Asianet Suvarna News Asianet Suvarna News

Mandya: ನಾಟಕ ಮಾಡುವ ವೇಳೆಯೆ ಹೃದಯಘಾತದಿಂದ ಕುಸಿದು ಬಿದ್ದು ಪ್ರಾಣಬಿಟ್ಟ ಕಲಾವಿದ!

ರಂಗಭೂಮಿ ಕಲಾವಿದ ಪೌರಾಣಿಕ ನಾಟಕ ಅಭಿಯನ ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ಬಂಡೂರು ಗ್ರಾಮದಲ್ಲಿ ನಡೆದಿದೆ. ತಾಲೂಕಿನ ದುಗ್ಗನಹಳ್ಳಿಯ ಡಿ.ಎನ್‌.ನಂಜಯ್ಯ(41) ಮೃತ ಕಲಾವಿದರು. 

drama artist died on stage while performing in mandya gvd
Author
First Published Jan 8, 2023, 1:04 PM IST

ಮಂಡ್ಯ (ಜ.08): ರಂಗಭೂಮಿ ಕಲಾವಿದ ಪೌರಾಣಿಕ ನಾಟಕ ಅಭಿಯನ ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ಬಂಡೂರು ಗ್ರಾಮದಲ್ಲಿ ನಡೆದಿದೆ. ತಾಲೂಕಿನ ದುಗ್ಗನಹಳ್ಳಿಯ ಡಿ.ಎನ್‌.ನಂಜಯ್ಯ(41) ಮೃತ ಕಲಾವಿದರು. ಇತ್ತೀಚೆಗೆ ನಾಟಕಗಳಲ್ಲಿ ಅಭಿಯನದನ್ನು ರೂಢಿಸಿಕೊಂಡಿದ್ದ ನಂಜಯ್ಯ ಕೆಲವು ಸಾಮಾಜಿಕ ಹಾಗೂ ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ್ದರು. ಬಂಡೂರು ಗ್ರಾಮದಲ್ಲಿ ಶನಿವಾರ ಶ್ರೀಕೃಷ್ಣ ಸಂಧಾನ ನಾಟಕದ ಪ್ರದರ್ಶನ ನಡೆಯುತಿತ್ತು. ನಂಜಯ್ಯ ಸೇರಿದಂತೆ ಸುಮಾರು ಹಲವು ಕಲಾವಿದರು ಅಭಿನಯಿಸುತ್ತಿದ್ದರು. 

ನಾಟಕದಲ್ಲಿ ಸಾತ್ಮಕಿ, ಸೈಂದವ ಪಾತ್ರ ಅಭಿನಯ ಮಾಡುತ್ತಿದ್ದ ನಂಜಯ್ಯ ಪಾತ್ರದಲ್ಲಿ ತಲ್ಲಿನರಾಗಿದ್ದ ವೇಳೆಯೇ ನೋಡ ನೋಡುತ್ತಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಕಲಾವಿದರು ಹಾಗೂ ಗ್ರಾಮಸ್ಥರು ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ, ಹೃದಯಾಘಾತದಿಂದ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ಖಚಿತಪಡಿಸಿದರು. ಘಟನೆಯಿಂದಾಗಿ ಇಡೀ ಕಲಾವಿದರ ಬಳಗ ಮತ್ತು ದುಗ್ಗನಹಳ್ಳಿ ಹಾಗೂ ಬಂಡೂರು ಗ್ರಾಮಗಳಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ನವಿಲು ಚಿತ್ರ ಬಿಡಿಸುವ ಮೂಲಕ 'ಚಿತ್ರಸಂತೆ'ಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ

ಹೃದ​ಯಾ​ಘಾ​ತ​ದಿಂದ ಪ್ರವಾ​ಸಿಗನ ಸಾವು: ಸಾಗರ ತಾಲೂಕಿನ ಶ್ರೀ ಕ್ಷೇತ್ರ ಸಿಗಂಧೂರಿಗೆ ಹೊರಟಿದ್ದ ಬೆಂಗಳೂರು ಮೂಲದ ಪ್ರವಾಸಿಗರೊಬ್ಬರು ಹೊಸನಗರದ ಲಾಡ್ಜ್‌ವೊಂದರಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬೆಂಗಳೂರು ಜಿಲ್ಲೆ ಆಡುಗೋಡಿ ಆನೆಪಾಳ್ಯದ ನಿವಾಸಿ ಹಾಗೂ ರಿಯಲ್ ಎಸ್ಟೇಟ್‌ ವ್ಯವಹಾರ ಮಾಡುತ್ತಿದ್ದ ಮುನಿರಾಜು(48) ಮೃತಪಟ್ಟವರು. ಜ. 4ರಂದು ಪುಣ್ಯಕ್ಷೇತ್ರಗಳ ಭೇಟಿಗೆಂದು ಪತ್ನಿ ಭಾರತಿ, ಪುತ್ರಿ ಯಶಸ್ವಿನಿ ಹಾಗೂ ಪುತ್ರ ವಿಭಾಶರಾಜ್ ಅವರೊಂದಿಗೆ ಬೆಂಗಳೂರಿನಿಂದ ಕಾರಿನಲ್ಲಿ ಹೊರಟಿದ್ದರು. ಹೊರನಾಡು, ಶೃಂಗೇರಿ ಕ್ಷೇತ್ರ ದರ್ಶನದ ನಂತರ ಸಿಗಂಧೂರು ಶ್ರೀ ಚೌಡೇಶ್ವರಿ ದೇವಿ ದರ್ಶನಕ್ಕಾಗಿ ತೆರಳಲು ರಾತ್ರಿ ಹೊಸನಗರದ ಲಾಡ್ಜ್‌ನಲ್ಲಿ ತಂಗಿದ್ದರು. ಗುರುವಾರ ಬೆಳಗ್ಗೆ ಹೃದಯಘಾತಕ್ಕೊಳಗಾದ ಅವರನ್ನು ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟಿದ್ದಾರೆ. ಹೊಸನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನ ಸಕ್ಕರೆ ನಾಡು ಮಂಡ್ಯದಲ್ಲಿ: ಮಹೇಶ್ ಜೋಷಿ

ರಜೆಗೆ ಬಂದಿದ್ದ ಯೋಧ ಸಾವು: ರಜೆ ನಿಮಿತ್ತ ಊರಿಗೆ ಬಂದಿದ್ದ ಯೋಧರೊಬ್ಬರು ಹೃದಯಾಘಾತದಿಂದ ಮೃತಪಟ್ಟಘಟನೆ ಭಾನುವಾರ ಮಂಗಳೂರಿನಲ್ಲಿ ಸಂಭವಿಸಿದೆ. ಕುಲಶೇಖರ ಉಮಿಕಾನ ನಿವಾಸಿ, ಬಿಎಸ್‌ಎಫ್‌ ಯೋಧ ಹರೀಶ್‌ ಕುಮಾರ್‌(43) ಎಂಬವರೇ ಮೃತಪಟ್ಟವರು. ತನ್ನ 22ನೇ ವಯಸ್ಸಿನಲ್ಲಿ ದೇಶದ ಗಡಿ ರಕ್ಷಣೆಗೆ ತೆರಳಿದ್ದ ಹರೀಶ್‌ ಕುಮಾರ್‌ ಅವರು ಇತ್ತೀಚೆಗೆ ರಜೆಯಲ್ಲಿ ಊರಿಗೆ ಬಂದಿದ್ದರು. ಊರಿನಲ್ಲಿದ್ದ ವೇಳೆ ಶನಿವಾರ ಅವರಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮರುದಿನ ಮೃತಪಟ್ಟಿದ್ದಾರೆ. ಸುಮಾರು 21 ವರ್ಷ ಕಾಲ ಸೇನೆಯ ಗಡಿಭದ್ರತಾ ಪಡೆಯಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದರು. ಇವರು 142ನೇ ಬೆಟಾಲಿಯನ್‌ ಒಡಿಶಾದಲ್ಲಿ ಕರ್ತವ್ಯದಲ್ಲಿದ್ದರು. ಮೃತರು ಪತ್ನಿ, ಆರು ವರ್ಷದ ಪುತ್ರ ಹಾಗೂ ಒಂದೂವರೆ ವರ್ಷದ ಪುತ್ರಿಯನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಸರ್ಕಾರಿ ಗೌರವಗಳೊಂದಿಗೆ ಮಂಗಳೂರಿನಲ್ಲಿ ನೆರವೇರಿತು.

Follow Us:
Download App:
  • android
  • ios