯರ್‌ನಲ್ಲಿ ಹಣ ಸಿಕ್ಕಿತ್ತು. ಅದನ್ನು ಸಹ ಕಾಂಗ್ರೆಸ್‌ ನಾಯಕರು ನೆನಪಿಸಿಕೊಳ್ಳಲಿ ಎಂದು ಕೈ ನಾಯಕರ ವಿರುದ್ಧ ಕಿಡಿಕಾರಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಇತ್ತೀಚೆಗೆ ವಿಧಾನಸೌಧದ ಗೋಡೆಗಳನ್ನು ಮುಟ್ಟಿದರೇ ಹಾಗೂ ರಾಜ್ಯದ ಸರ್ಕಾರಿ ಕಚೇರಿಗಳ ಗೋಡೆಗಳು ಸಹ ಕಾಸು, ಕಾಸು ಎನ್ನುತ್ತಿವೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ನಮ್ಮ ಸರ್ಕಾರದಲ್ಲಿ ಆ ರೀತಿಯ ಭ್ರಷ್ಟಾಚಾರ ಇಲ್ಲ. 

ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನ ಸಕ್ಕರೆ ನಾಡು ಮಂಡ್ಯದಲ್ಲಿ: ಮಹೇಶ್ ಜೋಷಿ

ಕಡಿಮೆ ಅವಧಿಯಲ್ಲಿ ಅತೀ ಭ್ರಷ್ಟಾಚಾರ ನಡೆಸಿ ಅತೀ ಹೆಚ್ಚು ಶ್ರೀಮಂತ ವ್ಯಕ್ತಿ ಆಗಿರುವುದು ಇಡೀ ರಾಜ್ಯಕ್ಕೆ ಜಗಜ್ಜಾಹೀರು ಆಗಿದೆ. ಡಿಕೆಶಿ ಪವರ್‌ ಮಿನಿಸ್ಟರ್‌ ಆಗಿದ್ದಾಗ ಸೋಲಾರ್‌ ಹಂಚಿಕೆ ಹೇಗಾಯ್ತು, 800, 1000 ಪಟ್ಟು ಆಸ್ತಿ ಹೆಚ್ಚಳ ಹೇಗಾಯ್ತು ಅಂತ ರಾಜ್ಯದ ಜನತೆಗೆ ಗೊತ್ತು ಎಂದು ಡಿಕೆಶಿ ಕಾಲೆಳೆದರು. ಬಿಜೆಪಿ ಸರ್ಕಾರವನ್ನು ರೌಡಿಗಳು ನಿಯಂತ್ರಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಆರೋಪಕ್ಕೆ ನಮ್ಮ ಪಕ್ಷದಲ್ಲಿ ಆಗೇನಿಲ್ಲ. ಆ ದಿನಗಳ (ಸಿನಿಮಾ) ಸಂಸ್ಕೃತಿ ನಮ್ಮ ಪಕ್ಷದಲ್ಲಿ ಇಲ್ಲ ಎಂದು ಉತ್ತರಿಸಿದರು.

Follow Us:
Download App:
  • android
  • ios