ಲಕ್ಷ್ಮೀ ಹೆಬ್ಬಾಳ್ಕರ್‌ಗೆ ವೇ* ಎಂದರಾ ಸಿ.ಟಿ.ರವಿ; ಕಣ್ಣೀರಿಡುತ್ತಾ ಹೊರನಡೆದ ಸಚಿವೆ!

ವಿಧಾನ ಪರಿಷತ್ತಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರು ಅವಹೇಳನಕಾರಿ ಪದ ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಘಟನೆಯಿಂದ ಮನನೊಂದ ಸಚಿವರು ಕಣ್ಣೀರು ಹಾಕಿದ್ದಾರೆ. ಘಟನೆ ಬಳಿಕ ಸಿ.ಟಿ. ರವಿ ಅವರ ವಿರುದ್ಧ ಸಭಾಪತಿಗಳಿಗೆ ದೂರು ನೀಡಿದ್ದಾರೆ.

BJP MLC CT Ravi used obscene words against Minister Lakshmi Hebbalkar in council sat

ಬೆಂಗಳೂರು (ಡಿ.19): ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ವೇ* ಎಂಬ ಪದವನ್ನು ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯರು ಪ್ರಾಸ್ಟೂ* ಎಂಬ ಪದ ಬಳಕೆ ಮಾಡಿದ್ದಾರೆ. ಸಿ.ಟಿ. ರವಿ ಅವರು ಲಕ್ಷ್ಮಿ ಹೆಬ್ಬಾಳ್ಕರ್ ವೇ* ಎಂದು ಹೇಳಿದ್ದಾರೆ. ಈ ಪದವನ್ನು ಬಳಕೆ ಮಾಡಿದ್ದರಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕೆಂಡಾಮಂಡಲವಾಗಿದ್ದಾರೆ. ಇದರಿಂದ ತಮಗಾದ ಅವಮಾನ ತಡೆದುಕೊಳ್ಳಲಾಗದೇ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕಣ್ಣಿರು ಹಾಕುತ್ತಾ ಪರಿಷತ್ತಿನಿಂದ ಹೊರಗೆ ಹೋಗಿದ್ದಾರೆ. ಈ ಬಗ್ಗೆ ಮಾತನಾಡಿದ ನಾಗರಾಜ್ ಯಾದವ್ ಅವರು ರಾಜ್ಯದ ಒಬ್ಬ ಪ್ರತಿಷ್ಠಿತ ಮಂತ್ರಿಗಳಿಗೆ ಹೀಗೆ ಮಾತನಾಡಿದರೆ ಹೇಗೆ ಎಂದು ಪ್ರಶ್ನೆಯನ್ನೂ ಮಾಡಿದ್ದಾರೆ.

ಈ ಬಗ್ಗೆ ಬಿಜೆಪಿ ಸದಸ್ಯರು ಸಿ.ಟಿ. ರವಿ ಅವರು ಹಾಗೇ ಮಾತನಾಡಿಲ್ಲ‌ ಎಂದು ವಾದ ಮಾಡಿದ್ದಾರೆ. ಇನ್ನು ಈ ಘಟನೆ ನಡೆಯುವ ಸ್ವಲ್ಪ ಮುಂಚೆ ಸಿ.ಟಿ. ರವಿ ಹೊರಗೆ ಹೋಗಿದ್ದಾರೆ. ಸಿ.ಟಿ. ರವಿ ಹೊರಗೆ ಹೋದ ಬಳಿಕ ಗಲಾಟೆ ಜೋರಾಗಿ ಕಾಂಗ್ರೆಸ್ ಸದಸ್ಯರು ಕೂಡ ಹೊರಗೆ ಎದ್ದು ಹೋಗಿದ್ದಾರೆ. ಈ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮೀಡಿಯಾ ಗ್ಯಾಲರಿ ಬಳಿ ಬಂದು ತಮಗಾದ ನೋವಿನ ಬಗ್ಗೆ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ. ಇದರ ಬೆನ್ನಲ್ಲಿಯೇ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಬಿಜೆಪಿ ಸದಸ್ಯ ಸಿ.ಟಿ. ರವಿಅವರ ವಿರುದ್ಧ ದೂರು ನೀಡಿದ್ದಾರೆ.

ಇದರ ಬೆನ್ನಲ್ಲಿಯೇ ಸಭಾಪತಿ ಬಸವರಾಜ ಹೊರಟ್ಟಿ ಅವರು ಸದನದ ಆಡಿಯೋ, ವಿಡಿಯೊ ಪರಿಶೀಲನೆಗೆ ಸೂಚಿಸಿದ್ದಾರೆ. ಇದೀಗ ಕಾರ್ಯದರ್ಶಿಯಿಂದ ಆಡಿಯೋ ವಿಡಿಯೋ ಪರಿಶೀಲನೆ ಮಾಡುತ್ತಿದ್ದಾರೆ. ಜೊತೆಗೆ, ಕಾಂಗ್ರೆಸ್‌ನಿಂದ ಸಿ.ಟಿ. ರವಿ ಅವರ ಅಮಾನತಿಗೆ ಸದನದಲ್ಲಿ ಆಗ್ರಹಿಸಲು ಸಿದ್ದತೆ ನಡೆಸಿದ್ದಾರೆ. ಕಲಾಪ ಆರಂಭವಾಗುತ್ತಿದ್ದಂತೆ ಅಮಾನತಿಗೆ ಆಗ್ರಹಿಸಲು ಕಾಂಗ್ರೆಸ್ ಸದಸ್ಯರು ಮನವಿ ಮಾಡಲಿದ್ದಾರೆ.

ಇದನ್ನೂ ಓದಿ: ನಮ್ಮ ಊರಿಗೆ ನಮ್ಮ ಶಾಸಕರು ಕಾರ್ಯಕ್ರಮಕ್ಕೆ ಸಿದ್ದು ಮೆಚ್ಚುಗೆ: ಪ್ರದೀಪ್‌ ಈಶ್ವರ್‌ಗೆ ಅಭಿನಂದಿಸಿದ ಸಿಎಂ

ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಸಿ.ಟಿ ರವಿ ಅವರು ಮಾತನಾಡಿ, 'ನಾನು ಆ ರೀತಿ ಪದ ಬಳಸಿಲ್ಲ. ನಾನು ಕಪೋಲ ಕಲ್ಪಿತ ಪ್ರಶ್ನೆಗಳಿಗೆ ಮಾತಾಡಲ್ಲ. ದಾಖಲೆ ಇದ್ದರೆ ತೆಗೆಯಿರಿ. ನಾನು ಆ ತರ ಪದ ಬಳಸಿಲ್ಲ. ನಾನು ಈ ವಿಚಾರದಲ್ಲಿ ಸ್ಪಷ್ಟವಾಗಿದ್ದೀನಿ. ನಾನು ಆ ತರ ಪದ ಬಳಸೇ ಇಲ್ಲ. ನಾನು ಅಂಬೇಡ್ಕರ್ ಅವರ ಬಗ್ಗೆ ಮಾತಾನಾಡುತ್ತಿದ್ದೆನು. ನಾನು ಹಾಗೇ ಮಾತಾಡಿಲ್ಲ, ದಾಖಲೆ ಇದ್ದರೆ ತೆಗೆಸಿ ಎಂದು ಸಿ.ಟಿ. ರವಿ ಅವರು ಹೇಳಿದ್ದಾರೆ.

ಸಿ.ಟಿ. ರವಿ ನನಗೆ 10 ಬಾರಿ ಪ್ರಾಸ್ಟೂ* ಎಂಬ ಪದ ಬಳಸಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ. ಸಹ ಸದಸ್ಯರ ಜೊತೆಗೆ ಬಂದು  ಹೊರಟ್ಟಿ ಅವರಿಗೆ ಲಕ್ಷ್ಮಿ ಹೆಬ್ಬಾಳ್ಕರ್ ದೂರು ನೀಡಿದ್ದಾರೆ. ಸಭಾಪತಿ ಹೊರಟ್ಟಿ ಅವರ ಚೇಂಬರ್‌ನಲ್ಲಿ ಕಾಂಗ್ರೆಸ್ ಸದಸ್ಯರು ಜಮಾಯಿಸಿದ್ದಾರೆ. ಸಭಾಪತಿ ಕೊಠಡಿಯೊಳಗೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಕೆಲವು ಕಾಂಗ್ರೆಸ್ ಸದಸ್ಯರಿದ್ದರೆ, ಕೊಠಡಿ ಹೊರಗೆ ಸಿ.ಟಿ. ರವಿ ಅವರು ನಿಂತುಕೊಂಡಿದ್ದು, ತಮ್ಮ ಮೇಲಿನ ಆರೋಪವನ್ನು ನಿರಾಕರಣೆ ಮಾಡಿದ್ದಾರೆ.

ಇದನ್ನೂ ಓದಿ: ಕಾವೇರಿ ರೀತಿ ಕೃಷ್ಣಾಗೆ ಹಣ ಸಿಕ್ತಿಲ್ಲ: ಬಸನಗೌಡ ಪಾಟೀಲ್ ಯತ್ನಾಳ್‌

Latest Videos
Follow Us:
Download App:
  • android
  • ios