ಸಿಎಂ ಸಿದ್ಧರಾಮಯ್ಯ ಸೆನ್ಸಿಟಿವ್ ವ್ಯಕ್ತಿ, ನಾಳೆ ರಾಜೀನಾಮೆ ಕೊಟ್ರೂ ಕೊಡಬಹುದು: ಅಶೋಕ್
ರಾಜ್ಯದಲ್ಲಿ ಕಾಂಗ್ರೆಸ್ ನಿರೀಕ್ಷೆ ಮಾಡಿದಷ್ಟು ಸೀಟ್ ಗೆಲ್ಲಲು ಸಾಧ್ಯವಾಗಿಲ್ಲ. ಇದರಿಂದ ಸಿಎಂ ಸಿದ್ಧರಾಮಯ್ಯ ಕೂಡ ಬೇಸರಗೊಂಡಿದ್ದಾರೆ. ಅವರು ಬಹಳ ಸೆನ್ಸಿಟಿವ್ ವ್ಯಕ್ತಿ. ಇದರಿಂದಾಗಿ ನಾಳೆಯೇ ಅವರು ರಾಜೀನಾಮೆ ಕೊಟ್ಟರೂ ಕೊಡಬಹುದು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಬೆಂಗಳೂರು (ಜೂ.4): ರಾಜ್ಯದ ಚುನಾವಣೆಯಲ್ಲಿ ರಾಜ್ಯದ ಜನ ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ಹೀನಾಯ ಸೋಲು ನೀಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ಬೆಂಬಲ ಸೂಚಿಸಿದ್ದಾರೆ. ಕರ್ನಾಟಕದ ನಾಲ್ಕು ವಿಭಾಗದಲ್ಲಿ 3 ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಹೈದರಾಬಾದ್ ಕರ್ನಾಟಕದಲ್ಲಿ ನಮಗೆ ಹಿನ್ನಡೆಯಾಗಿದೆ. ರಾಜ್ಯದಲ್ಲಿ ಬಿಜೆಪಿ ವೋಟು ಶೇ.46. ಎನ್‌ಡಿಎಗೆ 51.66 % ವೋಟ್ ಶೇರಿಂಗ್ ಬಂದಿದೆ 136 ಎಂಎಲ್ಎ ಇರುವ ಕಾಂಗ್ರೆಸ್ ಸರ್ಕಾರಕ್ಕೆ ಶೇ. 45.43ರಷ್ಟು ವೋಟ್ ಶೇರ್ ಬಂದಿದೆ. ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಯೋಗ್ಯತೆ ಇದರಲ್ಲೇ ಗೊತ್ತಾಗುತ್ತಿದೆ. ಈ ಬಾರಿ ಡಬಲ್ ಡಿಜಿಟ್ ದಾಟುತ್ತೇವೆ ಅಂತಾ ಸಿಎಂ ಹೇಳ್ತಾ ಇದ್ರು. ಡಿಸಿಎಂ ನನ್ನದೇ ಸ್ಟ್ರಾಟರ್ಜಿ ಅನ್ನುತ್ತಿದ್ರು ಆದ್ರೆ ಏನು ಆಗಲಿಲ್ಲ. ದೇಶದಲ್ಲಿ ಕಾಂಗ್ರೆಸ್ ಈ ಬಾರಿ ಶೇ. 21.56 ವೋಟ್ ಶೇರ್ ಪಡೆದಿದೆ. ರಾಜೀವ್ ಗಾಂಧಿ ನಂತರ ಕಾಂಗ್ರೆಸ್ ಮೂರು ಡಿಜಿಟ್ ಗೆ ಹೋಗಲೇ ಇಲ್ಲ. 120 ವರ್ಷಗಳ ಕಾಂಗ್ರೆಸ್ ತ್ರಿಬಲ್ ಡಿಜಿಟ್ ಅಂಕಿ ಪಡೆಯೋದಕ್ಕೆ ವಿಫಲರಾಗಿದ್ದಾರೆ.
ಇನ್ನು ಸಿದ್ದರಾಮಯ್ಯ ಅವರು 18 ರಿಂದ 20 ಸ್ಥಾನ ಗೆಲ್ಲುತ್ತೇವೆ ಎಂದಿದ್ದರು. ಡಿಕೆಶಿ 20 ಕ್ಕಿಂತ ಹಚ್ಚು ಸ್ಥಾನ ಗೆಲ್ಲುತ್ತೇವೆ ಎಂದಿದ್ದರು. ಆದರೆ, ಇಂದು ಅವರ ಮಾತು ಸುಳ್ಳಾಗಿದೆ. ಸಿಎಂ ತವರು ಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್ ಬಂದಿದೆ. ಸಿಎಂ ಎಕ್ಸಾಂನಲ್ಲಿ ಸೋತಿದ್ದಾರೆ. ಡಿಸಿಎಂ ತವರು ಕ್ಷೇತ್ರದಲ್ಲಿ ಹೀನಾಯ ಸೋಲು ಕಂಡಿದ್ದಾರೆ. ಡಾ. ಮಂಜುನಾಥ್ ಅವರು ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಹಾಗಿದ್ದರೂ ಬಹು ಮತದಿಂದ ಗೆಲುವು ಸಾಧಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ತುಂಬಾ ಸೆನ್ಸಿಟಿವ್. ಸಿಎಂ ಸಿದ್ದರಾಮಯ್ಯ ಅವರು ನಾಳೆ ರಾಜೀನಾಮೆ ಕೊಡುತ್ತಾರೆ ಅನಿಸುತ್ತೆ. ನಾಳೆ ಬೆಳಿಗ್ಗೆ ಪತ್ರಿಕಾಗೋಷ್ಠಿ ಕರೆದು ರಾಜೀನಾಮೆ ಕೊಟ್ಟರು ಕೊಡಬಹುದು ಎಂದು ಹೇಳಿದ್ದಾರೆ.
ಚುನಾವಣೆಯ ಮೊದಲ ಹಂತದಲ್ಲೇ ಬಿಜೆಪಿ ವಾಶ್‌ಔಟ್, ಉತ್ತರ ಪ್ರದೇಶದಲ್ಲಿ ರಜಪೂತರ ಸಿಟ್ಟು!
ಮೋಸ ವಂಚನೆಯಿಂದ 2 ಸಾವಿರ ಕೊಡುತ್ತೇವೆ ಅಂದಿದ್ದು ಬೋಗಸ್. ಬಿಜೆಪಿಗೆ ಮಾನ- ಮರ್ಯಾದೆ ಇದ್ಯಾ ಎಂದು ಕೇಳುತ್ತಿದ್ದರು. ಈಗ ನಿಮ್ಮ ಮಾನ ಮರ್ಯಾದೆಯೇ ಹೋಗಿದೆ. ಹಾಸನದಲ್ಲಿ ಪ್ರಜ್ವಲ್ ರೇವಣ್ಣರನ್ನು ಬಿಟ್ಟು ಬೇರೆ ಅವರಿಗೆ ಟಿಕೆಟ್ ಕೊಟ್ಟಿದ್ದರೆ. ಹಾಸನ ಕೂಡ ನಾವೇ ಗೆಲ್ಲುತ್ತಿದ್ದೆವು. ಬಿಜೆಪಿ ದೇಶದಲ್ಲಿ 240 ಸೀಟ್ ಗೆದ್ದಿದೆ. ಕಾಂಗ್ರೆಸ್ ಕೇವಲ 98 ಸೀಟ್ ಗೆದ್ದಿದೆ. ಆದರಿಂದ ನಮಗೆ ಸರ್ಕಾರ ರಚನೆ ಮಾಡುವ ಅರ್ಹತೆ ಇದೆ. ಮುಸ್ಲಿಮರನ್ನು ತಲೆ ಮೇಲೆ ಕೂರಿಸಿಕೊಂಡಿದ್ದೆ ಇವತ್ತು ನಿಮ್ಮ ಸೋಲಿಗೆ ಕಾರಣ. ನಿಮಗೇನಾದರೂ ಗೌರವ ಮತ್ತು ನೈತಿಕತೆ ಇದ್ರೆ ಸಿಎಂ ರಾಜೀನಾಮೆ ಕೊಡಬೇಕು. ಸಿಎಂ ರಾಜೀನಾಮೆಗೆ ಒತ್ತಾಯ ಮಾಡುತ್ತೇನೆ ಎಂದು ಅಶೋಕ್ ಹೇಳಿದ್ದಾರೆ.
ಎಂಎಲ್‌ಎ ಎಲೆಕ್ಷನ್‌ನಲ್ಲಿ ಸೋತಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ 'ಎಂಪಿ'ಯಾಗಿ ಆಯ್ಕೆಯಾಗಿದ್ದು ಹೇಗೆ?